ಸಾಧನೆಗೆ ಸತತ ಶ್ರದ್ದೆ ಅಗತ್ಯ: ಬಿರಾದಾರ
ವೀರಣ್ಣ ಕುಂಬಾರ ಸ್ಮರಣೆ ಕಾಯಕ್ರಮ
ಸಾಧನೆಗೆ ಸತತ ಶ್ರದ್ದೆ ಅಗತ್ಯ: ಬಿರಾದಾರ
ಭಾಲ್ಕಿ: ಹುಟ್ಟು ಸಾವುಗಳ ಮಧ್ಯದಲ್ಲಿ ಬರುವ ಜೀವನದಲ್ಲಿ ಸಾಧನೆ ಮಾಡಬೇಕಾದರೆ ಶ್ರದ್ದೆ, ಶ್ರಮ ಮತ್ತು ಶಿಸ್ತಿನ ಅಗತ್ಯವಿದೆ. ಇಂಥ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿದ್ದವರು ಸಾಹಿತಿ ವೀರಣ್ಣ ಕುಂಬಾರ ಎಂದು ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ ಬಿರಾದಾರ ನುಡಿದರು. ಭಾಲ್ಕಿಯ ಸದ್ಗುರು ವಿದ್ಯಾಲಯದಲ್ಲಿ ಶಬನಮ್‌ಎಜ್ಯುಕೇಶನ್ವಾರಿಟೇಬಲ್ಮಸ್ಟ್‌ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ವೀರಣ್ಣ ಕುಂಬಾರ ಬದುಕು ಬರಹ ಕುರಿತ ಚಿಂತನ ಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿದರು.
ವೀರಣ್ಣ ಕುಂಬಾರರು ಅಧುನಿಕ ವಚನಕಾರ, ಕವಿ, ಲೇಖಕ, ಸಂಪಾದಕರಾಗಿ ಜಿಲ್ಲೆಯಲ್ಲಿ ಉತ್ತಮ ಹೆಸರನ್ನು ಮಾಡಿದ್ದರೆಂದು ಸ್ಮರಿಸಿಕೊಂಡರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಮಾತನಾಡಿ, ಸಾಧನೆ ಮಾಡದೇ ಸತ್ತರೆ ಸಾವಿಗೂ ಅವಮಾನ ಎನ್ನುವಂತೆ ಪ್ರತಿಯೊಬ್ಬ ಜೀವಿಯು ಸತ್ಯಶುದ್ಧ ಕಾಯಕದಿಂದ ಬದುಕು ಕಟ್ಟಿಕೊಳ್ಳಬೇಕು ಎಂದರು. ಟ್ರಸ್ಟ್ ಅಧ್ಯಕ್ಷೆ ಡಾ. ಎಂ. ಮುಕ್ಕುಂಬಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಸೋಮನಾಥ ಮುದ್ದಾ, ಶ್ರೀದೇವಿ ಶಿವಪ್ರಕಾಶ ಕುಂಬಾರ, ಸದ್ಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಕ್ಷಯಕುಮಾರ ಮುದ್ದಾ, ಪ್ರಭುಲಿಂಗ ಕುಂಬಾರ ಮುಂತಾದವರು ಮಾತನಾಡಿದರು. ಕನ್ಯಾಕುಮಾರಿ ಯಾಲಾ ಸ್ವಾಗತಿಸಿದರು. ಗೀತಾ ನಾಟಿಕಾರ ನಿರ್ವಹಿಸಿದರು. ಸುಷ್ಮತಾ ಸಹಾನೆ ವಂದಿಸಿದರು.
