ಬೆಳಕನ್ನು ಸ್ವಾಗತಿಸುವ ಹಬ್ಬವೇ ದೀಪಾವಳಿ” — ಶಿವರಾಜ ಅಂಡಗಿ

ಟೆಂಗಳಿಯಲ್ಲಿ 1008 ದೀಪಗಳ ದೀಪೋತ್ಸವ ಸಂಭ್ರಮ
“ಬೆಳಕನ್ನು ಸ್ವಾಗತಿಸುವ ಹಬ್ಬವೇ ದೀಪಾವಳಿ” — ಶಿವರಾಜ ಅಂಡಗಿ
????ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಟೆಂಗಳಿ ಗ್ರಾಮದ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಭವ್ಯ 1008 ದೀಪಗಳ ದೀಪೋತ್ಸವಸಂಭ್ರಮವು ನೆರವೇರಿತು.
ದಿನಾಂಕ 20-10-2025 ರಂದು ರಾತ್ರಿ ೧೦.೩೦ ಗಂಟೆಗೆ ನಡೆದ ಈ ದೀಪೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು.
ಉದ್ಘಾಟನಾ ಭಾಷಣದಲ್ಲವರು “**ಕುಂಬಾರ ಮಾಡಿದ ಹಣತೆಯಲ್ಲಿ, ಗಾಣಿಗ ತಯಾರಿಸಿದ ಎಣ್ಣೆಯಲ್ಲಿ, ರೈತ ಬೆಳೆದ ಹತ್ತಿಯ ಬತ್ತಿಯಿಂದ ಬರುವ ಬೆಳಕಿಗೆ ಜಾತಿ, ಕುಲ, ಧರ್ಮವಿಲ್ಲ — ಆ ದಿವ್ಯ ಪ್ರಕಾಶವೇ ದೀಪಾವಳಿ” ಎಂದು ಹೇಳಿದರು.
ಈ ಸಂದರ್ಭದಲ್ಲಿ ವೀರಶೈವ, ಕೋಲಿ, ಜಂಗಮ, ಮುಸ್ಲಿಂ, ದಲಿತ, ನೇಕಾರ, ವಿಶ್ವಕರ್ಮ, ಹಡಪದ ಸೇರಿದಂತೆ ಗ್ರಾಮದ ವಿವಿಧ ಸಮುದಾಯಗಳ ಯುವ ಮುಖಂಡರು — ಶರಣಪ್ಪ ತೆಲಗಾಣಿ, ಪ್ರಭು ನೀಲಹಳ್ಳಿ, ಶಿವಶರಣ ಕೇಶವಾರ ಲಿಂಗಬಸವ ಸೇಡಂ, ಸಂಗಮೇಶ ಬೂದನಮಠ್, ಜಗದೀಶ ಹಿರೇಮಠ, ಮೊಹಮ್ಮದ್ ಲಧಾಫ್, ಮೊಹಮ್ಮದ್ ರವೂಫ್, ಬಾಲಯ್ಯ ಗುತ್ತೇದಾರ, ಎಂ.ಎನ್. ಸುಗಂಧಿ, ಗಿರಿಮಲ್, ಶಿವಯೋಗಿ, ವಿನೋದಕುಮಾರ ಜನೇವರಿ, ಆಕಾಶ ಕುಂಬಾರ, ಮನೋಹರ ಬಡಿಗೇರ ಹಾಗೂ ಗುರಪ್ಪ ಹಡಪದ ಅವರ ನೇತೃತ್ವದಲ್ಲಿ ದೇವಸ್ಥಾನ ಒಳಗಡೆ, ಹೊರಗಡೆ ಹಾಗೂ ಸುತ್ತಮುತ್ತಲಿನ ಉದ್ಯಾನವನದಲ್ಲಿ ೧೦೦೮ ದೀಪಗಳನ್ನು ಬೆಳಗಿಸಿ ಭವ್ಯ ದೀಪೋತ್ಸವವನ್ನು ಆಚರಿಸಲಾಯಿತು.
ಗ್ರಾಮದಿಂದ ಸುಮಾರು ೩ ಕಿ.ಮೀ. ದೂರದಲ್ಲಿರುವ ಭೀಮೇಶ್ವರ ದೇವಸ್ಥಾನದಲ್ಲಿ ಮಳೆ, ಗುಡುಗು ಮತ್ತು ಮಿಂಚಿನ ಮಧ್ಯೆಯೂ ರಾತ್ರಿ ೧೧ ಗಂಟೆಯವರೆಗೆ ಮಹಿಳೆಯರು ಹಾಗೂ ಯುವಕರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದರು.
ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ವಿರೇಂದ್ರ ವಾಲಿ ಅಧ್ಯಕ್ಷೀಯ ಮಾತುಗಳನ್ನಾಡಿ, “ಭೀಮೇಶ್ವರ ದೇವಸ್ಥಾನ ಟ್ರಸ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ವಿಶಾಲ ದೀಪೋತ್ಸವ ಆಯೋಜಿಸಿದ್ದೇವೆ” ಎಂದು ಹೆಮ್ಮೆಯಿಂದ ಹೇಳಿದರು.
ಭೀಮಾಶಂಕರ ಅಂಕಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಗುಂಡಪ್ಪ ಪಟೇದ ಸ್ವಾಗತಿಸಿ, ವಿಶ್ವನಾಥ ಬಾಳದೆ ವಂದಿಸಿದರು.
ಕಾರ್ಯಕ್ರಮದಲ್ಲಿ ವಿಜಯಕುಮಾರ ಪಟೇದ, ಮಹೇಶ ಮಹಾಗಾಂವ, ಭೀಮರಾಯ ತುಪ್ಪದ, ರಾಜು ಗೋಗಿ, ಅಣ್ಣಾರಾವ ಹೊಂದೆ, ಶರಣು ಸೇರಿ, ನಾಗು ತೆಲಗಾಣೆ, ಚಂದು ಬಸ್ತೆ, ಮಂಜುನಾಥ ಬೇರನ್, ಬಸವರಾಜ ಮಾಡಬೂಳ, ಶರಣಯ್ಯ ಸ್ವಾಮಿ, ಬಸು ಕಡ್ಲಿ, ಸಿದ್ದು ಸಾಲಹಳ್ಳಿ, ಮಲ್ಲು ಹೊಸಳ್ಳಿ, ವಿರೇಶ ತೆಲಗಾಣೆ, ಮಲ್ಲಣ್ಣ ಸೇರಿ, ವಿಶ್ವನಾಥ ಹಿಲ್ಲಾ, ರೇವಶೆಟ್ಟಿ ಮಲಕೂಡ, ಶರಣಬಸಪ್ಪ ಸಂಗೋಳಗಿ, ಭೀಮಾ ಹೊಸಳ್ಳಿ, ಶಿವು ಟೆಂಟಹೌಸ್, ರತ್ನಮ್ಮ ಮಹಾಗಾಂವ, ಉಮಾದೇವಿ ಚೇಂಗಟಿ, ಗುಂಡಮ್ಮ ಮುತ್ತಗಿ, ಶ್ರೀದೇವಿ ಮಹಾಗಾಂವ ಹಾಗೂ ಅನೇಕ ಗ್ರಾಮಸ್ಥರು ಮತ್ತು ಮಕ್ಕಳು ಭಾಗವಹಿಸಿದ್ದರು.
ಈ ಕಾರ್ಯಕ್ರಮವು ಟೆಂಗಳಿ ಗ್ರಾಮದ ಸೌಹಾರ್ದತೆ, ಶಾಂತಿ ಮತ್ತು ಏಕತೆಯ ಪ್ರತೀಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.