ಎಂ ಎಸ್ ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ಮೌಲ್ಯವರ್ಧಿತ ಕೋರ್ಸ್ ಸಮಾರೋಪ ಸಮಾರಂಭ
ಎಂ ಎಸ್ ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ಮೌಲ್ಯವರ್ಧಿತ ಕೋರ್ಸ್ ಸಮಾರೋಪ ಸಮಾರಂಭ
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣೀ ಪದವಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಿಂದ ಮೌಲ್ಯವರ್ದಿತ ಕೋರ್ಸ್
ಸಮಾರೋಪ ಸಮಾರಂಭ ನಡೆಯಿತು
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಡಾ. ಸಮೀನಾ ಸಿಂದಗಿಕರ್ ಸಹಾಯಕ ಪ್ರಾಧ್ಯಾಪಕರು ಕೆ ಬಿ ಎನ್ ವಿಶ್ವವಿದ್ಯಾಲಯ ಕಲ್ಬುರ್ಗಿ ಆಗಮಿಸಿ, ವ್ಯಕ್ತಿತ್ವ ಒಂದು ಇದ್ದರೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಗದೇವಿ ಹಿರೇಮಠ್ ಗಣಿತ ವಿಭಾಗದ ಮುಖ್ಯಸ್ಥರು ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮೈತ್ರಾದೇವಿ ಹಳೆಮನೆ ಅವರು ಪ್ರಾಸ್ತವಿಕ ನುಡಿಗಳನ್ನಾಡಿದರು. ವಿಜಯಲಕ್ಷ್ಮಿ ನಂದ್ಯಾಳ ಸಮಾಜಶಾಸ್ತ್ರ ಉಪನ್ಯಾಸಕರು ಉಪಸ್ಥಿತರಿದ್ದರು.
ಕುಮಾರಿ ದೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು, ಭವಾನಿ ಸ್ವಾಗತಿಸಿದರು ಮತ್ತು ಚಂದ್ರಕಾಂತ ಕಾರ್ಯಕ್ರಮಕ್ಕೆ ವಂದನಾರ್ಪಣೆ ಮಾಡಿದರು.