ಡಾ. ಬಿ. ಆರ್.ಅಂಬೇಡ್ಕರ್ ಮಹಾವಿದ್ಯಾಲಯದಲ್ಲಿ ಕಾಲೇಜು ರಂಗ ತರಬೇತಿ ಶಿಬಿರಕ್ಕೆ ಚಾಲನೆ

ಡಾ. ಬಿ. ಆರ್.ಅಂಬೇಡ್ಕರ್ ಮಹಾವಿದ್ಯಾಲಯದಲ್ಲಿ ಕಾಲೇಜು ರಂಗ ತರಬೇತಿ ಶಿಬಿರಕ್ಕೆ ಚಾಲನೆ

ಡಾ. ಬಿ. ಆರ್.ಅಂಬೇಡ್ಕರ್ ಮಹಾವಿದ್ಯಾಲಯದಲ್ಲಿ ಕಾಲೇಜು ರಂಗ ತರಬೇತಿ ಶಿಬಿರಕ್ಕೆ ಚಾಲನೆ

ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಮಹಾವಿದ್ಯಾಲಯಲ್ಲಿ ಕಾಲೇಜು ರಂಗತರಬೇತಿ ಶಿಬಿರವು ರಂಗಾಯಣದ ನೂತನ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ ಅವರು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ಬುದ್ದ ಪುತ್ತಳಿಗೆ ಪುಷ್ಪವನ್ನು ಸಮರ್ಪಿಸಿ, ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಶಿಬಿರದ ನಿರ್ದೇಶಕ ಡಾ. ವಿಶ್ವರಾಜ ಪಾಟೀಲ್ ರವರು ನಾಟಕ ತರಬೇತಿ ಶಿಬಿರ ಆರಂಭವಾಗಿ ಒಂದು ವಾರವೇ ಕಳೆದಿದೆ. ಸುಮಾರು 20 ವಿದ್ಯಾರ್ಥಿಗಳನ್ನು ಈ ಶಿಬಿರದಲ್ಲಿ ್ಲಆಯ್ಕೆ ಮಾಡಲಾಗಿದೆ. ರಂಗ ವ್ಯಾಯಾಮ, ರಂಗಾಟಗಳು, ಆಶುವಿಸ್ತರಣೆ, ನೃತ್ಯ ಮಕ್ಕಳಿಂದ ಮಾಡಿಸಲಾಗುತ್ತಿದೆ. ಕನ್ನಡ ರಂಗಭೂಮಿಗೆ ಕಾಲೇಜು ರಂಗಭೂಮಿಯ ಕೊಡು ಅಪಾರವಾಗಿದೆ. ಅದರಲ್ಲೂ ಕಲಬುರಗಿ ರಂಗ ಭೂಮಿಯಲ್ಲಿ ಡಾ. ಬಿ.ಆರ್. ಅಂಬೇಡಕರ್ ಮಹಾವಿದ್ಯಾಲಯದ ಸೇವೆ ಗಣನೀಯವಾಗಿದೆ. ಕರ್ನಾಟಕ ನಾಟಕ ಅಕಾಡೆಮಿ ನೂತನ ಅಧ್ಯಕ್ಷರಾದ ಕೆ.ವಿನಾಗರಾಜ ಮೂರ್ತಿ ಯವರು ಅನೇಕ ಅದ್ಬುತ ಯೋಜನೆಗಳನ್ನು ಯುವಕರಿಗಾಗಿ ರೂಪಿಸಿದ್ದಾರೆ. ಅದರಲ್ಲಿ ಕಾಲೇಜು ರಂಗ ತರಬೇತಿ ಶಿಬಿರವೂ ಒಂದು. ಇದರ ಸದುಪಯೋಗವನ್ನು ನಮ್ಮ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. 

ಯಾಕೆಂದರೆ ನಾಟಕ ಉತ್ತಮವಾಗಿ ಮೂಡಿ ಬಂದಲ್ಲಿ ಬೆಂಗಳೂರಿನಲ್ಲಿಯೂ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗುವುದು ಎಂದು ನಾಟಕ ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ ಹಾಗೂ ಶಿಬಿರ ಯಶಸ್ವಿಯಾಗಲಿ ಎಂದು ದೂರವಾಣ ಯ ಮೂಲಕ ಶುಭ ಹಾರೈಸಿದ್ದಾರೆ ಎಂದು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.

ಉದ್ಘಾಟಕರಾಗಿ ಆಗಮಿಸಿದ ರಂಗಾಯಣದ ನಿರ್ದೇಶಕರಾದ ಡಾ. ಸುಜಾತ ಜಂಗಮಶೆಟ್ಟಿ ಯವರು ಕಾಲೇಜು ಮಕ್ಕಳ ಉತ್ಸಾಹ ಮತ್ತು ಶಿಸ್ತನ್ನುನೋಡಿ ಸಂತಸವ್ಯಕ್ತಪಡಿಸಿದರು.ನಮ್ಮದೇಹ, ಕೈ, ಕಾಲು, ಸೌಂದರ್ಯ ಎಲ್ಲವೂ ನಮ್ಮವಲ್ಲ. ಆದರೆ ನಮ್ಮೊಳಗಿನವ್ಯಕ್ತಿತ್ವ ದಿಂದ ಮಾತ್ರ ನಮ್ಮನು ಗುರುತಿಸಲು ಸಾಧ್ಯ, ಎತ್ತರಕ್ಕೆ ಬೆಳೆಯಲು ಸಾಧ್ಯ. ಅಂತಹ ವ್ಯಕ್ತಿತ್ವ ರೂಪಿಸುವುದು ರಂಗಭೂಮಿ ಎಂದರು. 

ಕಲೆ ಯಾವುದೋ ಬ್ಯೂಟಿ ಪಾರ್ಲರಿನಲ್ಲಿ ಹುಟ್ಟುವುದಿಲ್ಲ. ಅದು ಪ್ರತಿಭೆಯಿಂದ ಮಾತ್ರಸಾಧ್ಯ ಎಂದು ಅನೇಕರ ಉದಾಹರಣೆಗಳು ನೀಡಿದರು. ಮುಂದಿನ ದಿನಗಳಲ್ಲಿ ತಮ್ಮ ಕಾಲೇಜಿನೊಂದಿಗೆ ನಮ್ಮ ರಂಗಾಯಣವು ಇರುತ್ತದೆ ಎಂದರು. ನಾಟಕ ಅಕಾಡೆಮಿ ತಮ್ಮ ಕಾಲೇಜಿಗೆ ಉತ್ತಮ ನಿರ್ದೇಶಕನನ್ನು ಕೊಟ್ಟಿದೆ. ನಾಟಕದಲ್ಲಿ ್ಲಯೇಪಿ ಹೆಚ್.ಡಿ ಮಾಡಿದ್ದಾರೆ ಅಲ್ಲದೇ ಕಲಬುರಗಿ ರಂಗಭೂಮಿಯಲ್ಲಿ ಗಣನೀಯ ಸೇವೆಸಲ್ಲಿಸಿದ ಅನುಭವಿ ನಿರ್ದೇಶಕರೂ ಇದ್ದಾರೆ. ಅವರಿಂದ ಎಷ್ಟು ಕಲಿಯಲಿಕ್ಕೆ ಸಾಧ್ಯವೋ ಅಷ್ಟನ್ನೂ ಕಲಿಯಿರಿ ಎಂದುನಾಟಕ ಶಿಬಿರಕ್ಕೆ ಶುಭ ಹಾರೈಸಿದರು.

ಅಧ್ಕಕ್ಷತೆ ಸ್ಥಾನ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯಕುಮಾರ ರವರು ರಂಗ ಮಾಧ್ಯಮ ಪ್ರಭಾವಿ ಮಾಧ್ಯಮ. ನಾಟಕ ದಿಂದ ಅನೇಕರ ವ್ಯಕ್ತತ್ವವನ್ನು ಬದಲಿಸಿದೆ. ಸಮಾಜವನ್ನೆ ಬದಲಿಸುವಶಕ್ತಿ ರಂಗಭೂಮಿಗಿದೆ ಎನ್ನುತ್ತಾ ತಮ್ಮ ಬಾಲ್ಯ ವಸ್ಥೆಯಲ್ಲಿ ಅಭಿನಯಿಸಿದ ನಾಟಕಗಳ ಹಾಗೂ ನೋಡಿದ ನಾಟಕಗಳ ಮೆಲುಕುಹಾಕಿದರು. ನಾಟಕ ಅಕಾಡೆಮಿಯ ಈ ಯೋಜನೆ ಸ್ವಾಗತಾರ್ಹ ಮಕ್ಕಳಿಗೆ ಬರೀ ಓದು ಒಂದೆ ಮುಖ್ಯವಲ್ಲ. ಕಲೆ, ಸಾಹಿತ್ಯ, ಕ್ರಿಡೆಯಲ್ಲಿ ಭಾಗವಹಿಸುವುದರಿಂದ ಮನೋವಿಕಾಸದ ಜೊತೆಗೆ ಕ್ರಿಯಾಶೀಲಮನೋಭಾವ ಹೆಚ್ಚಾಗುತ್ತದೆ ಎಂದರು. 

ಖಂಡಿತ ನಮ್ಮ ಕಾಲೇಜಿನಿಂದ ಎಷ್ಟುಸಾಧ್ಯವೂ ಅಷ್ಟೂ ಸಹಕಾರ ನೀಡುತ್ತೇವೆ. ನಮ್ಮ ಕಾಲೇಜೀಗೆ ನಾಟಕ ತರಬೇತಿ ಮಾಡಲು ಅವಕಾಶ ಮಾಡಿ ಕೊಟ್ಟ ನಾಟಕ ಅಕಾಡೆಮಿ ಹಾಗೂ ಅಧ್ಯಕ್ಷರಾದ ಕೆ. ವಿ. ನಾಗರಾಜ ಮೂರ್ತಿಯವರಿಗೆ ಧನ್ಯವಾದಗಳು. ಅದೇ ರೀತಿ ಶಿಬಿರದ ನಿರ್ದೇಶಕರಾಗಿ ಆಗಮಿಸಿದ ಡಾ. ವಿಶ್ವರಾಜ ಪಾಟೀಲ ಅವರಿಗೆ ನಾಟಕ ತರಬೇತಿ ಶಿಬಿರ ಚೆನ್ನಾಗಿ ಆಗಲಿ ಎಂದು ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧ್ಯಾಪಕರಾದ ಡಾ. ವಸಂತ ನಾಸಿ, ಡಾ. ನಿರ್ಮಲಾ, ಹರ್ಷ ಹಾಗೂ ನಾಟಕದ ಸಹಾಯಕ ನಿರ್ದೇಶಕರಾದ ಉದಯಕುಮಾರ, ನೃತ್ಯ ತರಬೇತುದಾರರಾದ ಪಲ್ಲವಿ ಕುಲಕಣ ð, ಭಾಗ್ಯಶ್ರೀ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರೂಪಣೆ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಜ್ಯೋತಿ ನಿರ್ವಹಿಸಿದರು. ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿ ಕುಮಾರಿ ಪ್ರಿಯಾಂಕ ಅವರು ಎಲ್ಲರಿಗೂ ವಂದನೆಗಳು ಸಲ್ಲಿಸಿದರು.