ಧಮ್ಮಚಕ್ರ ಪ್ರವರ್ತನ ದಿನಾಚರಣೆ ನಡೆಯಿತು

ಧಮ್ಮಚಕ್ರ ಪ್ರವರ್ತನ ದಿನಾಚರಣೆ ನಡೆಯಿತು

ಧಮ್ಮಚಕ್ರ ಪ್ರವರ್ತನ ದಿನಾಚರಣೆ ನಡೆಯಿತು 

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕರ್ನಾಟಕ ಸಮತಾ ಸೈನಿಕ ದಳ ಕೆ.ಎಸ್.ಎಸ್.ಡಿ ಕಲಬುರಗಿ ವಿಭಾಗ ಹಾಗೂ ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ 160 ಧಮ್ಮಚಕ್ರ ಪ್ರವರ್ತನ ದಿನಾಚರಣೆ ಕಾರ್ಯಕ್ರಮವನ್ನು ಪೂಜ್ಯ ಮಹಾಪೌರರಾದ ವರ್ಷಾ ರಾಜು ಜಾನೆ ಉದ್ಘಾಟಿಸಿದರು. ಉಪ ಮಹಾಪೌರರಾದ ತೃಪ್ತಿ ಶ್ರೀನಿವಾಸ ಲಾಖೆ, ಕರ್ನಾಟಕ ಸಮತಾ ಸೈನಿಕ ದಳ ವಿಭಾಗೀಯ ಅಧ್ಯಕ್ಷ ಸಂಜೀವ ಟಿ. ಮಾಲೆ, ರಾಜೇಶ ಮೇತ್ರ, ಡಾ. ಸುನೀಲಕುಮಾರ ವಂಟಿ, ಧರ್ಮಣ್ಣ ಎಚ್. ಧನ್ನಿ, ಸುರೇಶ ಕಾನೇಕರ್, ಅಶೋಕ ಎಂ. ಕಾಳೆ, ಗೀತಾ ಎಸ್. ಭರಣಿ, ನವನಾಥ ರಾಠೋಡ, ಈರಣ್ಣ ಜಾನೆ, ಪೃಥ್ವಿರಾಜ ದೊಡ್ಡಮನಿ, ದತ್ತಾತ್ರೇಯ ಸೂರ್ಯವಂಶಿ, ಎಂ.ಎನ್. ಸುಗಂದಿ, ಅಪ್ಪಾರಾವ ಭಾವಿಮನಿ, ಮಹಾದೇವ ನಾಟೀಕರ್ ಸೇರಿದಂತೆ ಇತರರು ಇದ್ದರು.