ಕೈಮಗ್ಗ ನೇಕಾರರಿಗೆ ಮಾಸಿಕ ಪಿಂಚಣಿ , ಕೇಂದ್ರದ ನೇಕಾರ ಸಮ್ಮಾನ ಯೋಜನೆ, ಅನೇಕ ಬೇಡಿಕೆಗಳಿಗಾಗಿ ಸಚಿವರಿಗೆ ಮನವಿ
ಕೈಮಗ್ಗ ನೇಕಾರರಿಗೆ ಮಾಸಿಕ ಪಿಂಚಣಿ , ಕೇಂದ್ರದ ನೇಕಾರ ಸಮ್ಮಾನ ಯೋಜನೆ, ಅನೇಕ ಬೇಡಿಕೆಗಳಿಗಾಗಿ ಸಚಿವ ದರ್ಶನಾಪುರ್ ಅವರಿಗೆ ಮನವಿ
ಕಲ್ಯಾಣ ಕರ್ನಾಟಕ ಈ ಪ್ರದೇಶ ಮೈಸೂರು ರಾಜ್ಯದ ಭಾಗವಾದ ಕಾಲದಲ್ಲಿ ಮತ್ತು ನಿಜಾಮ ಸರಕಾರ ತೊಲಗಿಸಲು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಸ್ವದೇಶಿ ಚಳುವಳಿಗಾರರೆ, ಹುಟ್ಟು ಹಾಕಿದ ಮೊದಲ ಹತ್ತಿ ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟಗಾರರ ಸಹಕಾರ ಸಂಘ
1948 ರಲ್ಲಿ ಜನ್ಮ ತಾಳಿ ಮತ್ತೆ 1977-78 ರಲ್ಲಿ ರಾಜ್ಯ ಸರ್ಕಾರದ ಮಾನ್ಯತೆ ಪಡೆದ ಕೈಮಗ್ಗ ನೇಕಾರರ ಸಂಘವೇ, ಇಂದು ಆಳಂದ ತಾಲೂಕು ಮಾದನ ಹಿಪ್ಪರಗಾದಲ್ಲಿ ಜೀವಂತವಾಗಿ ಉಳಿದ ಏಕೈಕ ಕೈಮಗ್ಗ ನೇಕಾರರ ಸಹಕಾರ ಸಂಘ, ನೂತನವಾಗಿ ಆಯ್ಕೆಗೊಂಡ ಕ್ರಿಯಾಶೀಲ ರೈತ ಹಾಗೂ ನೇಕಾರ ಮುಖಂಡರಾದ ಶ್ರೀ ಗುರುನಾಥ ಸೊನ್ನದ ರವರ ನೇತೃತ್ವದಲ್ಲಿ ಅಭೂಧ್ಯಯ ಹೊಂದಲು ಮತ್ತೆ ಎದ್ದು ನಿಂತಿದೆ, ಇತ್ತೀಚಿಗೆ ದಿ. 7.8.24 ರಂದು ಕನ್ನಡ ಭವನದಲ್ಲಿ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಸಂದರ್ಭದಲ್ಲಿ ಸರ್ಕಾರದ ಮಾನ್ಯ ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ಯಮದ ಸಚಿವರಾದ ಶರಣಬಸಪ್ಪ ದರ್ಶನಾಪೂರ್ ರವರಿಗೆ ಮನವಿ ಸಲ್ಲಿಸಿ ಕೋರಿದ್ದರು, ಇಂದು, (25.8.24) ಕಲಬುರಗಿಯಲ್ಲಿರುವ ಸಚಿವರ ಗೃಹ ಕಚೇರಿಗೆ ಸಂಘದ ಪಧಾದಿಕಾರಿಗಳು, ಹಾಗೂ ನೇಕಾರ ಸಲಹೆಗಾರರ ನಿಯೋಗದೊಂದಿಗೆ ಭೇಟಿ ನೀಡಿ, ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದಲ್ಲಿ ಕಾರ್ಯಸೂಚಿಯಲ್ಲಿ ಮಂಡಿಸಿ, ಶೀಘ್ರದಲ್ಲಿ ಈಡೇರಿಸಲು ಹಕ್ಕೊತ್ತಾಯಿಸಲಾಯಿತು.
1. ಹಿರಿಯ ಕೈಮಗ್ಗ ನೇಕಾರರಿಗೆ ಮಾಸಿಕ ಪಿಂಚಣಿ ರೂಪದಲ್ಲಿ 5000/- ಮತ್ತು ಕೇಂದ್ರದ ನೇಕಾರ ಸಮ್ಮಾನ ಯೋಜನೆಯಡಿ 5000/- ಹಾಗೂ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಯೋಜನೆ ಅಡಿ 1000/- ಹೀಗೆ ಒಟ್ಟು ಮಾಸಿಕ 11000/- ದೊರಕುವಂತೆ ಕ್ರಮ ವಹಿಸಲು, 2.ವಸತಿ ರಹಿತ ನೇಕಾರರಿಗೆ ವಸತಿ ಯೋಜನೆ ರೂಪಿಸಿ, ಮನೆ ಕಟ್ಟಿಸಿಕೊಂಡು ಉಪ ಜೀವನ ಸಾಗಿಸಲು ಅನುಕೂಲ ವಾಗುವ ರೀತಿಯಲ್ಲಿ ವಿಶೇಷ ವಸತಿ ಯೋಜನೆ ಪ್ರತ್ಯೇಕವಾಗಿ ರೂಪಿಸಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು 3. ಕೈಮಗ್ಗ ಉಳಿಸಿಲು ಮತ್ತು ಮುಂದೆವರೆಸಲು ವಿಮಾ ಯೋಜನೆ ಜಾರಿ ಗೊಳಿಸಬೇಕು. 4 ವಿಶೇಷವಾಗಿ ರಾಜ್ಯದಲ್ಲಿಯೇ ಒಂದು ಮಾದರಿ ನೇಕಾರರ ಭವನ ಕಟ್ಟಿಸಲು ಕ. ಕ ಅಭಿವೃದ್ಧಿ ವಿಶೇಷ ಯೋಜನೆಯಡಿ 51 ಕೋಟಿ ಹಣ ಬಿಡುಗಡೆ ಗೊಳಿಸಿ, ಶಂಕುಸ್ಥಾಪನೆ ಗೊಳಿಸಬೇಕು ಎಂದು ಲಿಖಿತ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಸಂಘದ ಕಾರ್ಯದರ್ಶಿಗಳಾದ ಲಕ್ಷ್ಮಣ ಪಾತಳೆ, 9 ಜನ ಕಾರ್ಯಕಾರಿಣಿ ಸದಸ್ಯರು ಜೊತೆಗೆ ಹಿರಿಯ ಸಲಹೆಗಾರರಾದ ಶಿವಲಿಂಗಪ್ಪಾ ಅಷ್ಟಗಿ, ನೇಕಾರ ಹೋರಾಟಗಾರ, ನ್ಯಾಯವಾದಿ ಜೆನವೇರಿ ವಿನೋದ ಕುಮಾರ, ಅಶೋಕ್ ಮುನ್ನೋಳಿ, ತೊಗಟವೀರ ಶ್ರೀನಿವಾಸ ಬಲಪೂರ್, ನಿತ್ಯಾನಂದ ಬಂಡಿ, ಸಿದ್ಧಾರೂಢ ಧನ್ನಾ ಇತರರು ಪಾಲಗೊಂಡಿದ್ದರು.