ಶಾಮನೂರು ಶಿವಶಂಕರಪ್ಪ ನಿಧನ: ನುಡಿ ನಮನ
ಶಾಮನೂರು ಶಿವಶಂಕರಪ್ಪ ನಿಧನ: ನುಡಿ ನಮನ
ಕಮಲನಗರ: ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸ ಆರು ಬಾರಿ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ದಾವಣಗೆರೆಗೆ ಅನ್ವರ್ಥನಾಮದಂತೆ ಇದ್ದರು. ಕೊಡುಗೈ ದಾನಿಯಾಗಿದ್ದ ಅವರು ಅಗಿದದು ಅತೀವ ನೋವುಂಟು ಮಾಡಿದೆ ಎಂದು ಮುಖ್ಯಶೀಕ್ಷಕ ಎಮ್.ಎಸ್.ಹಿರೇಮಠ ಹೇಳಿದರು.
ಪಟ್ಟಣದ ಶಾಸ್ತ್ರೀ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷಶಾಮನೂರು ಶಿವಶಂಕರಪ್ಪ ವಯೋಸಹಜ ನಿಧನ ಹೊಂದಿದ್ದಕ್ಕೆ ಸೋಮವಾರ ಶಾಲೆಯಲ್ಲಿ ನಡೆದ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು.
ಅವರು ನಾಡು ಕಂಡ ಮಹಾನ್ ಶಿಕ್ಷಣ ಪ್ರೇಮಿ. ಅವರ ಸಾಮಾಜಿಕ ಕಾಳಜಿ ಸ್ತ್ಯುತ್ಯರ್ಹವಾಗಿತ್ತು. ವೀರಶೈವ ಲಿಂಗಾಐತ ಸಮದಾಯ ಒಗ್ಗೂಡಿಸುವ ಕನಸು ಕಂಡಿದ್ದರು. ಅವರು ಲಿಂಗೈಕ್ಯರಾಗಿದ್ದು ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಶಿಕ್ಷಕ ಸಿಬ್ಬಂದಿ ಶ್ರೀದೇವಿ ಸೋನಕಾಂಬಳೆ, ದೀಪಮಾಲಾ ಸೂರ್ಯವಂಶಿ, ಸಂಗೀತಾ ಕಾಂಬಳೆ, ಅಂಬಿಕಾ ಗಾಯಕವಾಡ್, ಮೌನೇಶ್ವರಿ ಭೂರೆ, ಈಶ್ವರಿ, ಅಶ್ವೀನಿ, ಪಂಚಫುಲಾ ಹಾಗೂ ಮಕ್ಕಳು ಇದ್ದರು.
