ಅನೀಲಕುಮಾರ ನವಾಡೆವರ ಸ್ಮಾರಕ ನಿರ್ಮಾಣ ಮಾಡಲಾಗವುದು ಸಂಸದ ಸಾಗರ ಖಂಡ್ರೆ ಭರವಸೆ
ಅನೀಲಕುಮಾರ ನವಾಡೆವರ ಸ್ಮಾರಕ ನಿರ್ಮಾಣ ಮಾಡಲಾಗವುದು ಸಂಸದ ಸಾಗರ ಖಂಡ್ರೆ ಭರವಸೆ
ಕಮಲನಗರ ದೇಶದ ಗಡಿ ಭಾಗದಲ್ಲಿ ಸೇವೆ ಸಲ್ಲಿಸಿ ತಮ್ಮ ಪ್ರಾಣವನ್ನು ತ್ಯಾಗ ಭಾರತ ಮಾತೆ ವೀರ ಪುತ್ರ ಅನೀಲಕುಮಾರ ನವಾಡೆ ಅವರ ಕೋರ್ಯಾಳ ಗ್ರಾಮದಲ್ಲಿ ವಿಶಾಲ ಸ್ಮಾರಕ ನಿರ್ಮಾಣ ಮಾಡಲಾಗವುದು ಎಂದು ಬೀದರ್ ಸಂಸದ ಸಾಗರ ಖಂಡ್ರೆ ಭರವಸೆ ನೀಡಿದರು.
ತಾಲೂಕಿನ ಕೋರಿಯಾಳ ಗ್ರಾಮದಲ್ಲಿ ಮೃತ ಅನೀಲಕುಮಾರ ನವಾಡೆ ಅವರ ಮೀತ್ರ ಬಳಗದಿಂದ ಆಯೋಜಿಸಿದ ಸ್ಮಾರಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ಮಾತೆಯ ವೀರ ಪುತ್ರ ಇಂಡಿಯನ ಆರ್ಮಿ ಆರ್ಟಿ ರಜಮೆಂಟನಲ್ಲಿ ೨೦ ವರ್ಷಗಳವರೆಗೆ ಸೇವೆ ಸಲ್ಲಿಸಿ ಕರ್ತವ್ಯದಲ್ಲಿದ್ದಾಗಲೇ ಒಂದು ವರ್ಷ ಹಿಂದೆ ಮೃತಪಟ್ಟದ್ದು, ಅವರ ಸ್ಮಾರಕ್ಕೆ ೫ ಲಕ್ಷ ರೂ. ಧನ ಸಹಾಯ ಮಾಡಲಾಗವುದು ಎಂದು ಭರವಸೆ ನೀಡಿದರು.
ಅನೀಲಕುಮಾರ ನವಾಡೆ ಅವರು ದೇಶಕ್ಕಾಗಿ ತನ್ನ ಪ್ರಾಣವನು ಬಲಿದಾನ ಮಾಡಿದ್ದಾರೆ, ಅವರ ಕಾರ್ಯ ಸದಾ ಅವಿಸ್ಮಣೀಯ. ರಾಷ್ಟçದ ಭಾವೈಕ್ಕೆ ಸೇವಾ ಮನೋಭಾವನ್ನು ರೊಢಿಸಕೊಂಡರೆ ಸಮಾಜದಲ್ಲಿ ಉತ್ತಮವಾಗಿ ರೂಪಗಳ್ಳಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಮುಂಬರುವ ದಿನಗಳಲಿ ಬೀದರ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮದಲ್ಲಿ ಅಭಿವೃದ್ದಿ ಕಾಮಗಾರಿ ಕೈಗೊಂಡು ಮಾದರಿ ಜಿಲ್ಲೆ ಮಾಡಲಾಗುವುದು, ಅಭಿವೃದ್ಧಿ ಕಾಗಮಾರಿಗೆ ಜಿಲ್ಲೆಯ ಜನಸಾಮಾನ್ಯರ ಸಹಕಾರ ನೀಡಿ ಎಂದು ಜನರಿಗೆ ಸಲಹೆ ನೀಡಿದರು.
ಔರಾದ ತಾಲೂಕು ಕಾಂಗ್ರೆಸ್ ಮುಖಂಡ ಡಾ. ಭೀಮಸೇನ ಶಿಂದೆ ಪ್ರಾಸ್ತಾವಿಕ ಮಾತನಾಡಿದರು.
ತೋರಣಾ ಗ್ರಾಮದ ಮುಖಂಡ ಪ್ರಕಾಶ ಪಾಟೀಲ, ಶಿವರಾಜ ಪಾಟೇಲ, ಶಿವಾನಂದ ಪಾಟೀಲ್, ಗೋಪಿನಾಥ ಭೆಂಡೆ, ಚನ್ನಪ್ಪ ಉಪ್ಪೆ, ಬಾಳಾ ಸಾಹೇಬ ಪಾಟೀಲ್, ಸಂಜೀವಕುಮಾರ ಪಾಟೀಲ್,ವಿಲಾಸ ಪಾಟೀಲ, ಅನೀಲ ಖೊದಂಪೂರೆ, ಗ್ರಾಮದ ಸುತ್ತಮುತ್ತಲಿನ ಗ್ರಾಮದ ಅಭಿಮಾನಿಗಳು ಪಾಲ್ಗೊಂಡಿದ್ದರು.