ಕ್ರೀಡೆಗಳು ದೈಹಿಕ ಆರೋಗ್ಯಕ್ಕೆ ಅತ್ಯಗತ್ಯ :..

|ತಾಲ್ಲೂಕ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ|
ಕ್ರೀಡೆಗಳು ದೈಹಿಕ ಆರೋಗ್ಯಕ್ಕೆ ಅತ್ಯಗತ್ಯ :..
ಶಹಾಬಾದ : - ತಾಲ್ಲೂಕ ಮಟ್ಟದ ದಸರಾ ಕ್ರೀಡಾಕೂಟ ಬಿವಿಎಮ ಶಾಲೆಯ ಕ್ರೀಡಾ ಮೈದಾನದಲ್ಲಿ ಚಾಲನೆ ದೊರೆಯಿತು.
ಕ್ರೀಡಾ ಧ್ವಜಾರೋಹಣ ನೆರವೇರಿಸಿದ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ ಮಾತನಾಡಿ, ಕ್ರೀಡೆಗಳು ಕೇವಲ ಸ್ಪರ್ಧೆಗಾಗಿ ಮಾತ್ರವಲ್ಲ. ದೈಹಿಕ ಆರೋಗ್ಯಕ್ಕೂ ಅತ್ಯಗತ್ಯ, ರಾಜ್ಯ ಮತ್ತು ರಾಷ್ಟ್ರದಲ್ಲಿಯೂ ಸಹ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದ್ದು, ಕ್ರೀಡಾಪಟುಗಳು ಇದರ ಸದುಪಯೋಗ ಪಡೆದು ಕೊಳ್ಳುವದರ ಜೊತೆಗೆ ನೀವೆಲ್ಲ ಇಲ್ಲಿ ವಿಜೇತರಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕ ದೇಶದ ಘನತೆ, ಗೌರವ ತರಬೇಕು ಎಂದು ತಿಳಿಸಿದರು.
ನಗರ ಸಭೆ ಮಾಜಿ ಸದಸ್ಯ ರಾಜು ಮೇಸ್ತ್ರಿ ಮೇಜರ್ ಧ್ಯಾನ ಚಂದ ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ತಾಲ್ಲೂಕ ಮಟ್ಟದ ದಸರಾ ಕ್ರೀಡಾಕೂಟದ ವೇದಿಕೆ ಮೇಲೆ ಗ್ರೇಡ್ 1 ದೈಹಿಕ ಶಿಕ್ಷಕ ಸಂಘದ ಹಣಮಂತ ಬಿರಾದರ, ಬಿವಿಎಮ ಶಾಲೆಯ ಮುಖ್ಯ ಗುರು ಗಂಗಾಧರ, ಬನ್ನಪ್ಪ ಎನ, ಗಣೇಶ ಜಾಯಿ, ರತನರಾಜ ಕೋಬಾಳ ಇದ್ದರು.
ತಾಲ್ಲೂಕ ದಸರಾ ಕ್ರೀಡಾಕೂಟದಲ್ಲಿ ವಾಲಿಬಾಲ್ ನಲ್ಲಿ ಫ್ರೇಂಡ್ಸ್ ಡಿ. ಟೀಮ್ ಪ್ರಥಮ ಸ್ಥಾನ, ಕಬಡ್ಡಿಯಲ್ಲಿ ಹೊನ್ನಗುಂಟಾ ಪ್ರಥಮ ಸ್ಥಾನ, ಕೂಡಲ ಸಂಗಮ ಶಾಲೆ ದ್ವಿತೀಯ ಸ್ಥಾನ,
ಖೋ ಖೋ ಆಟದಲ್ಲಿ ಹಿರೋಡೇಶ್ವರ ಮಾಲಗತ್ತಿ ಪ್ರಥಮ ಸ್ಥಾನ, ಬಿವಿಎಮ ದ್ವಿತೀಯ ಸ್ಥಾನ ಪಡೆದು ಕೇಕೆ ಹಾಕಿದರು.
ದಸರಾ ಕ್ರೀಡಾಕೂಟದಲ್ಲಿ ತಾಲ್ಲೂಕಿನ ವಿವಿಧ ಗ್ರಾಮದ ಮತ್ತು ಶಾಲೆಯ ವಿದ್ಯಾರ್ಥಿಗಳು ಹಾಗೂ ಯುವಕ, ಯುವತಿಯರು ಭಾಗವಹಿಸಿದ್ದರು.