ಭಕ್ತ ಕನಕದಾಸರ ಜಯಂತಿಗೆ ಪೂರ್ವಭಾವಿ ಸಭೆ – ಜೇವರ್ಗಿ

ಭಕ್ತ ಕನಕದಾಸರ ಜಯಂತಿಗೆ ಪೂರ್ವಭಾವಿ ಸಭೆ – ಜೇವರ್ಗಿ

ಭಕ್ತ ಕನಕದಾಸರ ಜಯಂತಿಗೆ ಪೂರ್ವಭಾವಿ ಸಭೆ – ಜೇವರ್ಗಿ

ಜೇವರ್ಗಿ: ಭಕ್ತ ಕನಕದಾಸರ ಜಯಂತಿಯನ್ನು ಪ್ರಯುಕ್ತವಾಗಿ ನವೆಂಬರ್ 8, 2025 ರಂದು ನಡೆಯಲಿರುವ ಕಾರ್ಯಕ್ರಮದ ತಯಾರಿ ಹಿನ್ನೆಲೆಯಲ್ಲಿ ಜೇವರ್ಗಿ ಪಟ್ಟಣದ ಶ್ರೀ ಗುರು ಮಾಳಿಂಗರಾಯ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಜೇವರ್ಗಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಸೈಬಣ್ಣ ಪೂಜಾರಿ ದೊಡ್ಮಣಿ ವಹಿಸಿದ್ದರು. ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, “ಕನಕದಾಸರು ಸಮಾನತೆ, ಭಕ್ತಿ ಹಾಗೂ ಮಾನವೀಯ ಮೌಲ್ಯಗಳ ಸಾರ ನೀಡಿದ ಮಹಾನ್ ದಾಸಸಾಹಿತಿ. ಅವರ ತತ್ವಗಳನ್ನು ಯುವಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಜಯಂತಿ ಆಚರಣೆಯನ್ನು ಸಾರ್ಥಕಗೊಳಿಸಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಶರಣಗೌಡ ಸರಡಗಿ, ಲಿಂಗಣ್ಣ ಪೂಜಾರಿ ಬಂಡಾರಿ, ಸಿದ್ದಣ್ಣ ಮಯೂರ್, ವೀರಣ್ಣ ಪೂಜಾರಿ ಅಂಕಲಗಿ, ಶರಣಗೌಡ ದಳಪತಿ, ಲಕ್ಷ್ಮಣ ಪೂಜಾರಿ, ಪಿರಪ್ಪ ಪೂಜಾರಿ, ಭೀಮರಾಯ ಗೌಡ, ಮಲ್ಲಿಕಾರ್ಜುನ್ ಸರ್., ನಿಂಗಣ್ಣ ಪೂಜಾರಿ ರದ್ದೇವಾಡಗಿ, ಮಾಳು ಪೂಜಾರಿ ಹಿಪ್ಪರಗಿ, ರಾಜು ಮುತ್ತಕೊಡ, ಭೀಮಶಂಕರ್ ಬಿಲ್ಲಾಡ್ ಹಾಗೂ ಸಿದ್ದಲಿಂಗ ಎಚ್. ಪೂಜಾರಿ ಹಾಲಗಡ್ಲಾ ಸೇರಿದಂತೆ ಹಲವಾರು ಮುಖಂಡರು ಕಾರ್ಯಕ್ರಮದ ಸಂಯೋಜಕರಾಗಿ ಭಾಗವಹಿಸಿದರು.

ಸಭೆಯಲ್ಲಿ ಸಮಾಜದ ಅನೇಕ ಮುಖಂಡರು ಮಾತನಾಡಿ, ಭಕ್ತ ಕನಕದಾಸರ ಜೀವನ ತತ್ವಗಳನ್ನು ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವ ಅಗತ್ಯವನ್ನು ಒತ್ತಿಹೇಳಿದರು.

ಈ ಕುರಿತು ಮಾಹಿತಿಯನ್ನು ಸಮಾಜದ ಮುಖಂಡ ಸಿದ್ದಲಿಂಗ ಎಚ್. ಪೂಜಾರಿ ಹಾಲಗಡ್ಲಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

– ವರದಿ: ಜೇಟ್ಟೆಪ್ಪ ಎಸ್. ಪೂಜಾರಿ, ಜೇವರ್ಗಿ