ಬಸವ ಜಯಂತಿ ಪೂರ್ವಭಾವಿ ಸಭೆ ಬಹಿಷ್ಕರಿಸಿ ನಡೆದ ಸಮಾಜದ ಮುಖಂಡರು : ನಾಳೆ ಬೆಳಿಗ್ಗೆ 9 ಗಂಟೆಗೆ ಸಭೆ ಮುಂದೂಡಿಕೆ
ಬಸವ ಜಯಂತಿ ಪೂರ್ವಭಾವಿ ಸಭೆ ಬಹಿಷ್ಕರಿಸಿ ನಡೆದ ಸಮಾಜದ ಮುಖಂಡರು : ನಾಳೆ ಬೆಳಿಗ್ಗೆ 9 ಗಂಟೆಗೆ ಸಭೆ ಮುಂದೂಡಿಕೆ
ಚಿಂಚೋಳಿ :
ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನವರ ಜಯಂತಿಯ ನಿಮ್ಮಿತ್ತವಾಗಿ ತಹಸೀಲ್ ಆಡಳಿತ ಸೌಧದ ಕಚೇರಿಯಲ್ಲಿ ಆಡಳಿತವತಿಯಿಂದ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ಈ ಪೂರ್ವ ಭಾವಿ ಸಭೆಯಲ್ಲಿ ಬಹುತೇಕ ಅಧಿಕಾರಿಗಳು ಸಭೆಯಿಂದ ಅಂತರ ಕಾಯ್ದುಕೊಂಡು ದೂರ ಉಳಿದು ಗೈರಾಗಿರುವುದು ಸಭೆ ಬಸವಣ್ಣನವರಿಗೆ ಅಗೌರವ ತೋರಿದಂತೆ ಬಾಸವಾಗಿರುವುದಕ್ಕೆ ಸಮಾಜದ ಮುಖಂಡರು ತೀವ್ರವಾಗಿ ಖಂಡನೇ ವ್ಯಕ್ತಪಡಿಸಿ, ಸಭೆಯನ್ನು ಬಹಿಷ್ಕರಿಸಿ, ಹೊರಗೆ ನಡೆದ ಘಟನೆ ಜರುಗಿತು. ಅಖಿಲ ಭಾರತ ವೀರಶೈವ ಲಿಂಗಾಯತ ಸಭಾ ಅಧ್ಯಕ್ಷ ಶರಣು ಪಾಟೀಲ್ ಮೋಟಕಪಳ್ಳಿ, ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ನೀಲಕಂಠ ಸಿಳ್ಳಿನ, ಯುವ ಅಧ್ಯಕ್ಷ ವೀರೇಶ ಯಂಪಳ್ಳಿ, ಚಿತ್ರಶೇಖರ ಪಾಟೀಲ್, ಸೂರ್ಯಕಾಂತ ಹುಲಿ ಸೇರಿದಂತೆ ಸಮಾಜದ ಮುಖಂಡರುಗಳು ಅಧಿಕಾರಿಗಳು ಸಭೆಗೆ ಬಾರಾದೇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ಹೊರಗೆ ನಡೆದಿದ್ದರಿಂದ ತಹಸೀಲ್ದಾರರು ಸಭೆ ಮುಂದೂಡಿದರು.
ಇಂದಿನ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟೀಸ್ ನೀಡಿ, ಸಭೆಯನ್ನು ನಾಳೆ ಬೆಳಿಗ್ಗೆ 9 ಗಂಟೆಗೆ ಮತ್ತೇ ಜಯಂತಿ ಪೂರ್ವ ಭಾವಿ ಸಭೆ ನಡೆಸಲಾಗುತ್ತದೆ ಎಂದು ತಹಸೀಲ್ದಾರರು ತಿಳಿಸಿದ್ದಾರೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ನಾಳಿನ ಸಭೆಯಲ್ಲಿ ಹಾಜರಿರಲು ಸಮಾಜದ ಅಧ್ಯಕ್ಷ ವಕೀಲ ಶರಣು ಪಾಟೀಲ್ ಮೋತಕಪಳ್ಳಿ ಅವರು ಕೋರಿದ್ದಾರೆ.