ಸೋನಾಳ ಗ್ರಾಮದಲ್ಲಿ ಪರಮ ಪೂಜ್ಯ ಶ್ರೀ ಚನ್ನವೀರ ಮಹಾಸ್ವಾಮಿಗಳ ಭವ್ಯ ಮೆರವಣಿಗೆ

ಸೋನಾಳ ಗ್ರಾಮದಲ್ಲಿ ಪರಮ ಪೂಜ್ಯ ಶ್ರೀ ಚನ್ನವೀರ ಮಹಾಸ್ವಾಮಿಗಳ ಭವ್ಯ ಮೆರವಣಿಗೆ

ಸೋನಾಳ ಗ್ರಾಮದಲ್ಲಿ ಪರಮ ಪೂಜ್ಯ ಶ್ರೀ ಚನ್ನವೀರ ಮಹಾಸ್ವಾಮಿಗಳ ಭವ್ಯ ಮೆರವಣಿಗೆ

ಕಮಲನಗರ :ತಾಲೂಕಿನ ಸೋನಾಳ ಗ್ರಾಮದಲ್ಲಿ ಶ್ರೀ ವಿರಕ್ತ ಮಠದ ಲಿಂಗಕ್ಕೆ ಶ್ರೀ ಮ.ನಿ.ಪ್ರ.ನಿರಂಜನ ಮಹಾಸ್ವಾಮಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ನೂತನ ರಥೋತ್ಸವ ಕಾರ್ಯಕ್ರಮದಲ್ಲಿ

ಸೋನಾಳ ಮಠಾಧ್ಯಕ್ಷರಾದ ಶ್ರೀ ಮ.ನಿ.ಪ್ರ. ಚನ್ನವೀರ ಮಹಾಸ್ವಾಮಿಗಳ ಭವ್ಯ ಮೆರವಣಿಗೆ ಕಾರ್ಯಕ್ರಮ ನಡೆಯಿತು.

 ಸಾಮೂಹಿಕ ಇಟ್ಟಲಿಂಗ ಕಾರ್ಯಕ್ರಮನೆರವೇರಿತು.ಯುವಕರು ಮಹಿಳೆಯರು ಸೇರಿ 45ಕ್ಕೂ ಹೆಚ್ಚು ಜನ ಲಿಂಗ ದೀಕ್ಷೆ ಪಡೆದರು. ಭಾವ ಸುದ್ದಿ ಮನಸುದ್ದಿ ಬದುಕುವಂತೆ ಮಾರ್ಗದರ್ಶನ ನೀಡಿದರು.

 ತದನಂತರ ಹೂವಿನಿಂದ ಅಲಂಕಾರ ಮಾಡಿದ ಸಾರೋಟಿನಲ್ಲಿ ಪೂಜ್ಯರನ್ನು ಕೂಡಿಸಿ ಬಾಜಾ ಭಜಂತ್ರಿ ಡೋಳು ಕುಣಿತ ಮೆರವಣಿಗಳೊಂದಿಗೆ 108 ಸುಮಂಗಲೆರು ಕಳಸವನು ಹೊತ್ತಿ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಶ್ರೀ ವಿರಕ್ತ ಮಠಕ್ಕೆ ಸಾಗಿ ಬಂತು.

ಈ ಸಾರೋಟಿನಲ್ಲಿ ಪೂಜ್ಯ ಶ್ರೀ ಮ.ನಿ.ಪ್ರ.ಅಭಿನವ ಚನ್ನಬಸವ ಮಹಾಸ್ವಾಮಿಗಳು ವಿರಕ್ತಮಠ ಮಲ್ಲನಕೇರಿ ಜಿಲ್ಲಾ ವಿಜಯಪುರ, ಪೂಜ್ಯ ಶ್ರೀ ಷ.ಬ್ರ.ಗುರುಮಹೇಶ್ವರ ಶಿವಾಚಾರ್ಯರು ಮಹಾಸ್ವಾಮಿಗಳು ಗುರುನಂಜೇಶ್ವರ ಮಠ ಕೂಡಲ, ಹಾವೇರಿ, ಶ್ರೀ ಮ.ಘ.ಚ ಅಭಿನವ ರುದ್ರಮುನಿ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಚಾಂಬೋಳ ಶ್ರೀಗಳು ಉಪಸ್ಥಿತಿಯಲ್ಲಿದ್ದರು.

ಈ ಮೆರವಣಿಗೆಯಲ್ಲಿ ಗ್ರಾಮದ ಸದ್ಭಕ್ತರು ಸುತ್ತಲಿನ ಹಳ್ಳಿಯ ಪಟ್ಟಣದ ಮಹಾರಾಷ್ಟ್ರ ತೆಲಂಗಾಣ ಕರ್ನಾಟಕ ಪ್ರದೇಶಗಳಿಂದ ಭಕ್ತಾದಿಗಳು ಪಾಲ್ಗೊಂಡಿದ್ದರು.