ವಿಶೇಷ ಚೇತನ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ

ವಿಶೇಷ ಚೇತನ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ
ವಿಶೇಷ ಚೇತನ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ

ವಿಶೇಷ ಚೇತನ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ 

ಕಲಬುರಗಿ :ಅ 25.ಸಾಧನ ಸಲಕರಣೆಯಿಂದ ವಿಶೇಷ ಚೇತನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಬಿ.ಇ.ಓ.ಸೋಮಶೇಖರ ಹಂಚನಾಳ ಹೇಳಿದರು.

ಕಲಬುರಗಿ ನಗರದ ಜಗತ್ತ ವೃತ್ತದ ಹತ್ತಿರ ಇರುವ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಲಬುರಗಿ ಉತ್ತರ ವಲಯ ಹಾಗೂ ಬೆಂಗಳೂರಿನ ಅಲಿಂಕೋ ಸಂಸ್ಥೆ ಅವರ ಸಹಯೋಗದಲ್ಲಿ ವಿಕಲಚೇತನ ಮಕ್ಕಳಿಗೆ ಗಾಲಿಕುರ್ಚಿ, ತ್ರಿಚಕ್ರವಾಹನ, ಸಿಪಿ ಚೇರ್, ಟಿ. ಎಲ್. ಎಂ. ಕಿಟ್ ಮೊದಲಾದ 92 ಸಲಕರಣೆಗಳನ್ನು ವಿಶೇಷ ಚೇತನ ಮಕ್ಕಳಿಗೆ ನೀಡಿದರು 

ಮುಂದುವರೆದು ಮಾತನಾಡಿದ ಅವರು ವಿಶೇಷ ಚೇತನ ಮಕ್ಕಳು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಅವರಿಗೆ ಮುಖ್ಯ ವಾಹಿನಿಗೆ ತರಬೇಕು ಎಂದು ಹೇಳಿದರು.

ಕ್ಷೇತ್ರ ಸಮನ್ವಯ ಅಧಿಕಾರಿಗಳು ಡಾ.ಶಾಂತಾ ಬಿರಾದಾರ ಮಾತನಾಡಿ ವಿಶೇಷಚೇತನ ಮಕ್ಕಳು ದೇವರ ಮಕ್ಕಳು. ಅವರು ಅಂಗಾಂಗದಿಂದ ವಿಕಲರಾಗಿದ್ದರು ಅವರಲ್ಲಿನ ಮಾನಸಿಕ ಸಾಮರ್ಥ್ಯ ವಿಶೇಷವಾಗಿರುತ್ತದೆ. ವಿಶೇಷ ಜ್ಞಾನ ಅವರಲ್ಲಿರುತ್ತದೆ. ಇಂಥ ಮಕ್ಕಳ ಬಗ್ಗೆ ಅವರ ಪಾಲಕರು, ಪೋಷಕರು ಕೀಳರಿಮೆ ತೋರದೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪತ್ರಕರ್ತ ಶರಣಗೌಡ ಪಾಟೀಲ ಪಾಳಾ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಬಿ.ಐ.ಇ. ಆರ್.ಟಿ.ಮಲ್ಲಮ್ಮ ಆಲಗೂಡ, ಶರಣಪ್ಪ ಮನಗೂಳಿ,ಸಿದ್ದಾರಾಮ ರಾಜಮಾನೆ, ಅಂಜನಾದೇವಿ ಜ್ಯೋಶಿ, ಶಾಲೆಯ ಶಿಕ್ಷಕರಾದ ಶರಣಪ್ಪ ಸವಳೇಶ್ವರ ,ಶೃತಿ ಪಾಟೀಲ, ಸಂಗೀತ ಮಾಲಿ ಪಾಟೀಲ. ಪಾಲಕರಾದ ವಿದ್ಯಾವತಿ ಬೆಳಕೊಟಾ,ಸಿಕಂದರ್ ಶೇಖ್ ಸೇರಿದಂತೆ ಮಕ್ಕಳು ಮತ್ತು ಪಾಲಕರು ಉಪಸ್ಥಿತರಿದ್ದರು.