ನರೇಗಲ್: ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಆಚರಣೆ

ನರೇಗಲ್: ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಆಚರಣೆ

ನರೇಗಲ್: ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಆಚರಣೆ

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಮಹೇಶ್ ನೀಡಶೇಸಿ ಮಾತನಾಡಿ, “ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಕಾಲದಲ್ಲಿ ಮಹಿಳೆಯರನ್ನು ಕೀಳಾಗಿ ನೋಡುವ ಮನೋಭಾವ ಇತ್ತು. ಆದರೆ ಕಿತ್ತೂರ ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧ ಹೋರಾಡಿ ಕಿತ್ತೂರ ಕೋಟೆಯನ್ನು ರಕ್ಷಿಸಿದ ವೀರ ಮಹಿಳೆಯಾಗಿ ಮಹಿಳಾ ಶಕ್ತಿಗೆ ಮಾದರಿಯಾಗಿದ್ದಾರೆ,” ಎಂದು ಹೇಳಿದರು.

ಮಹೇಶ್ ನೀಡಶೇಸಿ ಮುಂದುವರಿದು, “ಪ್ರತಿಯೊಬ್ಬ ನಾಗರಿಕರು ದೇಶಾಭಿಮಾನ ಹೊಂದಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರನ್ನು ನಾವು ಸ್ಮರಿಸಬೇಕು,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನುಲ್ಕಿ, ಸದಸ್ಯರಾದ ಶ್ರೀಮತಿ ಜ್ಯೋತಿ ಪಾಯಪ್ರಗೌಡ, ಶ್ರೀಶೈಲಪ್ಪ ಬಂಡಿಹಾಳ, ಮಲ್ಲಿಕಾರ್ಜುನ್ ಗೌಡ, ಬೊಮ್ಮನಗೌಡ, ವೀರೇಶ್ ಜೋಗಿ, ನಾಮನಿರ್ದೇಶಿತ ಸದಸ್ಯರಾದ ಶೇಖಪ್ಪ ಕೆಂಗಾರ್, ಕಳಕನಗೌಡ, ಪೊಲೀಸ್ ಪಾಟೀಲ್, ನಿಂಗನಗೌಡ, ಲಕ್ಕನಗೌಡ ಹಾಗೂ ಸಿಬ್ಬಂದಿಗಳಾದ ಎಂ.ಎಚ್. ಸೀತೀಮನಿ, ಕಂದಾಯ ನಿರೀಕ್ಷಕ ರಮೇಶ್ ಹಲಗೆ, ಆರಿಫ್ ಮಿರ್ಜಾ, ನೀಲಪ್ಪ ಚಳಮರದ, ಮುದೇನು ಗುಡಿ ಮೊದಲಾದವರು ಉಪಸ್ಥಿತರಿದ್ದರು.

ಸಮಾಜದ ಮುಖಂಡರಾದ ನಿಂಗಪ್ಪ ಕಣಿವಿ, ಮುತ್ತಣ್ಣ ಪಲ್ಯದ, ಈರಣ್ಣ ಧರ್ಮಗೌಡ, ರವಿ ಮುಗಳಿ ಹಾಗೂ ಸ್ಥಳೀಯ ಗಣ್ಯರು ಭಾಗವಹಿಸಿದ್ದರು.

ವರದಿ: ಹುಚ್ಚೀರಪ್ಪ ವೀರಪ್ಪ ಈಟಿ, ಕಲ್ಯಾಣ ಕಹಳೆ, ಗದಗ