ಕಬ್ಬು ಕಟ್ಟಾವು ಆಗದೆ ಉಳಿದಿರುವ ಕಟ್ಟಾವು ಮಾಡಿಸಲು ಜಿಲ್ಲಾಧಿಕಾರಿಗಳಿಗೆ ಕೆ ಆರ್ ಆರ್ ಎಸ್ ಸಂಘದ ಅಧ್ಯಕ್ಷ ವೀರಣ್ಣ ಗಂಗಾಣಿ ಆಗ್ರಹ
ಕಬ್ಬು ಕಟ್ಟಾವು ಆಗದೆ ಉಳಿದಿರುವ ಕಟ್ಟಾವು ಮಾಡಿಸಲು
ಜಿಲ್ಲಾಧಿಕಾರಿಗಳಿಗೆ ಕೆ ಆರ್ ಆರ್ ಎಸ್ ಸಂಘದ ಅಧ್ಯಕ್ಷ ವೀರಣ್ಣ ಗಂಗಾಣಿ ಆಗ್ರಹ
ಚಿಂಚೊಳಿ : ಕಾಳಗಿ ಮತ್ತು ಚಿಂಚೋಳಿ ತಾಲ್ಲೂಕಿನ ಅನೇಕ ಹಳ್ಳಿಯಲ್ಲಿ ಬೆಳೆದು ನಿಂತ ಕಬ್ಬು ಒಣಗುವ ಭಿತಿಯಲ್ಲಿವೆ. ರೈತರು ಘಾಬರಿಗೊಂಡಿದ್ದು, ಕಬ್ಬು ಬೆಳೆಗಾರರ ಕಬ್ಬು ಕಟಾವು ಮಾಡಿಸಲು ಸರ್ಕಾರ ಮುಂದೆ ಬರಬೇಕು ಎಂದು ಒತ್ತಾಯಿಸಿ, ಕಾಳಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಅಧ್ಯಕ್ಷ ವೀರಣ್ಣ ಗಂಗಾಣಿ ರಟಕಲ್ ಅವರ ನೇತೃತ್ವದಲ್ಲಿ ರೈತರು ಕಾಳಗಿ ತಹಸೀಲ್ದಾರ್ ರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
12 ತಿಂಗಳ ಕಬ್ಬು ಬೆಳೆದ ರೈತರ ಗತಿ ಅಧೊಗತಿಯಾಗುತ್ತಿದೆ. ಬೆಳೆದು ನಿಂತ ಕಬ್ಬು ಒಣಗುವ ಭೀತಿ ಯಲ್ಲಿದೆ ಕಬ್ಬು ಬೆಳೆಗಾರ ಕಂಗಲಾಗಿದ್ದಾನೆ. ಈಗಾಗಲೇ 14 ತಿಂಗಳು ಕಳೆದರು ಕಬ್ಬು ಕಟಾವು ಆಗುತ್ತಿಲ್ಲ. ರೈತ ಸಾಲ ಮಾಡಿ ಕಬ್ಬು ಬೆಳೆದಿದ್ದಾನೆ. ಬೆಳೆದು ನಿಂತ ಕಬ್ಬು ಕಟ್ಟಾವು ಆಗದೆ ಇದ್ದರೆ ಸಾಲ ಕಟ್ಟುವುದು ಹೇಗೆ ಎಂಬ ಚಿಂತೆಯಲ್ಲಿ ರೈತರು ಮುಳುಗಿದ್ದಾರೆ. ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ಹಳ್ಳಿಗಳು ಹಂಚಿಕೆ ಮಾಡಿ ತಿಳಿಸಿದೆ. ಹಂಚಿಕೆ ಮಾಡಿದ ಕಾರ್ಖಾನೆಯವರು ಹಳ್ಳಿಗೆ ಬರಬೇಕಾಗಿತ್ತು. ಇಲ್ಲಿಯವರೆಗೆ ಯಾರು ಬಂದಿಲ್ಲ. ಹೀಗಾಗಿ ರೈತರು ಸಂಕಷ್ಟಕಿಡಾಗಿದ್ದಾರೆ.
ಈಗಾಗಲೆ ರಾಜ್ಯ ಸರ್ಕಾರ ಕಲಬುರಗಿ ಜಿಲ್ಲಾಧಿಕಾರಿಗಳು ಮುಖಾಂತರ ಒಂದು ಆದೇಶ ಹೊರಡಿಸಿ ಕಬ್ಬು ಬೆಳೆಗಾರರ ಮಾನವಿಯೆತೆ ಹಿತದೃಷ್ಟಿಯಿಂದ ಕಬ್ಬು ಕಟಾವು ಮಾಡಲು ಕೆಲವು ಗ್ರಾಮಗಳನ್ನು ಸಕ್ಕರೆ ಕಾರ್ಖಾನೆಗಳಿಗೆ ಹಂಚಿಕೆ ಮಾಡಿ ಒಂದು ಆದೇಶ ಹೊರಡಿಸಿರುವುದನ್ನು ನೋಡಿ ರೈತರು ಖುಷಿ ಪಟ್ಟಿದ್ದರು. ಆದರೆ ಇಲ್ಲಿಯವರೆಗೆ ಚಿಂಚೋಳಿ - ಕಾಳಗಿ ಭಾಗದ ಕಬ್ಬು ಕಟಾವು ಮಾಡಿಕೊಂಡು ಹೋಗದೆ ಇರುವುದರಿಂದ ಅನೇಕ ಗ್ರಾಮಗಳಲ್ಲಿ ಕಬ್ಬು ಕಟಾವು ಆಗದೆ ಉಳಿದಿವೆ. ಕಬ್ಬು ಬೆಳೆಗಾರರ ನೆರವಿಗೆ ತಕ್ಷಣವೇ ತಾಲ್ಲೂಕು ಆಡಳಿತ ಮತ್ತು ಜಿಲ್ಲಾ ಆಡಳಿತ ಮಧ್ಯಸ್ಥಿಕೆ ವಹಿಸಿ ಉಳಿದುಕೊಂಡಿರುವ ಕಬ್ಬು ಕಟಾವು ಮಾಡಿಸಲು ಸಕ್ಕರೆ ಕಾರ್ಖಾನೆಗಳಿಗೆ ನಿರ್ದೇಶನ ಕೊಟ್ಟು ತಕ್ಷಣವೇ ಕಬ್ಬು ಕಟಾವು ಮಾಡಿಸಲು ಸರಕಾರಕ್ಕೆ ರೈತರು ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ
ರೈತ ಮುಖಂಡರಗಳಾದ ರಾಜಶೇಖರ್ ಗುಡದಾ, ಉಮಕಾಂತ್ ಜೀರಿಗಿ, ಸಂಜುಕುಮಾರ್ ಪಡಶೆಟ್ಟಿ, ಗುಂಡಪ್ಪ ಮಾಳಗಿ, ಪೃಥ್ವಿರಾಜ, ರಾಮರಾವಮಹಾರಾಜ ಅವರು ಇದ್ದರು.