ಹಣ ದುರುಪಯೋಗ ಟಿಪಿಜೆಪಿ ಸಂಘಟನೆ ವತಿಯಿಂದ ಕಲ್ಬುರ್ಗಿ ನಗರದಲ್ಲಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶಾಸಕರ ಭೇಟಿ...
ಹಣ ದುರುಪಯೋಗ ಟಿಪಿಜೆಪಿ ಸಂಘಟನೆ ವತಿಯಿಂದ ಕಲ್ಬುರ್ಗಿ ನಗರದಲ್ಲಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶಾಸಕರ ಭೇಟಿ...
ಕಲಬುರಗಿ ಜಿಲ್ಲಾ ಟಿಪಿಜೆಪಿ ಸಂಘಟನೆಯ ವತಿಯಿಂದ ಸತತ 15 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರದ ಸ್ಥಳಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿರುವಂತ ಹಾಗೂ ಜೇವರ್ಗಿ ತಾಲೂಕಿನ ಶಾಸಕರಾಗಿರುವಂತಹ ಡಾ. ಅಜಯ್ ಸಿಂಗಅವರು ಧರಣಿ ಸ್ಥಳಕ್ಕೆ ಆಗಮಿಸಿ ಧರಣಿ ನಿರತರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಆಲಿಸಿದರು 17ನೇ ತಾರೀಕು ನಡೆಯುವಂತಹ ಸಚಿವ ಸಂಪುಟದಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ ಈ ಸಂದರ್ಭದಲ್ಲಿ ಜಿಲ್ಲಾ ಟಿಪಿಜೆಪಿ ಅಧ್ಯಕ್ಷರಾದ ವಾಯ ಎಸ್ ತಳವಾರ್ ಹಾಗೂ ಉಪಾಧ್ಯಕ್ಷರಾದ ವಿಜಯಕುಮಾರ್ ಶೆಟ್ಟಿ ಕಾರ್ಯದರ್ಶಿಯಾದ ಸಿದ್ರಾಮ ಕಟ್ಟಿ, ಸಹ ಕಾರ್ಯದರ್ಶಿ ಸತೀಶ್ ನಲ್ಲಿ, ವೆಂಕಟರೆಡ್ಡಿ ಪಾಟೀಲ್, ಎ ಎನ್ ಪರಿಟ್, ಸಿದ್ದಣ್ಣ ನೀಲ್ಕೋಡ್, ಮದನ್ ರಾವ್ ಕುಲಕರ್ಣಿ, ಶಕುಂತಲಾ ಬಿಳವಾರ, mg ಬಿರಾದರ, ಜಯಶ್ರೀ ತಮ್ಮನಿ, ಶರಣಮ್ಮ ಸುಲ್ತಾನ್ ಪುರ, ಸರುಬೈ ಕಲಬುರಗಿ, ಮಹಾದೇವಿ ಜಿಡಿಗ, ಲಕ್ಷ್ಮೀಬಾಯಿ ಪಡಸಲಗಿ,ಹೀಗೆ ಹಲವಾರು ಟಿಪಿಜೆಪಿ ಸಂಘಟನೆಯ ಪದಾಧಿಕಾರಿಗಳು ಗ್ರಾಹಕರು ಉಪಸ್ಥಿತರಿದ್ದರು
ವರದಿ ಜಟ್ಟಪ್ಪ ಎಸ್ ಪೂಜಾರಿ