ಶಿಕ್ಷಣವು ಪಠ್ಯತರ ಚಟುವಟಿಗಳಿಂದ ಕೂಡಿರಬೇಕು ಹಾಗೂ ಮೌಲಿಕ ಕಥೆಗಳಿಂದ ಶಿಕ್ಷಣವಾಗಬೇಕು.

ಶಿಕ್ಷಣವು  ಪಠ್ಯತರ ಚಟುವಟಿಗಳಿಂದ ಕೂಡಿರಬೇಕು ಹಾಗೂ ಮೌಲಿಕ ಕಥೆಗಳಿಂದ ಶಿಕ್ಷಣವಾಗಬೇಕು.

ಶಿಕ್ಷಣವು ಪಠ್ಯತರ ಚಟುವಟಿಗಳಿಂದ ಕೂಡಿರಬೇಕು ಹಾಗೂ ಮೌಲಿಕ ಕಥೆಗಳಿಂದ ಶಿಕ್ಷಣವಾಗಬೇಕು.

ಕಮಲನಗರ:ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ ಹಾಗೂ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಾಮಾಜಿಕ ಪರಿಶೋಧನೆ ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಸಾಮಾಜಿಕ ಪರಿಶೋಧನೆ ವತಿಯಿಂದ ಶಾಲಾ ಸಭೆ ನಡೆಯಿತು. 

 ಈ ಸದರಿ ಸಭೆಯಲ್ಲಿ ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಆನಂದ ಎಸ್ ಎಚ್ ಶಿಕ್ಷಣ ಕಲಿಕೆ ಪಠ್ಯತರ ಚಟುವಟಿಗಳಿಂದ ಕೂಡಿರಬೇಕು ಅದಕ್ಕೆ ಶಿಕ್ಷಕರು ಕಲಿಕೆ ಪರಿಣಾಮ ಮಾಡಲು ಮಕ್ಕಳ ಮನದಲ್ಲಿ ಇರುವ ಸಂಕೋಚನೆ ದೂರ ಮಾಡಲು ಮುಂದಾಗಬೇಕು ಎಂದು ಹೇಳಿದರು.ಮತ್ತು ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ದೇವದಾಸ ಮುಸ್ಕೆ . ಒಳ್ಳೆಯ ಮಕ್ಕಳ ಭವಿಷ್ಯವನ್ನು ರೂಪಿಸಲು ಪ್ರತಿಭೆಯನು ಹೊರಹಾಕಲು ಶಿಕ್ಷಕರು ಒಲವು ತೊರುವ ಮೂಲಕ ಮೌಲಿಕ ಕಥೆಗಳನ್ನು ಹೇಳುವ ಜೊತೆಗೆ ಸಂಸ್ಕಾರಿಕ ಮಾನವೀಯ ಮೌಲ್ಯಗಳು ತಿಳಿಸುವುದರೊಂದಿಗೆ ಶಿಕ್ಷಣ ಕೊಡಬೇಕು ಎಂದು ಮಾತನಾಡಿದರು.

ಇದಕ್ಕೆ ಮೊದಲು ಶ್ರೀಮತಿ ಸುನಿತಾ ಮೇಡಂ ಅವರು ಸ್ವಾಗತ ಕೋರಿದರು.

ಮುಖ್ಯಗುರುಗಳಾ ಶ್ರೀ ಸೈಯದ ಫಾಹಿಮ್ ಅಹೇಮದ್ ಹಾಗೂ ಇನ್ನೋರ್ವ ಮುಖ್ಯ ಗುರುಗಳಾದ ಶ್ರೀ ಶೇಖ ಮೈಮುದ ಚಾಂದಸಾಬ ಸರ್ ಸಹ ಹಾಜರಿದ್ದರು.ಹಾಗೂ ಮಿಲಿಂದ ಗಾಯಕವಾಡ ಜ್ಯೋತಿ ಮಡಿವಾಳ ಕಲ್ಯಾಣರಾವ್ ಕುಲಕರ್ಣಿ ಅಡುಗೆ ಮಾಡುವವರು ಶಾಲೆಯ ಸಿಬ್ಬಂದಿ ಶಿಕ್ಷಕರು ಹಾಗೂ ಪೋಷಕರು ಸಮುದಾಯದವರು ಮತ್ತು ವಿದ್ಯಾರ್ಥಿಗಳು ಹಾಗೂ ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಹಾಗೂ ಇತರರು ಹಾಜರಿದ್ದು ಈ ಶಾಲಾ ಸಭೆಯನ್ನು ಯಶ್ವಿಯಾಗಿ ನಡೆಸಲಾಯಿತು.