ಡಾ.ಬಸವರಾಜ ಕೊನೇಕ್ ಅವರಿಗೆ ರಾಷ್ಟ್ರಮಟ್ಟದ ಗೋಲ್ಡನ್ ಅವಾರ್ಡ್

ಡಾ.ಬಸವರಾಜ ಕೊನೇಕ್ ಅವರಿಗೆ ರಾಷ್ಟ್ರಮಟ್ಟದ ಗೋಲ್ಡನ್ ಅವಾರ್ಡ್
ನವ-ದೆಹಲಿಯ ದ ಫೆಡರೇಶನ್ ಆಫ್ ಪಬ್ಲಿಷರ್ ಅಂಡ್ ಬುಕ್ಸ್ ಸೆಲ್ಲರ್ಸ್ ಅಸೋಸಿಯೇಷನ್ ಇನ್ ಇಂಡಿಯಾ ವತಿಯಿಂದ 50 ವರ್ಷಕ್ಕಿಂತ ಮೇಲ್ಪಟ್ಟ ಪುಸ್ತಕ ಉದ್ಯಮದಲ್ಲಿ ಕೆಲಸ ನಿರ್ವಹಿಸುತ್ತಿರುವರನ್ನು ಗುರುತಿಸಿ ನೀಡುವ ರಾಷ್ಟ್ರ ಮಟ್ಟದ ಗೋಲ್ಡನ್ ಅವಾರ್ಡಗೆ ಕಲ್ಬುರ್ಗಿ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಪ್ರಕಾಶಕರಾದ ಡಾ. ಬಸವರಾಜ ಕೊನೆಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಫೆಡರೇಷನ್ ಕಾರ್ಯದರ್ಶಿ ಅರುಣಜಿತ್ ಸಿಂಗ್ ಗುಜರಾಲ್ ತಿಳಿಸಿದ್ದಾರೆ.
ಇದೇ ತಿಂಗಳು ನವದೆಹಲಿಯ ಇಂಡಿಯಾ ಹೆಬಿಟೈಟ್ ಸೆಂಟರನ ಜಕರಂದ ಹಾಲನಲ್ಲಿ ನಡೆಯುವ 71ನೇಯ ವಾರ್ಷಿಕ ಸಮಾರಂಭದಲ್ಲಿ
ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಡಾ. ಬಸವರಾಜ ಕೊನೇಕ್ ಅವರು ಕಳೆದ 58 ವರ್ಷಗಳಿಂದ ಪುಸ್ತಕ ಉದ್ಯಮ ಕ್ಷೇತ್ರಕ್ಕೆ ಕಾಲಿರಿಸಿದ್ದು, ಈಗಾಗಲೇ 3700ಕ್ಕೂ ಹೆಚ್ಚು ಕೃತಿಗಳನ್ನು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸಿ ಹಲವಾರು ಬರಹಗಾರರಿಗೆ, ಸಾಹಿತಿಗಳಿಗೆ ಪ್ರೋತ್ಸಾಹವನ್ನು ನೀಡುವಲ್ಲಿ ಮತ್ತು ಕಲ್ಯಾಣ ಕರ್ನಾಟಕದ ಭಾಗದ ಸಾಹಿತಿಗಳನ್ನು ಗುರುತಿಸುವಲ್ಲಿ ಮಹತ್ತರ ಕೆಲಸ ಮಾಡಿದ್ದು ಗಮನಿಸಿದ ಶ್ರೀ ಶರಣಬಸವ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದಲ್ಲದೆ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ
ಈ ಸಾಧನೆಗೆ ಪ್ರಕಾಶನ ಸಂಸ್ಥೆಯ ಸಲಹಾ ಸಮಿತಿಯ ಸದಸ್ಯರಾದ ಡಾ. ಗವಿಸಿದ್ದಪ್ಪ ಪಾಟೀಲ್, ಡಾ. ಸ್ವಾಮೀರಾವ ಕುಲಕರ್ಣಿ, ಡಾ. ಶಿವರಾಜ ಪಾಟೀಲ,ಡಾ.ಮೀನಾಕ್ಷಿ ಬಾಳಿ, ಡಾ. ಜಯದೇವಿ ಗಾಯಕವಾಡ್,ಡಾ.ಚಿ.ಸಿ.ನಿಂಗಣ್ಣ, ಡಾ. ಶರಣಬಸಪ್ಪ ವಡ್ದನಕೇರಿ, ಡಾ.ಕಾವ್ಯಶ್ರೀ ಮಹಾಗಾoವಕರ್ ಅವರು ಅಭಿನಂದಿಸಿದ್ದಾರೆ.