ಹೋರಾಟಗಾರ ಅಮೃತ ಪಾಟೀಲಗೆ ಅಭಿನಂದನಾ ಸತ್ಕಾರ

ಹೋರಾಟಗಾರ ಅಮೃತ ಪಾಟೀಲಗೆ ಅಭಿನಂದನಾ ಸತ್ಕಾರ
ಕಲಬುರಗಿ: ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಕಾರ್ಯಾಲಯದಲ್ಲಿ ಕನ್ನಡ ಪರ ಹೋರಾಟಗಾರ ಶ್ರೀ ಅಮೃತ ಪಾಟೀಲ ಸಿರನೂರ ರವರಿಗೆ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಅಫಜಲಪುರ ಮತಕ್ಷೇತ್ರದ ಶಾಸಕರಾದ ಎಮ್. ವಾಯ್. ಪಾಟೀಲ ಅವರ ಪ್ರಾಥಮಿಕ ಕೃಷಿ ಸೇವಾ ಸಹಕಾರಿ ಸಂಘ ನಿಯಮಿತ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆ ಪ್ರಯುಕ್ತ ಅಮೃತ ಪಾಟೀಲ ಸಿರನೂರ ರವರಿಗೆ ಅಭಿನಂದನಾ ಸತ್ಕಾರ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನಾಥ ಸೂರ್ಯವಂಶಿ, ಪತ್ರಕರ್ತ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಮುಖಂಡರಾದ ಚಂದ್ರಹಾಸ ಜಿತ್ರೆ, ಸಚಿನ ಫರಹತಾಬಾದ, ರವಿ ಒಂಟಿ, ಮಂಜುನಾಥ ನಾಲವಾರಕರ್, ಆನಂದ ತೇಗನೂರ, ವೆಂಕಟೇಶ ಕಾಂಬಳ್ಳೆ, ಶಿವುಕುಮಾರ ಬಾಗೋಡಿ, ಬಾಬುಮಿಯಾ ಪರಿಟ, ರಾಘವೇಂದ್ರ ಕುಲಕರ್ಣೆ , ಮಹೇಶ ಸೂರ್ಯವಂಶಿ, ಪರಶುರಾಮ ನಾಟೀಕಾರ, ಉಮೇಶ ನಾಟೀಕಾರ, ಶಿವನಾಂದ ಚುಕಾನಡೆ, ಶೇಶರ ಗುಲಮಬಾಯಿ ಸೇರಿದಂತೆ ಇನ್ನಿತರರು ಭಾಗವಹಿಸಿದರು.