ಹಾಸ್ಟೆಲ್ ಅವ್ಯವಸ್ಥೆ ಕಂಡು ಶಾಸಕ ತಳವಾರ ಗರಂ

ಹಾಸ್ಟೆಲ್ ಅವ್ಯವಸ್ಥೆ ಕಂಡು ಶಾಸಕ ತಳವಾರ ಗರಂ
ಶಹಾಬಾದ : - ತಾಲ್ಲೂಕಿನ ಶಹಾಬಾದ ರಸ್ತೆಯಲ್ಲಿರುವ ಕಲ್ಯಾಣ ನಗರದ ಹಿಂದುಳಿದ ವರ್ಗಗಳ ಡಿ. ದೇವರಾಜ ಅರಸ್ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯಕ್ಕೆ ವಿಧಾನ ಪರಿಷತ್ ಸದಸ್ಯರಾದ ಡಾ. ತಳವಾರ ಸಾಬಣ್ಣಾ ಅವರು ದಿಡೀರ ಭೇಟಿ ನೀಡಿ ಹಾಸ್ಟೆಲ್ ಅವ್ಯವಸ್ಥೆಯನ್ನು ಕಂಡು ವಸತಿ ನಿಲಯದ ಮೇಲ್ವಿಚಾರಕರು ಮತ್ತು ಸಿಬ್ಬಂದಿಗಳನ್ನು ತರಾಟೆ ತೆಗೆದುಕೊಂಡರು.
ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಶಾಸಕರು ವಿದ್ಯಾರ್ಥಿಗಳನ್ನ ವಿಚಾರಿಸಿದಾಗ, ಹಾಸ್ಟೆಲ್ ನಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ, ಹಾಸ್ಟೆಲ್ ಸ್ನಾನಗೃಹ, ಶೌಚಾಲಯಗಳು ಮನುಷ್ಯರು ಉಪಯೋಗ ಮಾಡದಂತ ಸ್ಥಿತಿಯಲ್ಲಿದೆ, ಶೌಚಾಲಯ ಮತ್ತು ಸ್ನಾನದ ಕೋಣೆಗಳಲ್ಲಿ ನೀರು ತುಂಬಿಕೊಂಡು ಹೊಲಸು ಕೋಣೆಯಲ್ಲಿಯೇ ಉಳಿದು ದುರ್ವಾಸನೆ ಬರುತ್ತಿದೆ, ಅಡುಗೆ ಕೋಣೆಯ ಆಹಾರ ಯಾವಾಗಲೊ ಮಾಡಿ ಇಡಲಾಗಿದೆ ಮತ್ತು ಆಹಾರ ಗುಣಮಟ್ಟದಿಂದ ಕೂಡಿಲ್ಲ, ಹಾಸ್ಟೆಲ್ ಅಡುಗೆ ಕೋಣೆಯ ಪಕ್ಕದಲ್ಲಿಯೇ ಗಟಾರಾ (ಚರಂಡಿ ನೀರು ನಿಂತು ಕೆಟ್ಟ ವಾಸನೆ ಬರುತ್ತಿದೆ) ತುಂಬಿಕೊಂಡು ದುರ್ವಾಸನೆ ಬರುತ್ತಿದೆ, ಈ ಸ್ಥಳದಲ್ಲಿ ವಿದ್ಯಾರ್ಥಿಗಳು ಊಟ ಮಾಡುವ ಭೀಕರ ಪರಿಸ್ಥಿತಿ ಈ ಹಾಸ್ಟೆಲ್ ನಲ್ಲಿ ಇದೆ, ಹಾಸ್ಟೆಲ್ ಕಾರಿಡಾರಿನಲ್ಲಿ ಊಟ ಮಾಡಿ ಎಲ್ಲಾ ಕಡೆ ತಟ್ಟೆಯಲ್ಲಿ ಆಹಾರ ಬಿಡಲಾಗಿದೆ, ಇದರಿಂದ ಕಾರಿಡಾರ ಹೊಲಸಾಗಿ ಗಬ್ಬು ನಾರುತ್ತಿದೆ.
ಹಾಸ್ಟೆಲ್ ನ ಕಾಯಂ ಸಿಬ್ಬಂದಿಗಳು ತಮ್ಮ ಬದಲು ಬೇರೆ ಜನರಿಗೆ ದುಡ್ಡು ಕೊಟ್ಟು ಕೆಲಸ ಮಾಡಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು, ಒಟ್ಟಾರೆ ಈ ಎಲ್ಲಾ ಸಮಸ್ಯೆಗಳಿಂದ ಹಾಸ್ಟೆಲ್ ನಲ್ಲಿ ಇಲ್ಲದಂತಾಗಿದೆ, ವಾರ್ಡನ್ ಸರಿಯಾಗಿ ವಿದ್ಯಾರ್ಥಿಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಸಮಸ್ಯೆಗಳನ್ನು ಶಾಸಕರ ಮುಂದೆ ಬಿಚ್ಚಿಟ್ಟರು.
ಕೂಡಲೇ ವಸತಿ ನಿಲಯದಲ್ಲಿನ ಅವ್ಯವಸ್ಥೆಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ವಿಧ್ಯಾರ್ಥಿಗಳು ಬೇಡಿಕೊಂಡರು.
ಕೋಟ ಮಾಡಿ :..ಗ್ರಾಮೀಣ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು ಎಷ್ಟರ ಮಟ್ಟಿಗೆ ತಲುಪುತ್ತಿವೆ ಎನ್ನಲು ಇಲ್ಲಿಯ ವಸತಿ ನಿಲಯವೇ ಸಾಕ್ಷಿಯಾಗಿದೆ, ಈ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವರದಾನವಾಗುವ ಬದಲು ಮಾರಕವಾಗಿರುವುದು ದುರಂತವಾಗಿದೆ, ಸರಿಪಡಿಸದಿದ್ದರೆ ಸರಕಾರಕ್ಕೆ ವರದಿನೀಡುತ್ತೇನೆ :..ಡಾ.ಸಾಬಣ್ಣಾ ತಳವಾರ ಶಾಸಕರು, ವಿಧಾನ ಪರಿಷತ್ತ.