ಪ್ರಾಚೀನ ಜೈನ ಸಾಹಿತ್ಯ ಮಹಿಳೆ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ
ಪ್ರಾಚೀನ ಜೈನ ಸಾಹಿತ್ಯ ಮಹಿಳೆ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ
ಕಲಬುರಗಿ: ಜೈನ ಸಾಹಿತ್ಯ ಅತ್ಯಂತ ಸಮೃದ್ಧವಾದುದು. ಈ ಸಾಹಿತ್ಯ ಭೂಗೋಳ, ವಿಜ್ಞಾನ, ಭೌತಶಾಸ್ತ್ರ, ಗಣಿತ ಸೇರಿದಂತೆ ಅನೇಕ ಪ್ರಕಾರದ ಅಧ್ಯಯನ ಯೋಗ್ಯ ವಿಷಯಗಳನ್ನು ಒಳಗೊಂಡಿದೆ. ಜೈನ ಮಹಿಳೆಯರು ಅತೀತ ವ್ಯಕ್ತಿತ್ವದವರು ಅವರ ಗುಣಗಳಿಂದಲೇ ಅವರನ್ನು ಗುರುತಿಸಬಹುದು ಎಂದು ಸೊಲ್ಲಾಪುರದ ವಿದ್ವಾಂಸಕಿ ಡಾ. ಸುಜಾತಾ ಶಾಸ್ತ್ರಿ ಹೇಳಿದರು.
ಆಳಂದ ಪಟ್ಟಣದ ಎಚ್‌ಕೆಇ ಪ್ರತಿಷ್ಠಿತ ಎ.ವ್ಹಿ.ಪಾಟೀಲ ಪದವಿ ಮಹಾವಿದ್ಯಾಲಯದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಜೈನ ಸಾಹಿತ್ಯ, ಸಂಸ್ಕೃತಿ ಅಧ್ಯಯನ ಕೇಂದ್ರ ಹಾಗೂ ಎ.ವ್ಹಿ.ಪಾಟೀಲ ಮಹಾವಿದ್ಯಾಲಯದ ಆಶ್ರಯದಲ್ಲಿ :ಪ್ರಾಚೀನ ಜೈನ್ ಸಾಹಿತ್ಯ ಮಹಿಳೆ' ಕುರಿತಾದ ರಾಷ್ಟ್ರೀಯ ವಿಚಾರ ಸಂಕಿಣದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಾಚೀನ ಕಾಲದಲ್ಲಿ ಜೈನ್ ಸಾಹಿತ್ಯ ಮತ್ತು ಮಹಿಳೆ ಪೌರಾಣಿಕ ಮತ್ತು ಐತಿಹಾಸಿಕವಾಗಿಯೂ ಅವರು ಅಚ್ಚಳಿಯದ ಸಾಹಿತ್ಯ ಸೇವೆ ಮಾಡಿದ್ದಾರೆ. ಮೊದಲ ತೀರ್ಥಂಕರ ವೃಷಭನಾಥರು ಮೊದಲು ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರು. ನಂತರದಲ್ಲಿ ಗಂಡು ಮಕ್ಕಳಿಗೆ ಶಿಕ್ಷಣ ಕೊಡಿಸಿದರು ಇದು ಜೈನ ಸಮುದಾಯವು ಮಹಿಳಾ ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ತೋರಿಸುತ್ತದೆ. ಅಲ್ಲದೇ ಜೈನ ಧರ್ಮದಲ್ಲಿ ಮಹಿಳೆಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು ಎಂದು ಅವರು ಪ್ರತಿಪಾದಿಸಿದರು.
ಧರ್ಮದ ಪ್ರಗತಿಗೆ ಮಹಿಳೆಯೇ ಆಧಾರ ಎಂದು ಜೈನ ಧರ್ಮ ಹೇಳುತ್ತದೆ. ಭಗವಾನ್ ಋಷಭದೇವರು ಮನುಕುಲಕ್ಕೆ ತಮ್ಮ ಜೀವನ ನಿರ್ವಹಣೆಯನ್ನು ಕಲಿಸಿದ್ದರು. ಅವರ ಮಗಳು ಬ್ರಾಹ್ಮಿ ಹಲವಾರು ಲಿಪಿಗಳನ್ನು ಅಧ್ಯಯನ ಮಾಡಿದ್ದಳು ಮತ್ತು ಅವಳ ಹೆಸರಿನ ಲಿಪಿಯನ್ನು - ಬ್ರಾಹ್ಮಿ ಭಾರತದ ಅತ್ಯಂತ ಪ್ರಾಚೀನ ಲಿಪಿಗಳಲ್ಲಿ ಒಂದೆoದು ಪರಿಗಣಿಸಲಾಗಿದೆ. ಅವರ ಇನ್ನೊಬ್ಬ ಮಗಳು ಸುಂದರಿ ಗಣಿತದಲ್ಲಿ ಪರಿಣತಿಯನ್ನು ಗಳಿಸಿದ್ದಳು.
ಜೈನ ಸಮಾಜದಲ್ಲಿ ಮಹಿಳೆಗೆ, ತಾಯಿಗೆ ಗೌರವದ ಸ್ಥಾನ ನೀಡಲಾಗಿದೆ. ತೀರ್ಥಂಕರನ ತಾಯಿಗೆ ನೀಡಿದ ಗೌರವವು ಪ್ರಸಿದ್ಧವಾಗಿದೆ ಮತ್ತು ಹಲವಾರು ಜೈನ ಗ್ರಂಥಗಳಲ್ಲಿ ವಿವರಿಸಲಾಗಿದೆ. ಚಂದನಬಾಲಾ ಗುಲಾಮ ಮಹಿಳೆಯರನ್ನು ಸಮಾಜದ ಸಾಮಾನ್ಯ ಸದಸ್ಯರನ್ನಾಗಿ ಸ್ವೀಕರಿಸುವುದನ್ನು ಸಂಕೇತಿಸುತ್ತದೆ. ಭಗವಾನ್ ಮಹಾವೀರರು ಅವಳಿಂದ ಆಹಾರವನ್ನು ಸ್ವೀಕರಿಸಿದರು ಮತ್ತು ಅವಳ ಬಂಧನದಿoದ ಅವಳನ್ನು ಮುಕ್ತಗೊಳಿಸಿದರು ಎಂದರು.
ಜೈನ ಧರ್ಮ ವಿಶ್ವದ ಅನಂತ ಸತ್ಯಗಳ ಮೇಲೆ ಆಧಾರಿತವಾದ ಧರ್ಮ. ಪಾರಂಪರಿಕ ನಂಬಿಕೆಯ ಅನುಸಾರ, ಋಷಭದೇವ ಈ ಸತ್ಯಗಳನ್ನು ಮೊದಲು ಅರಿತವ. ಈ ಅರಿವನ್ನು ಪಡೆದವರು ತೀರ್ಥಂಕರರೆAದು ಕರೆಯಲ್ಪಡುತ್ತಾರೆ. ಋಷಭದೇವನ ನಂತರ ಬಂದ 23 ತೀರ್ಥಂಕರರಲ್ಲಿ ಕೊನೆಯವ ವರ್ಧಮಾನ ಮಹಾವೀರ.
ಜೈನ ಎಂದರೆ 'ಜೀನ'ಎಂಬ ಶಬ್ಧದಿಂದ ಉತ್ಪತ್ತಿಯಾದ ಶಬ್ದವಾಗಿದ್ದು, ಜೀನ' ಎಂದರೆ 'ಇಂದ್ರಿಯಗಳನ್ನು ಗೆದ್ದವನು' ಎಂದು ಹೇಳಬಹುದು. ಕರ್ಮದ ಕಟ್ಟನ್ನು ಮುರಿದು ಸಂಸಾರವನ್ನು ದಾಟಿ ಮುಕ್ತಿಯನ್ನು ಪಡೆದವ ಜೀವರಿಗೆ 'ಜಿನರು' ಎಂದು ಹೆಸರು. ಜಿನರಿಂದ ಉಪದೇಶಿ ಸಲ್ಪಟ್ಟ ಧರ್ಮವೇ ಜೈನಧರ್ಮ ಎಂದು ಅವರು ವ್ಯಾಖಾನಿಸಿದರು.
ಜೈನ ಧರ್ಮದಲ್ಲಿ ಸತ್ಯ, ನೀತಿ, ಉತ್ತಮ ನಡವಳಿಕೆಗಳಿಗೆ ಹೆಚ್ಚಿನ ಪ್ರಧಾನ್ಯತೆ ಇದೆ. ಅಹಿಂಸೆ ಮತ್ತು ದಯೆ ಇವುಗಳು ಮೂಲ ಸೂತ್ರಗಳು.ಜೈನ ದರ್ಶನದ ಪ್ರಕಾರ ಜಗತ್ತು ಮತ್ತು ಜೀವ (ಆತ್ಮ) ಅನಾದಿಯಾದುದು. ಜೀವರುಗಳ ಹುಟ್ಟು, ಸಾವು, ಸುಖ, ದು:ಖಗಳಿಗೆ ಕರ್ಮವೇ ಕಾರಣವಾಗಿದ್ದು ಕರ್ಮವೂ ಅನಾದಿಯಾಗಿರುತ್ತದೆ. ಆದರೆ ರತ್ನತ್ರಯಗಳ ಸಾಧನೆಯ ಸಹಾಯದಿಂದ ಕರ್ಮದ ಕಟ್ಟು(ಸಂಸಾರ ಬಂಧ)ಗಳಿoದ ಮುಕ್ತರಾಗಬಹುದು.
ಇದರೊಂದಿಗೆ ಜೈನರು ಪಾಲಿಸಬೇಕಾದ ಪಂಚಾಣು ವ್ರತಗಳನ್ನು ಹೇಳಲಾಗಿದೆ. ಅವುಗಳು ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ. ಜೈನ ಧರ್ಮ ದೇವರನ್ನು ಜಗತ್ತಿನ ಕರ್ತೃ ಎಂದು ಒಪ್ಪುವುದಿಲ್ಲವಾದರೂ ಕರ್ಮಬಂಧಗಳಿAದ ಮುಕ್ತರಾದ ಪಂಚ ಪರಮೇಷ್ಠಿಗಳ ಪೂಜೆ,ಆರಾಧನೆ ನಡೆಯುತ್ತದೆ.
ಜೈನಧರ್ಮವು ಅತ್ಯಂತ ಪ್ರಾಚೀನವಾದುದು. ಬೌದ್ಧ ಧರ್ಮಕ್ಕಿಂತ ಹಿಂದಿನದು. ಈ ಧರ್ಮದ ಆದಿ (ಮೊದಲನೆಯ) ತೀರ್ಥಂಕರ ಆದಿನಾಥ. ವರ್ತಮಾನ ಕಾಲದ ಇಪ್ಪತ್ನಾಲ್ಕು ತೀರ್ಥಂಕರರಲ್ಲಿ ಮಹಾವೀರನು ಇಪ್ಪತ್ನಾಲ್ಕನೆಯ ತೀರ್ಥಂಕರ. ಇವನು ಗೌತಮ ಬುದ್ಧನ ಸಮಕಾಲೀನನಾಗಿದ್ದು ಜೈನ ಧರ್ಮವನ್ನು ಪ್ರಖ್ಯಾತಗೊಳಿಸಿದನು. ಒಂದು ಕಾಲದಲ್ಲಿ ಇದು ರಾಜ ಧರ್ಮವಾಗಿದ್ದು, ೮ನೇ ಶತಮಾನದ ನಂತರ ಅವನತಿ ಹೊಂದುತ್ತಾ ಬಂದಿತು ಎಂದರು.
ಪ್ರಸ್ತುತ, ಭಾರತದಲ್ಲಿ ಜೈನಧರ್ಮೀಯರು ಅಲ್ಪ ಸಂಖ್ಯಾತರಾಗಿದ್ದು ಕೇವಲ ೪೨ ಲಕ್ಷ ಜನರಿದ್ದಾರೆಂದು (ಜನಗಣತಿ ೨೦೦೧) ಅಂದಾಜು ಮಾಡಿದೆ.ಈ ಧರ್ಮದ ಕೆಲವರು ಬೆಲ್ಜಿಯಮ್, ಕೆನಡ, ಹಾಂಗ್ ಕಾಂಗ್, ಜಪಾನ್, ಸಿಂಗಾಪುರ, ಯು.ಎಸ್.ಎ. ಗಳಿಗೆ ವಲಸೆ ಹೋಗಿದ್ದಾರೆ. ಇವರಲ್ಲಿ ಅಕ್ಷರಸ್ಥರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ಎಂದು ಹೇಳಿದರು.
ಆರಂಭದಲ್ಲಿ ವಿಚಾರ ಸಂಕಿರಣವನ್ನು ಎಚ್‌ಕೆಇ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಶಶೀಲ ಜಿ. ನಮೋಶಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಪಾಲ್ಗೊಂಡಿದ್ದರು.
ಎಚ್‌ಕೆಇ ನಿರ್ದೇಶಕ ನಾಗಣ್ಣ ಘಂಟಿ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಡಾ. ಬೈರಮಂಗಲ ರಾಮೇಗೌಡ, ಕಾರ್ಯಕ್ರಮ ಹಂಪಿ ವಿವಿ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ತಾರಿಹಳ್ಳಿ ಜನುಮಂತಪ್ಪ, ದೈಹಿಕ ನಿರ್ದೇಶಕ ಡಾ.ಎಂ.ಎಸ್. ಪಾಸೋಡಿ ವಹಿಸುವರು. ಡಾ. ಕಲಬುರಗಿ ವಿವಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ. ಎಚ್.ಟಿ. ಪೋತೆ ಡಾ. ಸೂರ್ಯಕಾಂತ, ಪ್ರೊ. ಸಂಜಯ ಪಾಟೀಲ, ಡಾ. ಚಂದ್ರಕಲಾ ಬಿದ್ರಿ, ಡಾ. ಶ್ರೀಶೈಲ ನಾಗರಾಳ ಘೋಷ್ಠಿಯಲ್ಲಿ ಮಾತನಾದರು. ಪ್ರಾಚಾರ್ಯ ಡಾ. ಎಸ್.ಎಚ್. ಹೊಸಮನಿ ಸ್ವಾಗತಿಸಿದರು.