ಗಡಿಕೇಶ್ವಾರ ಸೊಲ್ಲಾಪುರ ಸಿದ್ಧರಾಮೇಶ್ವರ ಪುರಾಣ ಪುರಾಣ ಪ್ರವಚನಗಳ ಸಂದೇಶ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕ

ಗಡಿಕೇಶ್ವಾರ ಸೊಲ್ಲಾಪುರ ಸಿದ್ಧರಾಮೇಶ್ವರ ಪುರಾಣ
ಪುರಾಣ ಪ್ರವಚನಗಳ ಸಂದೇಶ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕ
ಚಿಂಚೋಳಿ:ಒಂದು ಕಾಲದಲ್ಲಿ ವೈಷ್ಣವ, ಶೈವ ಮತ್ತು ಜೈನ ಧರ್ಮಗಳ ಸಂಗಮ ತಾಣವಾಗಿದ್ದ ಗಡಿಕೇಶ್ವಾರ ಗ್ರಾಮದಲ್ಲಿ ಸುಮಾರು 10 ಶತಮಾನಗಳ ಹಿಂದಿನ ಚಾರಿತ್ರಿö್ಯಕ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯಕ್ಕೆ ನೂತನ ಗೋಪುರ ನಿರ್ಮಿಸಿ ಕಳಸಾರೋಹಣ ನಿಮಿತ್ತ ಆಯೋಜಿಸಿದ್ದ ಸೊಲ್ಲಾಪುರ ಸಿದ್ಧರಾಮೇಶ್ವರ ಪುರಾಣ ಔಚಿತ್ಯಪೂರ್ಣವಾಗಿದೆ ಎಂದು ಪತ್ರಕರ್ತ ಜಗನ್ನಾಥ ಶೇರಿಕಾರ ತಿಳಿಸಿದರು.
ಅವರು ಕಾಳಗಿ ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ನಡೆಯುತ್ತಿರುವ ಸೊಲ್ಲಾಪುರ ಸಿದ್ಧರಾಮೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಯಾವುದೇ ಧಾರ್ಮಿಕ ಕಾರ್ಯಕ್ರಮ ಅದು ಒಂದು ನೆಪ. ಈ ನೆಪದಲ್ಲಿ ಹಮ್ಮಿಕೊಂಡ ಪುರಾಣ ಪ್ರವಚನಗಳು ಸಮಾಜಕ್ಕೆ ನೀಡುವ ಸಂದೇಶ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೇ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಜತೆಗೆ ಜೀವನವೂ ಸಾರ್ಥಕವಾಗುತ್ತದೆ ಎಂದರು.
ನಿವೃತ್ತ ಉಪನ್ಯಾಸಕ ರೇವಣಸಿದ್ದಪ್ಪ ದುಕಾನ ಮಾತನಾಡಿ, ಮಾನವ ಜೀವನ ಅತ್ಯಂತ ಶ್ರೇಷ್ಠವಾಗಿದೆ. ಇದನ್ನು ವ್ಯರ್ಥಗೊಳಿಸಿಕೊಳ್ಳದೇ ಸತ್ಕಾರ್ಯ ಮತ್ತು ಪರೋಪಕಾರ್ಯಗಳ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕೆಂದರು.
ಕಾರ್ಯಕ್ರಮವನ್ನು ಕೃಷಿಕ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ ಉದ್ಘಾಟಿಸಿದರು. ಚಿಮ್ಮಾಈದಲಾಯಿ ಹಿರೇಮಠದ ವಿಜಯಮಹಾಂತೇಶ್ವರ ಶಿವಾಚಾರ್ಯರು ಪುರಾಣ ಕಾರ್ಯಕ್ರಮ ನಡೆಸಿಕೊಟ್ಟರು. ಸುಲೇಪೇಟದ ಟೆಂಗಿನಮಠದ ಸಿದ್ದಯ್ಯ ಸ್ವಾಮಿ ಸಾನಿಧ್ಯವಹಿಸಿದ್ದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಗಿರಿರಾಜ ಸಜ್ಜನಶೆಟ್ಟಿ, ಸಚಿವ ಡಾ. ಶರಣಪ್ರಕಾಶ ಪಾಟೀಲರ ಆಪ್ತ ಸಹಾಯಕ ಆನಂದ ಪೂಜಾರಿ, ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿ ಬಸವರಾಜ ಕೆರೋಳ್ಳಿ, ಶಿವಕುಮಾರ ಪಾಟೀಲ, ಶರಣು ಸ್ವಾಮಿ ಇದ್ದರು. ಶ್ರೀಶೈಲಯ್ಯ ಸ್ವಾಮಿ ಮಠ ಅಧ್ಯಕ್ಷತೆವಹಿಸಿದ್ದರು. ವೀರೇಶ ರೆಮ್ಮಣಿ ಸ್ವಾಗತಿಸಿದರು. ರಾಜಶೇಖರಯ್ಯ ಸ್ವಾಮಿ ನಿರೂಪಿಸಿದರು.