ಹೊಳೆಸಮುದ್ರದ ಪ್ರೌಢಶಾಲಾಯಲ್ಲಿ ಪಾಲಕರ ಸಭೆ ಜರುಗಿತು.
ಹೊಳೆಸಮುದ್ರದ ಪ್ರೌಢಶಾಲಾಯಲ್ಲಿ ಪಾಲಕರ ಸಭೆ ಜರುಗಿತು.
ಕಮಲನಗರ: ಶಿಕ್ಷಕರು ಕೊಡುವ ಶಿಕ್ಷಣಕ್ಕಿಂತಲೂ ಪಾಲಕರ ಜವಾಬ್ದಾರಿ ಮಕ್ಕಳ ಬೆಳವಣಿಗೆಯಲ್ಲಿ ಬಹು ಮುಖ್ಯಪಾತ್ರವಾಗಿದೆ :: ಶ್ರೀ ಆನಂದ್ಎಸ್. ಎಚ್ .ಹೇಳಿಕೆ
ಪ್ರತಿಯೊಂದು ಮಗುವೂ ಶಿಕ್ಷಣ ಪಡೆಯಬೇಕು ಯಾರು ಶಿಕ್ಷಣ ಪಡೆಯದೆ ವಂಚಿತರಾಗಬಾರದು ಮೇಲು ಕೀಳು ಎನ್ನದೆ ಶಿಕ್ಷಣ ಪಡೆದುಕೊಳ್ಳಬೇಕು ಸಮಾನವಾದ ಶಿಕ್ಷಣಕಾಗಿ ಸರ್ಕಾರದ ಯೋಜನೆಗಳಾದ ಹಿನ್ನೆಲೆ ಉದ್ದೇಶ ಅದರ ಪ್ರಕಾರಗಳು ಸವಿಸ್ತಾರವಾಗಿ ಮಾತನಾಡಿದರು ಶಾಲೆಯಲ್ಲಿ ಒಬ್ಬ ಶಿಕ್ಷಕನು ಎಷ್ಟೇ ಬೋಧನೆ ಮಾಡಿದರು ತಂದೆ ತಾಯಿಯರು (ಪೋಷಕರು )ಮಕ್ಕಳ ಮೇಲೆ ಕಾಳಜಿ ವಹಿಸುವುದು ಬಹು ಮುಖ್ಯವಾಗಿದೆ ಎಂದು ನುಡಿದರು.
ಶ್ರೀ ಸೈಯದ್ ಆರೀಫ್ ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದರು ಕಾರ್ಯಕ್ರಮಗಳ ವ್ಯವಸ್ಥಾಪಕರಾದ ಶ್ರೀ ದೇವದಾಸ್ ಮುಸ್ಕೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರುಗಳಾದ ಸಂಜು ಕುಮಾರ್ ಡೋಂಗರೆ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ರಾಮರಾವ್ ತಾನಾಜಿ ಕದಂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾರುತಿ ಅಳಂದೇ ಗ್ರಾಮ ಪಂಚಾಯತ್ ಸದಸ್ಯರಾದ ರಾಹುಲ್ ಪಾಟೀಲ್ ಊರಿನ ಸಾಹಿತಿಗಳಾದ ಸಂಗಮೇಶ್ವರ ಎಸ್ ಮುರ್ಕೆ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪೋಷಕರು ಗ್ರಾಮಸ್ಥರು ಉಪಸ್ಥಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಯೋಗೇಶ್ ಪಾಟೀಲ್ ಸುನಿಲ್ ವಿಠಲ ಶೇಷರಾವ ಮೇತ್ರೆ ರಂಜನಾ ಬಿರಾದರ್ ಶ್ರೀದೇವಿ ಬಿರಾದರ್ ಉಪಸ್ಥಿತಿಯಲ್ಲಿದ್ದು,
ಪಾಲಕರೊಂದಿಗೆ ಶಾಲೆಯ ಆವರಣ ಕೊಠಡಿಗಳು ಊಟದ ಬಗ್ಗೆ ವಾತಾವರಣದಲ್ಲಿ ಬಾದಕ ಗಳ ಬಗ್ಗೆ ಚರ್ಚೆ ಹಮ್ಮಿಕೊಳ್ಳಲಾಯಿತು.
ಅಜಯ್ ಪಂಚಾಳ ಸರ್ ಪ್ರಾಸ್ತಾವಿಕ ಮಾತನಾಡಿದರು ಅಂಕಿತಾ ಶೀತಲ್ ಅಂಜಲಿ ಸ್ವಾಗತಿ ಗೀತೆ ಹಾಡಿದರು. ರವಿ ಸಂಗಣ್ಣ ನಿರೂಪಿಸಿದರು ಆಶಿಫ ಸರ್ ವಂದನಾರ್ಪಣೆ ಮಾಡಿದರು.
(ವರದಿ: ಸಂಗಮೇಶ್ವರ ಎಸ್ ಮುರ್ಕೆ ಹೊಳೆಸಮುದ್ರ )