ಭಂಕೂರ : ಎಸಬಿಐ ಬ್ಯಾಂಕ್ ನಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ|

ಭಂಕೂರ : ಎಸಬಿಐ ಬ್ಯಾಂಕ್ ನಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ|

|ಭಂಕೂರ : ಎಸಬಿಐ ಬ್ಯಾಂಕ್ ನಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ|

ದೇಶಕ್ಕಾಗಿ ಪ್ರತಿಯೊಬ್ಬರು ಕೊಡುಗೆ ನೀಡಬೇಕು :.. 

ಶಹಾಬಾದ : - ತಾಲ್ಲೂಕಿನ ಭಂಕೂರ ಗ್ರಾಮದ ಶಾಂತ ನಗರ ಎಸಬಿಐ ಶಾಖೆಯ ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ದೇಶದ ೭೯ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ವ್ಯವಸ್ಥಾಪಕ ಸಂಗಮೇಶ ದೇಶಮುಖ ರವರು ನೆರವೇರಿಸಿದರು.

ಮ್ಯಾನೇಜರ್ ಸಂಗಮೇಶ ಮಾತನಾಡಿ, ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಮಹಾತ್ಮ ಗಾಂಧಿ, ಅಂಬೇಡ್ಕರರ ಶಾಂತಿಯ ಮಂತ್ರ ಮತ್ತು ಭಗತ್ ಸಿಂಗ್, ಸುಭಾಷಚಂದ್ರ ಬೋಸರ ಕ್ರಾಂತಿಯಿಂದ, ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಸಂಪೂರ್ಣವಾಗಿ ಸಾಕಾರಗೊಳಿಸಬೇಕಾಗಿದೆ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸೈನಿಕರ ಅಪ್ರತಿಮ ಸಾಹಸವನ್ನು ನೆನೆಯುವುದು ನಾವು ಅವರಿಗೆ ಸಲ್ಲಿಸಬಹುದಾದ ದೊಡ್ಡ ಗೌರವವಾಗಿದೆ ಮತ್ತು ದೇಶಕ್ಕಾಗಿ ಪ್ರತಿಯೊಬ್ಬರು ಕೊಡುಗೆ ನೀಡಬೇಕು ಎಂದರು. 

ಈ ಸಂದರ್ಭದಲ್ಲಿ ಗ್ರಾಂ ಪಂ ಅಧ್ಯಕ್ಷ ಶರಣಬಸಪ್ಪ ಧನ್ನಾ, ಸದಸ್ಯ ಈರಣ್ಣ ಹಳ್ಳಿ ಕಾರ್ಗಿಲ, ಈರಣ್ಣ ಗುಡೂರ, ಮಲ್ಲಕಾರ್ಜುನ ಘಾಲಿ, ಭೀಮರಾವ ಸಿರಗೊಂಡ, ಶಂಕರ ಜಾನಾ, ಬ್ಯಾಂಕ್ ಸಿಬ್ಬಂದಿ ವಿಜಯಕುಮಾರ, ಹರಿಬಾಲಾ, ಮಲ್ಲು ತೋನಸನಹಳ್ಳಿ ಇದ್ದರು.

ಶಹಾಬಾದ ಸುದ್ದಿ : ನಾಗರಾಜ್ ದಂಡಾವತಿ