ರಾಜು ತಾಳಿಕೋಟೆ ನಿಧನ: ಕಲಿಯುಗದ ಕುಡುಕ ಕಣ್ಮರೆಯಾದರು

ರಾಜು ತಾಳಿಕೋಟೆ ನಿಧನ: ಕಲಿಯುಗದ ಕುಡುಕ ಕಣ್ಮರೆಯಾದರು
ಉಡುಪಿ: ವೃತ್ತಿ ರಂಗಭೂಮಿಯಲ್ಲಿಯೂ, ಚಲನಚಿತ್ರ ಲೋಕದಲ್ಲಿಯೂ ಹಾಗೂ ಬಿಗ್ ಬಾಸ್ ಮನೆಯಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದ ಕಲಾವಿದ ರಾಜು ತಾಳಿಕೋಟೆಯವರು ಇಂದು (13 ಅಕ್ಟೋಬರ್ 2025) ಸಂಜೆ ಸುಮಾರು ನಾಲ್ಕು ಗಂಟೆಗೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು ಎಂಬ ದಾರುಣ ಸುದ್ದಿ ಬಂದಿದೆ.
ಮೂಲಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ, ರಾಜು ತಾಳಿಕೋಟೆಯವರು ಉಡುಪಿಯಲ್ಲಿ ಒಂದು ಚಲನಚಿತ್ರದ ಶೂಟಿಂಗ್ ಕಾರ್ಯದಲ್ಲಿ ತೊಡಗಿದ್ದರು. ಶೂಟಿಂಗ್ ವೇಳೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಸ್ಥಿತಿ ಗಂಭೀರವಾಗುತ್ತಿದ್ದಂತೆ ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
“ಕಲಿಯುಗದ ಕುಡುಕ” ಪಾತ್ರದ ಮೂಲಕ ಮನೆಮಾತಾದ ರಾಜು ತಾಳಿಕೋಟೆಯವರು ನಾಟಕ, ಚಲನಚಿತ್ರ ಹಾಗೂ ಟೆಲಿವಿಷನ್ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಅವರ ನಿಧನದಿಂದ ಕಲೆ ಲೋಕಕ್ಕೆ ಅಳಿಸಲಾಗದ ನಷ್ಟ ಉಂಟಾಗಿದೆ.