ಉರಿಲಿಂಗಪೆದ್ದೇಶ್ವರ ಸಂಸ್ಥಾನ ಮಠ ಹಾಗೂ ಶಿವಯೋಗಿ ಸ್ವಾಮಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ – ಅಪಪ್ರಚಾರ ತಕ್ಷಣ ನಿಲ್ಲಿಸುವಂತೆ ಮನವಿ

ಉರಿಲಿಂಗಪೆದ್ದೇಶ್ವರ ಸಂಸ್ಥಾನ ಮಠ ಹಾಗೂ ಶಿವಯೋಗಿ ಸ್ವಾಮಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ – ಅಪಪ್ರಚಾರ ತಕ್ಷಣ ನಿಲ್ಲಿಸುವಂತೆ ಮನವಿ

ಉರಿಲಿಂಗಪೆದ್ದೇಶ್ವರ ಸಂಸ್ಥಾನ ಮಠ ಹಾಗೂ ಶಿವಯೋಗಿ ಸ್ವಾಮಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ – ಅಪಪ್ರಚಾರ ತಕ್ಷಣ ನಿಲ್ಲಿಸುವಂತೆ ಕೋಡ್ಲಾ ಮನವಿ

ಕೋಡ್ಲಾ (ತಾ. ಸೇಡಂ, ಜಿ. ಕಲಬುರಗಿ): ಉರಿಲಿಂಗಪೆದ್ದೇಶ್ವರ ಸಂಸ್ಥಾನ ಮಠ ಟ್ರಸ್ಟ್ ಹಾಗೂ ಶ್ರೀ ಶಿವಯೋಗಿ ಸ್ವಾಮಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗೆ ಶ್ರೀ ಶಿವಲಿಂಗ ಸ್ವಾಮಿಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಮಠದ ಟ್ರಸ್ಟ್ ಹಾಗೂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶಂಕರ ಕೋಡ್ಲಾ ಅವರು ಸ್ಪಷ್ಟಪಡಿಸಿದ್ದಾರೆ.

ಶ್ರೀ ಶಿವಲಿಂಗ ಸ್ವಾಮಿಯು ಸಾಮಾಜಿಕ ಜಾಲತಾಣಗಳಲ್ಲಿ ಮಠ ಹಾಗೂ ಮಠದ 5ನೇ ಪೀಠಾಧಿಕಾರಿಗಳಾದ ಶ್ರೀ ಜ್ಞಾನಪ್ರಕಾಶ ಸ್ವಾಮಿಗಳ ವಿರುದ್ಧ ಸುಳ್ಳು, ಆಧಾರರಹಿತ ಹಾಗೂ ಮಾನಹಾನಿಕರ ಅಪಪ್ರಚಾರ ನಡೆಸುತ್ತಿರುವುದರಿಂದ ಮಠದ ಧಾರ್ಮಿಕ ಗೌರವಕ್ಕೆ ಭಾರೀ ಧಕ್ಕೆ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಶ್ರೀ ಶಿವಲಿಂಗ ಸ್ವಾಮಿಗೆ ಹಿಂದೆ ಮಾನವೀಯ ಕಾರಣದಿಂದ ವಸತಿ ನಿಲಯದಲ್ಲಿ ಅವಕಾಶ ನೀಡಲಾಗಿದ್ದು, ಕೇವಲ ಕೆಲಸದ ನೆಪದಲ್ಲಿ ವೇತನದ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಆದರೆ ಅವರು ಮಠ ಅಥವಾ ಶಿಕ್ಷಣ ಸಂಸ್ಥೆಯ ಸದಸ್ಯರಾಗಿರಲಿಲ್ಲ. ನಂತರ ಸ್ವಾಮಿಗಳ ಸಹಿಗಳನ್ನು ದುರುಪಯೋಗ ಮಾಡಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಉತ್ತರಾಧಿಕಾರಿಯೆಂದು ತಾವು ತಾವೇ ಘೋಷಿಸಿಕೊಂಡು ವಂಚನೆ ನಡೆಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಭೆ ನಡೆಸಿ ಅವರನ್ನು ಮಠ ಹಾಗೂ ಸಂಸ್ಥೆಯಿಂದ ಸಂಪೂರ್ಣವಾಗಿ ಹೊರಹಾಕಲಾಗಿತ್ತು.

ಈ ಸಂಬಂಧ ಅವರು ಸಲ್ಲಿಸಿದ ಯಾವುದೇ ನ್ಯಾಯಾಲಯದ ಪ್ರಕರಣದಲ್ಲೂ ಇದುವರೆಗೂ ಅವರಿಗೆ ಅನುಕೂಲವಾದ ತೀರ್ಪು ಬಂದಿಲ್ಲ ಎಂದು ಶಂಕರ ಕೋಡ್ಲಾ ಅವರು ತಿಳಿಸಿದ್ದಾರೆ.

ಪ್ರಸ್ತುತ ಮಾನಸಿಕ ಅಸ್ವಸ್ಥತೆಯಲ್ಲಿರುವ ಶ್ರೀ ಶಿವಲಿಂಗ ಸ್ವಾಮಿ ಸಾಮಾಜಿಕ ಜಾಲತಾಣಗಳ ಮೂಲಕ ಬಸವ ತತ್ವಕ್ಕೆ ಹಾಗೂ ಅಖಿಲ ಕರ್ನಾಟಕದ ಏಕೈಕ ಪರಿಶಿಷ್ಟ ಜಾತಿಯ ಉರಿಲಿಂಗಪೆದ್ದೇಶ್ವರ ಮಠಕ್ಕೆ ಕಳಂಕ ತರುತ್ತಿದ್ದು, ಇದನ್ನು ತಕ್ಷಣ ತಡೆಹಿಡಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಠದ ಟ್ರಸ್ಟ್ ತುರ್ತು ಸಭೆ ನಡೆಸಿ ಶ್ರೀ ಶಿವಲಿಂಗ ಸ್ವಾಮಿಯ ವಿರುದ್ಧ ಮಾನಹಾನಿ ದಾವೆ ಹೂಡುವುದಕ್ಕೂ ಹಾಗೂ ಅಪಪ್ರಚಾರ ತಕ್ಷಣ ನಿಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಯಲ್ಲಿ ಶಿಸ್ತು ಕ್ರಮಕ್ಕೆ ಮನವಿ ಸಲ್ಲಿಸುವುದಕ್ಕೂ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

-