ಮಹಾದೇವಪ್ಪ ರಾಂಪೂರೇ ಅವರು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಕ್ರಾಂತಿಯ ಪಿತಾಮಹ - ಶಶೀಲ ನಮೋಶಿ ಅಭಿಮತ

ಮಹಾದೇವಪ್ಪ ರಾಂಪೂರೇ ಅವರು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಕ್ರಾಂತಿಯ ಪಿತಾಮಹ - ಶಶೀಲ ನಮೋಶಿ ಅಭಿಮತ

ಕಲಬುರಗಿ:ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಲಿಂ. ಮಹಾದೇವಪ್ಪ ರಾಂಪುರೇ ಅವರ 103 ನೇ ಜನ್ಮದಿನೋತ್ಸವ ಅಂಗವಾಗಿ ನಿವೃತ್ತ ಶಿಕ್ಷಕ - ಶಿಕ್ಷಕೇತರ ಸಿಬ್ಬಂದಿ ವರ್ಗದವರಿಗೆ ಗೌರವಿಸಿದರು.

   ಆಡಳಿತ ಮಂಡಳಿಯ ನಿವೃತ್ತ ನೌಕರರನ್ನು ಗೌರವಿಸುವ ಈ ವಿನೂತನ ಸಂಪ್ರದಾಯ ಶ್ಲಾಘನೀಯ ಎಂದು ಅವಿನಾಶ ಸಾಮ್ರಾಣಿ ಹೇಳಿದರು .

ಈ ಸನ್ಮಾನ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿಸಿದೆ ಎಂದರು, ಸನ್ಮಾನಿತರಾದ ರಾಜಶೇಖರ ಉಪಾಸೆ ಅವರು ಮಾತನಾಡುತ್ತಾ ನಿವೃತ್ತರನ್ನು ಸನ್ಮಾನಿಸಿರುವುದು ಬಹಳ ಸಂತೋಷ ಉಂಟುಮಾಡಿದೆ ಸಂಸ್ಥೆ ನನಗೆ ಮಾತ್ರವಲ್ಲದೇ ನನ್ನ ಮಕ್ಕಳಿಗು ಶಿಕ್ಚಣ ಕೊಡುವಲ್ಲಿ ಸಂಸ್ಥೆಯ ಸಹಕಾರ ಎಂದಿಗೂ ಮರೆಯುವುದಿಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ ಜಿ.ನಮೋಶಿ ಅವರು ಮಾತನಾಡುತ್ತಾ ರಾಂಪೂರೇ ಅವರು ಒಬ್ಬ ದೂರದೃಷ್ಟಿಯುಳ್ಳ ನಾಯಕರಾಗಿದ್ದರು ಹಾಗೂ ಅವರಲ್ಲಿ ಒರ್ವ ಸಮಾಜವಾದಿಯು ಆಗಿದ್ದರು ನಾನು ನಿಜವಾಗಿಯು ಈ ಸಂಸ್ಥೆಯ ವಿದ್ಯಾರ್ಥಿಯಾಗಿರುವದು ಹೆಮ್ಮೆಯ ವಿಷಯ ಎಂದರು.

 ಸಂಸ್ಥೆಯ ದಾನಿಗಳ ನೆರವಿನಿಂದ ವೈದ್ಯಕೀಯ,ಇಂಜಿನಿಯರಿಂಗ ಹಲವು ಶೈಕ್ಚಣಿಕ ಸಂಸ್ಥೆಗಳನ್ನು ಸ್ಥಾಪಿಸಿರುವುದು ಅವರ ಕಾರ್ಯವೈಕರಿಗೆ ಒಂದು ಸಾಕ್ಚಿ ಯಾಗಿದೆ ಎಂದರು .

ಮುಂದುವರೇದು ಮಾತನಾಡಿದ ಅವರು ರಾಜ್ಯದಾನಿ ಬೆಂಗಳೂರಿನ ಸದಾಶಿವನಗರದಲ್ಲಿ ಸಂಸ್ಥೆಗೆ ಸರ್ಕಾರ ದಿಂದ ಸ್ಥಳ ದೊರಕಿಸಿಕೊಟ್ಟಿರುವದು ಸಣ್ಣ ಮಾತಲ್ಲ ಎಂದರು.

  ಅದ್ಬುತವಾದ ಎನ್.ಪಿ.ಎಸ್ ಶಾಲೆ ಪ್ರಾರಂಭಿಸಿದ್ದೆವೆ ಎಂದರು ಇಂದು ಗುಣಮಟ್ಟದ ಶಿಕ್ಚಣ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಸಂಸ್ಥೆಯ ಎಲ್ಲಾ ನೌಕರರು ತಮ್ಮ ಜವಾಬ್ದಾರಿ ಅರಿತು ಹಿಂದಿನವರಿಗಿಂತಲೂ ಪ್ರಭಾವಯುತವಾಗಿ ಬೋಧನೆಯಲ್ಲಿ ತೊಡಗಿಸಿಕೊಂಡು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ರಾಜಾ ಬಿ.ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ ಚಿಂಚೋಳಿ,ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಶ ಪಾಟೀಲ, ಆಡಳಿತ ಮಂಡಳಿಯ ಸದಸ್ಯರಾದ ಡಾ.ಶರಣಬಸಪ್ಪ ಹರವಾಳ, ಡಾ.ಮಹಾದೇವಪ್ಪ ರಾಂಪುರೇ, ಡಾ.ಕಿರಣ್ ದೇಶಮುಖ,ಡಾ.ಅನೀಲ ಪಾಟೀಲ, . ಸಾಯಿನಾಥ ಪಾಟೀಲ, ನಾಗಣ್ಣ ಘಂಟಿ, ಡಾ.ಶಿವಾನಂದ ಮೇಳಕುಂದಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕಿಯರಾದ ಉಮಾ ರೇವೂರ , ನಮ್ರತಾ ಹವಾ ಹಾಗೂ ಕವಿತಾ ಎಮ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು ಕಾರ್ಯದರ್ಶಿಗಳಾದ ಶ್ರೀ ಉದಯಕುಮಾರ್ ಚಿಂಚೋಳಿ ಸ್ವಾಗತಿಸಿದರು, ಜಂಟಿಕಾರ್ಯದರ್ಶಿಗಳಾದ ಡಾ.ಕೈಲಾಶ ಪಾಟೀಲ ವಂದಿಸಿದರು ,ಸಂಸ್ಥೆಯ ಆಡಳಿತಾಧಿಕಾರಿ ಡಾ.ಸಿ.ಸಿ.ಪಾಟೀಲ,ವಿಶೇಷ ಅಧಿಕಾರಿ ಡಾ.ಪರಮೇಶ ಬಿರಾದಾರ ಹಾಗೂ ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು, ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು