ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ಹೊಂದಬೇಕು : ಪರಾಗ ಕುಮಾರ್ ಶ್ರೀವಾತ್ಸವ
ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ಹೊಂದಬೇಕು : ಪರಾಗ ಕುಮಾರ್ ಶ್ರೀವಾತ್ಸವ
ಜೀವನದಲ್ಲಿ ಹಣ ಅಂತಸ್ತು ಗಳಿಸುವಲ್ಲಿ ತೋರುವ ಆಸಕ್ತಿ ಆರೋಗ್ಯದ ವಿಚಾರದಲ್ಲಿ ವಹಿಸುತ್ತಿಲ್ಲ ಎಂದು ಅದಾನಿ ಫೌಂಡೇಶನ್ ಸಿಎಂಓ ಪರಾಗಕುಮಾರ ಶ್ರೀವಾತ್ಸವ್ ಹೇಳಿದರು.
ಅವರು ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ವಾಡಿ ಎಸಿಸಿ ಅದಾನಿ ಫೌಂಡೇಶನ್, ಏನ್ ಜಿ ಏನ್ ಫೌಂಡೇಶನ್ ಹಾಗೂ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇವತ್ತು ಕೋಟಿಗಟ್ಟಲೆ ಹಣ ಗಳಿಸುತ್ತಿತ್ತೇವೆ ಆದರೆ ಸರಿಯಾಗಿ ನಿದ್ರೆ, ಸರಿಯಾಗಿ ಊಟ ಮಾಡಲು ಆಗುತ್ತಿಲ್ಲ. ಮೈ ತುಂಬಾ ಖಾಯಿಲೆಗಳಿವೆ. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಾಳಜಿ ವಹಿಸದಿರುವುದೇ ಇದಕ್ಕೆ ಕಾರಣ. ಅಪೋಷ್ಟಿಕ ಆಹಾರ, ಒತ್ತಡದ ಜೀವನ, ದೈಹಿಕ ಶ್ರಮ ಕಡಿಮೆಯಾಗಿರುವುದು, ಅತಿಯಾಗಿ ಮೊಬೈಲ್ ಮತ್ತು ಕಂಪ್ಯೂಟರ್ ಬಳಸುತ್ತಿರುವುದು ಹೀಗೆ ಅನೇಕ ಕಾರಣಗಳಿಂದ ಯುವಕರಲ್ಲಿ ಅನೇಕ ಖಾಯಿಲೆಗಳು ಬರುತ್ತಿವೆ. ಬಿಪಿ, ಶುಗರ್, ಹೃದಯ ಸಂಬಂದಿ ಖಾಯಿಲೆ, ಕಣ್ಣು, ಎಲುಬಿನ ಸಮಸ್ಯೆಗಳು ಹೆಚ್ಚುತ್ತಿವೆ. ಆದ್ದರಿಂದ ಅದಾನಿ ಫೌಂಡೇಶನ್ ವತಿಯಿಂದ ಗ್ರಾಮೀಣ ಭಾಗದಲ್ಲಿ ಇಂತಹ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಬಡವರಿಗೆ ನೇರವಾಗುತ್ತಿದೆ ಎಂದು ಹೇಳಿದರು.
ಏನ್ ಜಿ ಏನ್ ಫೌಂಡೇಶನ್ ಮುಖ್ಯಸ್ಥ ಡಾ. ಸಂತೋಷ ನಾಗಲಾಪುರ ಮಾತನಾಡಿ ಪ್ರತಿನಿತ್ಯ ವ್ಯಾಯಾಮ, ಧ್ಯಾನ, ಕೆಲಸದಲ್ಲಿ ಶ್ರಮ, ಉತ್ತಮ ಸಮತೋಲಿತ ಆಹಾರ ಸೇವನೆ ಮೂಲಕ ರೋಗಗಳನ್ನು ದೂರವಿಡಬಹುದು ಎಂದು ಹೇಳಿದರು.
ವೇದಿಕೆ ಮೇಲೆ ಶ್ರೀಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿದ್ದರು.ಗ್ರಾ. ಪಂ ಅಧ್ಯಕ್ಷೆ ಸುಮಿತ್ರಾ ತುಮಕೂರ, ಪಿ ಡಿ ಓ ಕಾವೇರಿ ರಾಠೋಡ, ಸೇರಿದಂತೆ ವೈದ್ಯರು ಉಪಸ್ಥಿತರಿದ್ದರು.
ಆರೋಗ್ಯ ಶಿಬಿರದಲ್ಲಿ ರಾವೂರ, ಗಾoಧಿನಗರ, ವಾಡಿ, ಮಾಲಗತ್ತಿ, ಶಂಕರವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸುಮಾರು 4000 ಜನರು ಇದರ ಲಾಭವನ್ನು ಪಡೆದರು. ಇದರಲ್ಲಿ 420 ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. 120 ಜನರು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಆಗಿರುತ್ತಾರೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ. ಅದಾನಿ ಫೌಂಡೇಶನ್ ನ ವಿರೇಶ ಎಂ. ಯು, ಮುಖಂಡರಾದ ಈಶ್ವರ ಬಾಳಿ, ತಿಪ್ಪಣ್ಣ ವಗ್ಗರ, ಸಾಹೇಬಗೌಡ ತುಮಕೂರ, ಶಿವಶರಣ ಕೊಳ್ಳಿ, ಶರಣು ಜ್ಯೋತಿ, ಸಿದ್ದಲಿಂಗ ಬಾಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.