ಶರಣರ ವೃಕ್ಷ ಜೀವನ ದರ್ಶನ- ಪ್ರವಚನ, ಸಪ್ಟೆಂಬರ್ 21 ರಿಂದ ಪ್ರಾರಂಭ

ಶರಣರ ವೃಕ್ಷ ಜೀವನ ದರ್ಶನ- ಪ್ರವಚನ,  ಸಪ್ಟೆಂಬರ್ 21 ರಿಂದ ಪ್ರಾರಂಭ

ಶರಣರ ವೃಕ್ಷ ಜೀವನ ದರ್ಶನ- ಪ್ರವಚನ, ಸಪ್ಟೆಂಬರ್ 21 ರಿಂದ ಪ್ರಾರಂಭ 

ದಾಸಿಮಯ್ಯನವರು ಆದ್ಯ ವಚನಕಾರ ಎಂಬುದಷ್ಟೇ ಅವರ ಹೆಗ್ಗಳಿಕೆಯಲ್ಲ. ಮುಂದಿನ ಹನ್ನೆರಡನೆಯ ಶತಮಾನದ ಆಂದೋಲನಕ್ಕೆ ಹನ್ನೊಂದನೆಯ ಶತಮಾನದಲ್ಲಿಯೇ ನಾಂದಿ ಹಾಡಿದವರು. ನೀಲ ನಕ್ಷೆ ತಯಾರಿಸಿ ನೀಡಿದವರು .ಎಂದು ಹಿರಿಯ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ತಿಳಿಸಿದರು. 

ಉದಯೋನ್ಮುಖ ಪ್ರವಚನಕಾರರಾಗಿ ಹೊರ ಹೊಮ್ಮುತ್ತಿರುವ, ಮಾದನ ಹಿಪ್ಪರಗಾದ (ಆಕಾಶ) ಮೃತುಂಜಯ ಶ್ರೀ ಗಳು ಮನಮುಟ್ಟಿ, ಅಸ್ಮಿತೆ ತುಂಬುವಂತೆ ಮೂಡಿಬರುತಿದೆ 

 ಕಲಬುರಗಿಯ ಸ್ಥಳೀಯ ದಾಸಿಮಯ್ಯ ನಗರದ ಶ್ರೀ ಸದ್ಗುರು ರೇವಣಸಿದ್ದ ಶಿವಶರಣರ ಮಠದಲ್ಲಿ ಪ್ರವಚನದ ನಡೆಯುತ್ತಿದೆ.

ಸಸ್ಥಾಪುರ್ ಮಠದ ಶ್ರೀ ಈಶ್ವರಾನಂದ್ ಸ್ವಾಮಿಗಳ ಅವರ ಸಂಚಾಲನೆಯಲ್ಲಿ ವಚನ ಪ್ರಾರ್ಥನೆಯೊಂದಿಗೆ ರಾತ್ರಿ 8.15 ಕ್ಕೆ ಗಂಟೆಗೆ ಪ್ರಾರಂಭವಾಯಿತು.

 ನಂತರ ಅನಪೋಚಾರಿಕ ಸಭೆಯಲ್ಲಿ ವಿಷಯಗಳು ಚರ್ಚೆ ಆದವು 

ಇದೆ ರೀತಿ ನಮ್ಮ ಆದ್ಯ ಶರಣ ದಾಸಿಮಯ್ಯ ನವರ ಜೀವನ ಚರಿತ್ರೆ ಕುರಿತು ಒಂದು ತಿಂಗಳ ಶರಣ ಸಂಗಮ ಕಾರ್ಯಕ್ರಮದ ಬಗ್ಗೆ, ಮಾರ್ಗ ಸೂಚಿ, ವಿಶ್ವಾಸ, ಆಶ್ವಾಸನೆಗಳು ಮತ್ತು ಸಲಹೆ ಸೂಚನೆಗಳು ಮೂಡಿಬಂದವು. 

ರಾಜಕೀಯ ಧುರೀಣರಾದ ಹಾಗೂ ನೇಕಾರ ಒಕ್ಕೂಟದ ಗೌರವಾಧ್ಯಕ್ಷ ರಾದ ಶ್ರೀ ಚಂದ್ರಶೇಖರ ಸುಲ್ತಾನಪೂರ್ ಅವರ ಸಕ್ರಿಯ ನೇತೃತ್ವದಲ್ಲಿ ಮತ್ತು ಈರಣ್ಣ ಸೊನ್ನದ ರವರು ಸಲ್ಲಿಸಿದ 

ಪ್ರಸಾದ ಸೇವೆ ತುಂಬಾ ರುಚಿಯಾಗಿದಿತ್ತು. 

ಮಳೆಯಿಂದ ದಾಸಿಮಯ್ಯ ಅನುಯಾಯಿಗಳಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಉಪಸ್ಥಿತರಾಗಲು ಅನಾನುಕೂಲವಾದರೂ 

ಒಟ್ಟಾರೆ ನಮ್ಮಕಲಬುರ್ಗಿಯ ಆರಾಧ್ಯ ದೈವ ಶರಣಬಸವೇಶ್ವರ ಸ್ವರೂಪಿ ಸ್ಥಾನದಲ್ಲಿ ಸಮಾಜದ ಇಬ್ಬರು ಶ್ರೀಗಳ ಉಪಸ್ಥಿತಿಯಲ್ಲಿ ಪ್ರಪ್ರಥಮವಾಗಿ ಹಮ್ಮಿಕೊಂಡ 

ಶರಣರ ವೃಕ್ಷ ಜೀವನ ದರ್ಶನ- ಪ್ರವಚನ, 2024 ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬರುತ್ತಿರುವ ಸಂಗತಿಯೇ ಹರ್ಷ ಉಂಟಾಗಿದೆ ಎಂದು ಸಪ್ತ ನೇಕಾರರ ಸೇವಾ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲಪೂರ ತಿಳಿಸಿದ್ದಾರೆ. 25.9.24 ರ ಪ್ರವಚನ ಕಾರ್ಯಕ್ರಮದಲ್ಲಿ ನೇಕಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಾಂತಕುಮಾರ ಯಳಸಂಗಿ, ರೇವಣ್ಣಸಿದ್ದಸ್ವಾಮಿ, ಪುರವಂತ ಬಡಾವಣೆಯ ನಿವಾಸಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಯುವಕರು, ಅಕ್ಕಾ, ತಂಗಿಯರು ತಾಯಿಯಂದಿರು, ಹಿರಿಯರು ಉಪಸ್ಥಿತರಿದ್ದರು ಎಂದು ನ್ಯಾಯ ವಾದಿ ಜೆ.ಎಸ್.ವಿನೋದ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಜಿಲ್ಲಾ ನೇಕಾರರ ಮಹಾಸಭಾ, ಕಲಬುರ್ಗಿ