ಉತ್ತರ ರಾಜಾಜಿನಗರ ಬ್ರಾಹ್ಮಣ ಸಭಾ ವತಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ
ಉತ್ತರ ರಾಜಾಜಿನಗರ ಬ್ರಾಹ್ಮಣ ಸಭಾ ವತಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ
ಬೆಂಗಳೂರು: ಉತ್ತರ ರಾಜಾಜಿನಗರ ಬ್ರಾಹ್ಮಣ ಸಭೆಯ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ನಗರದ ಸುಬ್ರಹ್ಮಣ್ಯ ನಗರದ ಶ್ರೀ ಬಾಲಾಜಿ ಸಮುದಾಯ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಿಸಲಾಯಿತು. ನ್ಯಾಷನಲ್ ಹೈಸ್ಕೂಲು ಗಣಿತ ಶಿಕ್ಷಕ ಎಸ್. ನಾಗರಾಜ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತವಚನ ನೀಡಿ, ಪರಿಶ್ರಮ, ಶಿಸ್ತು ಮತ್ತು ಗುರಿಯೊಂದಿಗೆ ಶಿಕ್ಷಣವನ್ನು ಮುಂದುವರಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಸುಬ್ರಹ್ಮಣ್ಯ ವಾರ್ಡ್ನ ನಿಕಟಪೂರ್ವ ಸದಸ್ಯ ಹೆಚ್. ಮಂಜುನಾಥ್ ಮತ್ತು ಪದ್ಮಶ್ರೀ ಅಕಾಡೆಮಿಯ ಸತೀಶ್ ರವರು ಉತ್ತರ ರಾಜಾಜಿನಗರ ಬ್ರಾಹ್ಮಣ ಸಭೆ ಹೊರತಂದಿರುವ ನೂತನ ವರ್ಷದ ಕ್ಯಾಲೆಂಡರ್ ಅನ್ನು ಅನಾವರಣಗೊಳಿಸಿದರು.
ಸಭೆಯ ನಡೆದು ಬಂದ ದಾರಿಯ ಕುರಿತು ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಮಾಜಿ ಕಾರ್ಯದರ್ಶಿ ಹೆಚ್.ಪಿ. ಸುಬ್ರಮಣ್ಯ ಮಾತನಾಡಿದರು. ಉತ್ತರ ರಾಜಾಜಿನಗರ ಬ್ರಾಹ್ಮಣ ಸಭೆಯ ಅಧ್ಯಕ್ಷ ಎಸ್.ಬಿ. ರಾಜೇಶ್, ಕಾರ್ಯದರ್ಶಿ ಭಾನುಪ್ರಕಾಶ್ ಹೆಚ್.ಪಿ. ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
