ಅಂತರಂಗ ಅರುಹಿದಾಗ
ಅಂತರಂಗ ಅರುಹಿದಾಗ
ಮಹಿಳಾ ಸಂವೇದನೆಯ ಸಾಕ್ಷಿ ಪ್ರಜ್ಞೆಯಂತಿರುವ ಕ್ರಿಯಾಶೀಲ ವ್ಯಕ್ತಿತ್ವದ ಡಾ. ಪ್ರೇಮಾ ಅಪಚಂದ ಅಧ್ಯಯನಶೀಲರು. ಶಿಸ್ತು ಪರಿಶ್ರಮದ ಮೂಲಕ ವಿದ್ಯಾಭ್ಯಾಸ ಕೈಗೊಂಡು ಸಾಧನೆ ತೋರಿದವರು. ಮಹಿಳೆಯಾಗಿ ವಿದ್ಯೆಯ ಮಹತ್ವ ಅರಿತವರು. ಅನೇಕ ವಿಚಾರ ಸಂಕಿರಣಗಳು, ಸಮ್ಮೇಳನಗಳು, ಕಮ್ಮಟಗಳ ವೇದಿಕೆಗಳಲ್ಲಿ ತಮ್ಮ ಅಸ್ತಿತ್ವ ದಾಖಲಿಸಿರುವ ದಿಟ್ಟ ಮಹಿಳೆ. ಕರ್ನಾಟಕದ ಈಗಿನ ಕವಯಿತ್ರಿಯರಲ್ಲಿ ಪ್ರಮುಖ ಸ್ಥಾನ ಪಡೆದಿರುವ ಡಾ. ಪ್ರೇಮಾ ಅಪಚಂದ ಕನ್ನಡ ನಾಡು ನುಡಿಯ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡವರು. ಮಹಿಳಾ ಪರ ಕಾಳಜಿ ಹೊಂದಿರುವ ಇವರು 'ಅಂತರಂಗ ಅರುಹಿದಾಗ' ತಮ್ಮ ಲೇಖನಗಳ ಸಂಗ್ರಹಗಳಲ್ಲಿ ಅಂತರಂಗದ ಭಾವನೆಗಳಿಗೆ ಲೆಕ್ಕಣಿಕೆಯ ಸೊಬಗನ್ನು ಕೊಟ್ಟು ಮೌನಕ್ಕೆ ಬರಹದ ರೂಪ ಕೊಟ್ಟಂತೆಯೇ ಈ 'ಅಂತರಂಗ ಅರುಹಿದಾಗ' ಸಂಕಲನ ಕೃತಿಯ ವೈಶಿಷ್ಟ್ಯವಾಗಿದೆ. ಹಲವು ರಂಗಗಳಲ್ಲಿಯ ಮಹಿಳಾ ಸಂವೇದನೆಗಳು, ನೋವುಗಳು, ನಲಿವುಗಳು, ಸಮಾನತೆ ಹೀಗೆ ಹಲವು ಭಾವನೆಗಳಿಗೆ ಮಾತಿನ ರೂಪ ಕೊಟ್ಟಂತ್ತಿದೆ ಈ ಕೃತಿ.
ಹೆಣ್ಣೋಬ್ಬಳ ಆದರ್ಶವಾದ, ತನ್ನದೇ ವ್ಯಕ್ತಿತ್ವದ ಕಲ್ಪನೆ, ತಾನು ಸಾಧಿಸಬೇಕಾದ ಸಾಮರಸ್ಯ ಸಹಜತೆಗಳು ನಮ್ಮ ಈ ಸಂಪ್ರದಾಯಿಕ ಪರಿಸರದಲ್ಲಿ ಇನ್ನೂ ಕೇವಲ ವೈಚಾರಿಕ ನೆಲೆಯಲ್ಲಿಯೇ ಬದುಕಿವೆ. ಕೃತಿ ರೂಪದಲ್ಲಿ ಕಂಡುಕೊಳ್ಳುವುದು ಇನ್ನೂ ಕಷ್ಟದ ಕೆಲಸ. ಈ ಜಾಗೃತ ಜಗತ್ತಿನಲ್ಲಿ ಹೆಣ್ಣು ಸಾಧಿಸಬೇಕಾದುದು ಅಪಾರವಾಗಿದೆ.
ಈ ಪುಸ್ತಕವು ಬೆಂಗಳೂರಿನ ಸಿರಿವರ ಪ್ರಕಾಶನದಿಂದ 2020 ರಲ್ಲಿ ಪ್ರಕಟಗೊಂಡಿದ್ದು 106 ಪುಟಗಳನ್ನು ಹೊಂದಿರುವ ಪುಸ್ತಕದ ಬೆಲೆ 110 ರೂಪಾಯಿ ನಿಗದಿಪಡಿಸಲಾಗಿದೆ.
ಡಾ. ಶರಣಬಸಪ್ಪ ವಡ್ಡನಕೇರಿ