ಕೋಮಲ ಕೆಫೆ ಮರುಸ್ಥಾಪನೆ — ವ್ಯವಹಾರ ಮೀರಿ ಪ್ರೀತಿಯ ಉಪಹಾರ

ಕೋಮಲ ಕೆಫೆ ಮರುಸ್ಥಾಪನೆ — ವ್ಯವಹಾರ ಮೀರಿ ಪ್ರೀತಿಯ ಉಪಹಾರ

ಕೋಮಲ ಕೆಫೆ ಮರುಸ್ಥಾಪನೆ — ವ್ಯವಹಾರ ಮೀರಿ ಪ್ರೀತಿಯ ಉಪಹಾರ

ಕಲಬುರಗಿ, ಅ.16:ನಗರದ ಪ್ರಮುಖ ಎಸ್.ವಿ.ಪಿ. ವೃತ್ತದಲ್ಲಿ “ಕೋಮಲ ಕೆಫೆ” ಮರುಸ್ಥಾಪನೆಗೊಂಡು ಭಾನುವಾರ ಸಡಗರದಿಂದ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ವ್ಯವಹಾರಕ್ಕಿಂತಲೂ ಪ್ರೀತಿ ಮತ್ತು ಮಾನವೀಯತೆಯ ಮೌಲ್ಯಗಳನ್ನು ಮುಂಚೂಣಿಗೆ ತಂದು “ಗ್ರಾಹಕರೇ ನನ್ನ ದೇವರು” ಎಂಬ ಮನೋಭಾವದಿಂದ ಮಾಲೀಕ ಶಂಕರ ಬಿಲಗುಂದಿ ಅವರು ವಿಶಿಷ್ಟ ರೀತಿಯಲ್ಲಿ ಅತಿಥಿಗಳಿಗೆ ಉಪಚಾರ ನೀಡಿದರು.

ಅವರು ಗ್ರಾಹಕರಿಗೆ ಹಾಲು ಕುಡಿಸಿ, ಆತ್ಮೀಯವಾಗಿ ಆಲಿಂಗನ ನೀಡಿ, “ಗಟ್ಟಿ ವಿಶ್ವಾಸಕ್ಕೆ ವ್ಯವಹಾರ ಮೀರಿ ಪ್ರೀತಿಯ ಉಪಹಾರವೇ ಮುಖ್ಯ” ಎಂಬ ಸಂದೇಶ ನೀಡಿದರು. ನಗರದಲ್ಲಿ 7 ಹೋಟೆಲ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಶಂಕರ ಬಿಲಗುಂದಿ ಅವರು ತಮ್ಮ ಸೇವಾಭಾವದಿಂದ ಜನಮನ ಗೆದ್ದಿದ್ದಾರೆ.

ಸಾಮಾಜಿಕ ನ್ಯಾಯ ಪರ ಹೋರಾಟಗಾರರೊಬ್ಬರು ಹೇಳುವಂತೆ — “ಶಂಕರ ಬಿಲಗುಂದಿಯವರ ಮಾನವೀಯತೆ, ಪ್ರೋತ್ಸಾಹದ ಮಾತುಗಳು ನನ್ನ ಹೋರಾಟಕ್ಕೆ ಶಕ್ತಿ ನೀಡಿದ್ದಾರೆ. ಪ್ರತಿ ವರ್ಷ ನಮ್ಮ ವಿವಾಹ ವಾರ್ಷಿಕೋತ್ಸವದಂದು ಕೋಮಲ ಕೆಫೆ ನೀಡುವ ಸಿಹಿ ಭೋಜನ ನಮ್ಮ ಕುಟುಂಬದ ಪ್ರೀತಿಯ ಭಾಗವಾಗಿದೆ.”

ಮಾನವೀಯತೆ, ವಿಶ್ವಾಸ ಮತ್ತು ಪ್ರೀತಿಯ ಸಂಕೇತವಾಗಿ ಬೆಳಗುತ್ತಿರುವ ಕೋಮಲ ಕೆಫೆ ಇದೀಗ ಕಲಬುರಗಿ ನಗರಕ್ಕೆ ಹೆಮ್ಮೆಯ ವಿಳಾಸವಾಗಿದೆ.