ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಪಿ. ಡಬ್ಲ್ಯೂ.ಡಿಯಲ್ಲಿ ಆಚರಣೆ

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಲೋಕೋಪಯೋಗಿ ಕಚೇರಿಯಲ್ಲಿ ಆಚರಣೆ
ಕಲಬುರ್ಗಿ: ಲೋಕೋಪಯೋಗಿ ಭವನ, ಕಲಬುರ್ಗಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಸಡಗರದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಶ್ರೀ ಶರಣಪ್ಪ ಸುಲುಗುಂಟೆ, ಮುಖ್ಯ ಅಭಿಯಂತರು, ಲೋಕೋಪಯೋಗಿ ಇಲಾಖೆ, ಕಲಬುರ್ಗಿ ವಹಿಸಿಕೊಂಡಿದ್ದರು.
ಕಾರ್ಯಕ್ರಮಕ್ಕೆ ನೇತೃತ್ವವನ್ನು ಶ್ರೀ ಸುರೇಶ್ ಶರ್ಮಾ, ಅಧೀಕ್ಷಕ ಅಭಿಯಂತರು, ಲೋಕೋಪಯೋಗಿ ವೃತ್ತ, ಕಲಬುರ್ಗಿ ವಹಿಸಿಕೊಂಡಿದ್ದರು. ವಿಶೇಷ ಅತಿಥಿಗಳಾಗಿ ಶ್ರೀ ಸೂರ್ಯಕಾಂತ್ ಮೇಧ, ಅಧೀಕ್ಷಕ ಅಭಿಯಂತರರು, ಶ್ರೀ ಸುಭಾಷ್ ಶಿಕ್ಷಣಕರ್ ಮತ್ತು ಶ್ರೀ ಮೊಹಮ್ಮದ್ ಇಬ್ರಾಹಿಂ, ಕಾರ್ಯನಿರ್ವಾಹಕ ಅಭಿಯಂತರರು ಪಾಲ್ಗೊಂಡರು.
ಇದಕ್ಕೂ ತಪ್ಪದೇ, ಶ್ರೀ ಸೂರ್ಯಕಾಂತ್ ಕಾರ್ಬಾರಿ, ಶ್ರೀ ರಾಜೇಂದ್ರ, ಶ್ರೀ ಶಿವರಾಜ್ ಪಾಟೀಲ್, ಶ್ರೀ ಗುಲಾಮ್ ಮೈನುದ್ದೀನ್, ಶ್ರೀ ಶ್ರೀಮಂತ ಕೋಟೆ, ಶ್ರೀಮಂತ ಬೆನ್ನೂರ್, ಶ್ರೀ ಅಮರ್ನಾಥ್ ದೂಳೆ, ಶ್ರೀ ಜಯರಾಜ್ ಆರ್ ಎನ್, ಶ್ರೀ ಶರಣಗೌಡ ಮಾಲಿಪಾಟೀಲ್, ಶ್ರೀ ಭೀಮಣ್ಣ ನಾಯಕ್, ಶ್ರೀ ದೇವೇಂದ್ರಪ್ಪ, ಶ್ರೀ ಮಾಂತೇಶ್ ರೂಡಗಿ, ಶ್ರೀ ಕಾಳಪ್ಪ, ಶ್ರೀ ಶಾಂತಪ್ಪ ನಂದೂರ್, ಶ್ರೀ ಶಶಿಕಾಂತ್ ಕಮಲಾಪುರಕರ್, ಶ್ರೀ ಚಕ್ಕರ್ದನ್, ಶ್ರೀ ಮಲ್ಲಿಕಾರ್ಜುನ್ ಸಂಗೊಳ್ಳಿ, ಶ್ರೀ ಉಮಾಕಾಂತ್ ಹಿರೋಳಿಕರ್, ಶ್ರೀ ಕಮಲಾಕರ್ ಆನೆಗುಂದಿ, ಶ್ರೀ ಅಬ್ದುಲ್ ರಾಫು, ಶ್ರೀ ಶರಣ್ ರಾಜ್ ಚಪ್ಪರಬಂದಿ, ಶ್ರೀ ಜಗದೀಶ್, ಶ್ರೀ ಕಿತ್ತೆಂದ್ರ, ಶ್ರೀ ಶಾಂತವೀರ್, ಶ್ರೀ ಶಶಿನಾಥ್, ಶ್ರೀ ನಾಗರಾಜ್, ಶ್ರೀ ಬಸವರಾಜ್ ಬಾಗೋಡಿ, ಶ್ರೀ ಮೀರ್ ಮೊಹಮ್ಮದ್ ಅಲಿ, ಶ್ರೀ ರಾಜಕುಮಾರ ಒಂಟಿ, ಶ್ರೀ ಅಶೋಕ್ ಸಜ್ಜನ್ ಮತ್ತು ಹಲವಾರು ಗಣ್ಯರು ಹಾಜರಿದ್ದರು.
ಮಹಿಳೆಯರಾದ ಶ್ರೀಮತಿ ಚಂದ್ರಕಲಾ, ಶ್ರೀಮತಿ ಕುಂದಮ್ಮ, ಶ್ರೀಮತಿ ಸುನಂದ, ಕುಮಾರಿ ಭಾಗ್ಯಶ್ರೀ, ಶ್ರೀಮತಿ ಮಾದೇವಿ, ಶ್ರೀಮಂತಿ ಶಾಂತಾಬಾಯಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಾಷಣ ಮಾಡಿದ ಶ್ರೀ ಸುರೇಶ್ ಶರ್ಮಾ ಅವರು, "ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಎಲ್ಲ ಸಮಾಜದ ಏಕತೆಗಾಗಿ ಸಂವಿಧಾನವನ್ನು ರೂಪಿಸಿದ್ದಾರೆ. ಅದನ್ನು ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ," ಎಂದು ಹೇಳಿದರು.
ಕಾರ್ಯಕ್ರಮದ ಭಾಗವಾಗಿ ಲೋಕೋಪಯೋಗಿ ಇಲಾಖೆ, ಕಲಬುರ್ಗಿ ವತಿಯಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಸಾರ್ವಜನಿಕರಿಗಾಗಿ ಅನ್ನದಾಸೋಹ ಕೂಡ ಏರ್ಪಡಿಸಲಾಗಿತ್ತು.