ಜೈನ ಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣ

ಜೈನ ಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣ

ಜೈನ ಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣ  

ಆಳಂದ: ಪಟ್ಟಣದ ಎಚ್‌ಕೆಇ ಪ್ರತಿಷ್ಠಿಯ ಎ.ವ್ಹಿ.ಪಾಟೀಲ ಪದವಿ ಮಹಾವಿದ್ಯಾಲಯದಲ್ಲಿ ನ.13ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಜೈನ ಸಾಹಿತ್ಯ, ಸಂಸ್ಕೃತಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಪ್ರಾಚೀನ ಜೈನ್ ಸಾಹಿತ್ಯ ಮಹಿಳೆ ಕುರಿತಾದ ರಾಷ್ಟ್ರ ಮಟ್ಟದ ವಿಚಾರ ಸಂಕಿಣವನ್ನು ಬೆಳಗಿನ 10:30ಗಂಟೆಗೆ ಮಹಾವಿದ್ಯಾಲದಲ್ಲಿ ನಡೆಯಲಿದೆ ಎಂದು ಪ್ರಾಚಾರ್ಯ ಡಾ. ಎಸ್.ಎಚ್. ಹೊಸಮನಿ ಅವರು ತಿಳಿಸಿದ್ದಾರೆ. 

ವಿಚಾರ ಸಂಕಿರಣವನ್ನು ಮುಖ್ಯಮಂತ್ರಿ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಉದ್ಘಾಟನೆ ನೆರವೇರಿಸುವರು. ಹಂಪಿ ಕನ್ನಡ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎಚ್‌ಕೆಇ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಶಶೀಲ ಜಿ. ನಮೋಶಿ, ಎಚ್‌ಕೆಇ ಸದಸ್ಯ ನಾಗಣ್ಣ ಘಂಟಿ ಆಗಮಿಸುವರು ಎಂದು ಹೇಳಿದರು.

ಬಳಿಕ ನಡೆಯುವ ಮೊದಲು ಘೋಷ್ಠಿಯ ಅಧ್ಯಕ್ಷತೆ ಕೇಂದ್ರೀಯ ವಿವಿ ದೈಹಿಕ ನಿರ್ದೇಶಕ ಡಾ.ಎಂ.ಎಸ್. ಪಾಸೋಡಿ ವಹಿಸುವರು. ಡಾ. ಅನುಪಮ ಕರಡಣ್ಣನವರ, ಡಾ, ಸಂತೋಷಕುಮಾರ ಜಿ. ಡಾ. ವೀರಶೆಟ್ಟಿ ಮೈಲೂರಕರ್, ಡಾ. ತರಿಹಳ್ಳಿ ಹನುಮಂತಪ್ಪ ಮತ್ತು ಡಾ. ವಿಜಯಕುಮಾರ ಹೆಚ್.ಜಿ ಅವರು ಜೈನ್ ಸಾಹಿತ್ಯದಲ್ಲಿ ಮಹಿಳೆ ಕುರಿತು ಮಾತನಾಡುವರು. 

ಎರಡನೇ ಗೋಷ್ಠಿಯಲ್ಲಿ ಕಲಬುರಗಿ ವಿವಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ. ಎಚ್.ಟಿ. ಪೋತೆ ಅಧ್ಯಕ್ಷತೆ ವಹಿಸುವರು. ಮಧ್ಯಕಾಲೀನ ಜೈನ್ ಸಾಹಿತ್ಯದಲ್ಲಿ ಮಹಿಳೆಯ ವಿಷಯದಲ್ಲಿ ಡಾ. ಸೂರ್ಯಕಾಂತ, ಪ್ರೊ. ಸಂಜಯ ಪಾಟೀಲ, ಡಾ. ಚಂದ್ರಕಲಾ ಬಿದ್ರಿ, ಡಾ. ಶ್ರೀಶೈಲ ನಾಗರಾಳ ಮತ್ತು ಡಾ. ಅಮೃತ ಕಟಕೆ  ಮಾತನಾಡುವರು. 

ಕೊನೆಯ ಸಂವಾದ ಘೋಷ್ಠಿ ಅಧ್ಯಕ್ಷತೆಯನ್ನು ಸ್ವತಹ ವಹಿಸಿಕೊಳ್ಳಲಾಗುವುದು. ಪ್ರಾಚೀನ ಜೈನ ಸಾಹಿತ್ಯ ಮಹಿಳೆ ಪ್ರಸ್ತುತತೆ ವಿಷಯವನ್ನು ಸೋಲ್ಲಾಪೂರದ ಹಿರಿಯ ವಿದ್ವಾಂಸ ಡಾ. ಸುಜಾತ ಶಾಸ್ತಿç ಮಂಡಿಸಲಿದ್ದಾರೆ. ಈ ವೇಳೆ ಡಾಅ. ಅನುಷಾ ಎಸ್. ಈ. ಸೇರಿದಂತೆ ಅನೇಕರು ಪಾಲ್ಗೊಳ್ಳುವರು. ಮಧ್ಯಾಹ್ನ 5:30ಗಂಟೆಗೆ ನಡೆಯುವ ಸಮಾರೋಪ ಸಮಾರಂಭ ಭಾಷಣವನ್ನು ಬೆಂಗಳೂರಿನ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ಕೈಗೊಳ್ಳುವರು. ಮುಖ್ಯ ಅತಿಥಿಗಳಾಗಿ ಎಚ್‌ಕೆಇಎಸ್ ಉಪಾಧ್ಯಕ್ಷ ರಾಜಾ ಬಿ. ಭೀಮಳ್ಳಿ, ವೀರಶೈವ ಸಮಾಜ ತಾಲೂಕು ಅಧ್ಯಕ್ಷ ಶರಣಬಸಪ್ಪ ಪಾಟೀಲ, ಜೈನ್ ಸಮಾಜ ಹಿರಿಯ ಪಿ.ಎನ್. ಶಹಾ ಆಗಮಿಸುವರು. ಹಂಪಿ ವಿವಿ ಕುಲಸಚಿವ ಡಾ. ವಿಜಯ ಪೂಣಚ್ಛ ತಂಬಂಡ ಅಧ್ಯಕ್ಷತೆ ವಹಿಸುವರು ಎಂದು ಪ್ರಾಚಾರ್ಯ ಎಸ್.ಎಚ್. ಹೊಸಮನಿ ಅವರು ತಿಳಿಸಿದ್ದಾರೆ. 

ವರದಿಗಾರರು ಡಾ ಅವಿನಾಶ ಎಸ್ ದೇವನೂರ