ಕುಸ್ತಿಪಟು ವಿನೇಶ ಪೋಗಟ್ ಮೇಲ್ಮನವಿ ತೀರ್ಪು ಆ.16 ಕ್ಕೆ ಪ್ರಕಟ
ಕುಸ್ತಿಪಟು ವಿನೇಶ ಪೋಗಟ್ ಮೇಲ್ಮನವಿ ತೀರ್ಪು ಆ.16 ಕ್ಕೆ ಪ್ರಕಟ
ಪ್ಯಾರಿಸ್: ಒಲಿಂಪಿಕ್ಸ್ನಲ್ಲಿ ಮಹಿಳೆಯರ 50 ಕೆ.ಜಿ. ವಿಭಾಗದಿಂದ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ಸಲ್ಲಿಸಿರುವ ಮೇಲ್ಮನವಿ ಮೇಲಿನ ತೀರ್ಪನ್ನು ಆ. 16ಕ್ಕೆ ಕ್ರೀಡಾ ನ್ಯಾಯ ಮಂಡಳಿಯ (ಸಿಎಎಸ್) ತಾತ್ಕಾಲಿಕ ವಿಭಾಗವು ಮುಂದೂಡಿದೆ.
ವಿನೇಶ್ ಅವರು ಪ್ಯಾರಿಸ್ ಒಲಿಂಪಿಕ್ಸ್ ಕೂಟದ ಮಹಿಳೆಯರ 50 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ಫೈನಲ್ ಪ್ರವೇಶಿಸಿದ್ದರು. ಬೌಟ್ಗೂ ಮುನ್ನ ಅವರು ದೇಹತೂಕ ಪರೀಕ್ಷೆಯಲ್ಲಿ 50 ಗ್ರಾಂ ಹೆಚ್ಚು ತೂಗಿದ್ದರು. ಇದರಿಂದಾಗಿ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿ ಸಲಾಗಿತ್ತು. ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಲಭಿಸುವ ಅವಕಾಶ ಕೈಜಾರಿತ್ತು.
ಇದರಿಂದಾಗಿ ವಿನೇಶ್ ಅವರು ತಾವು ಸೆಮಿಫೈನಲ್ ಮುಕ್ತಾಯದವರೆಗೂ ದೇಹತೂಕ ನಿರ್ವಹಣೆಯನ್ನು ಮಾಡಿದ್ದ ಕಾರಣ ಬೆಳ್ಳಿಪದಕವನ್ನು ನೀಡಬೇಕು ಎಂದು ಮೇಲ್ಮನವಿ ಸಲ್ಲಿಸಿದ್ದರು.
ಇದನ್ನು ಒಲಿಂಪಿಕ್ಸ್ನಲ್ಲಿರುವ ಕ್ರೀಡಾ ನ್ಯಾಯಮಂಡಳಿಯ ಹಂಗಾಮಿ ಪೀಠವು ವಿಚಾರಣೆ ನಡೆಸಿತ್ತು. ಆ.13 ರಂದು ತೀರ್ಪು ಪ್ರಕಟಿಸಿವುದಾಗಿ ತಿಳಿಸಿತ್ತು. ಆದರೆ, ಇಂದು ತೀರ್ಪನ್ನು ಆ.16 ಮುಂದೂಡಿ ಆದೇಶ ಹೊರಡಿಸಿದೆ. ಒಂದು ವೇಳೆ ತೀರ್ಪು ವಿನೇಶ ಪೋಗಟ್ ಪರವಾಗಿ ಬಂದರೆ ಭಾರತಕ್ಕೆ ಬೆಳ್ಳಿ ಪದಕ ಲಭಿಸಲಿದೆ.