ಧ್ವಜ ನೋಡಿದ ತಕ್ಷಣ ರಾಷ್ಟ್ರ ಭಕ್ತಿ ಮೆರೆದ 2 ವರ್ಷದ ಕೂಸೂ
ಧ್ವಜ ನೋಡಿದ ತಕ್ಷಣ ರಾಷ್ಟ್ರ ಭಕ್ತಿ ಮೆರೆದ 2 ವರ್ಷದ ಕೂಸೂ
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ರಜೀಸ್ಟರರ್ ಮಗ ಜಯಂತ ಉಡುಪ ಅವರು ಮಗ ಶ್ರೀಜಯನ ರಾಷ್ಟ್ರ ಭಕ್ತಿಯ ಬಗ್ಗೆ ಆನಿಸಿಕೆ
ನನ್ನ ಮಗನಿಗೆ ಈಗಷ್ಟೇ ಎರಡು ವರ್ಷ ತುಂಬಿತು..., ಬೆಳಗ್ಗೆ ಟಿವಿ ನೋಡುವಾಗ ಯಾವುದೋ ಮಗು ನಾಳೆ ಸ್ವಾತಂತ್ರ್ಯ ದಿನ ಎಂದು ನಮ್ಮ ಭಾವುಟ ಹಿಡಿದು ಓಡೋದ ಕಂಡೆ, ನಂಗೂ ಖುಷಿ ಆಯ್ತು ಪಕ್ಕದಲ್ಲಿದ್ದ ನನ್ನ ಮಗನಿಗೆ ತೋರಿಸಿ ಹೇಳಿದೆ... ನಾಳೆ ಹಬ್ಬ ಕಂದ ಸ್ವಾತಂತ್ರ್ಯ ಹಬ್ಬ, ದೇಶದ ಹಬ್ಬ, ನಿಂಗೂ ಹಾಗೆ ಭಾವುಟ ಕೊಡಿಸ್ತೀನಿ ಹಾಗೆ ಜಾಣನ ತರ ಇರ್ಬೇಕು ಅದಕ್ಕೆ ನಮಸ್ಕಾರ(ಜೋತ) ಮಾಡ್ಬೇಕು, ಅದು ದೇವರು ಆಯ್ತಾ ಅಂದೆ ಅದಕ್ಕೆ ಏನು ಅರ್ಥ ಆಯ್ತೋ ಗೊತ್ತಿಲ್ಲ ಹ್ಮ್ಮ್ ಆತ್ ಅಂದ ಅವನ ಭಾಷೆಲಿ... ನಾನು ಹಾಗೆ ಅದು ಇದು ತಂದು ನನ್ನ ಮಗನ ಚಂದಗೊಳಿಸಿ ಭಾವುಟ ಕೊಟ್ಟೆ ನೋಡಿ ಅಲ್ಲಿವರೆಗೆ ಇಲ್ಲದ ಮಿಂಚು ಆ ಕಣ್ಣಲ್ಲಿ ಕಾಣಿಸ್ತು... ಎನ್ ಖುಷಿ ಅಂತೀರಾ ಆ ಟಿವಿಯಲ್ಲಿ ಹೇಳಿ ಕೊಟ್ಟು ಮಾಡಿಸಿದ ವಿಡಿಯೋ ಹಾಗೆ ಇವನು ಕುಣಿಯೋದು ಹಾಗೆ ಜೈ ಅಂತ ಹೇಳಿಕೊಟ್ಟೆ ಅದನ್ನೇ ಹೇಳ್ತಾ ಜೈ ಜೈ ಅಂತ ಕುಣಿಯೋಕೆ ಶುರು ಮಾಡಿದ.
ಆಗ ನನಗೆ ಅನಿಸ್ತು ಸ್ವಾತಂತ್ರ್ಯ ದಿನಾಚರಣೆ ಅಂದರೆ ಏನು ಗೊತ್ತಿಲ್ಲ ಆದ್ರೆ ಆ ಭಾವುಟ ನೋಡಿ ಅವನು ಖುಷಿ ಪಟ್ಟಿದ್ದು ಅದೆಲ್ಲ ಈ ಮಣ್ಣಿನ ಮಹಿಮೆ ಅನಿಸತ್ತೆ.
ಇಲ್ಲಿ ಹುಟ್ಟೋ ಮಕ್ಕಳಿಗೆ ಈ ನಮ್ಮ ಭಾವುಟದ ಕೇಸರಿ ಬಿಳಿ ಹಸಿರು ಬಣ್ಣಗಳೇ ದೇಶಾಭಿಮಾನವನ್ನು ಹೇಳಿ ಕೊಡತ್ತೆ ಅಂತ... ಹಾಗೆ ನನ್ನ ಮಗ ಆಟ ಆಡುವಾಗ ತೆಗೆದ ಫೋಟೋಸ್ ಹಾಕಿದಿನಿ ನೋಡಿ...
ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು