ರಾಮಗೌನಿ ಸಹೋದರಿಯರಾದ ಕು|| ಮೌಕ್ಷಿಕ ಮತ್ತು ಕು|| ಪ್ರಿಶಿಕ ರಂಗಪ್ರವೇಶ ಗುರು ವಿದುಷಿ ಡಾ.ಪ್ರಿಯಾ ಗಣೇಶ್ ಶಿಷ್ಯೆ ಯಿಂದ ‘ದಿವ್ಯ ಕುಮಾರರು’ ರಂಗಪ್ರಸ್ತುತಿ

ರಾಮಗೌನಿ ಸಹೋದರಿಯರಾದ ಕು|| ಮೌಕ್ಷಿಕ ಮತ್ತು ಕು|| ಪ್ರಿಶಿಕ ರಂಗಪ್ರವೇಶ ಗುರು ವಿದುಷಿ ಡಾ.ಪ್ರಿಯಾ ಗಣೇಶ್ ಶಿಷ್ಯೆ ಯಿಂದ ‘ದಿವ್ಯ ಕುಮಾರರು’ ರಂಗಪ್ರಸ್ತುತಿ

ರಾಮಗೌನಿ ಸಹೋದರಿಯರಾದ ಕು|| ಮೌಕ್ಷಿಕ ಮತ್ತು ಕು|| ಪ್ರಿಶಿಕ ರಂಗಪ್ರವೇಶ

ಗುರು ವಿದುಷಿ ಡಾ.ಪ್ರಿಯಾ ಗಣೇಶ್ ಶಿಷ್ಯೆ ಯಿಂದ ‘ದಿವ್ಯ ಕುಮಾರರು’ ರಂಗಪ್ರಸ್ತುತಿ

 ಖ್ಯಾತ ನೃತ್ಯ ಗುರು ವಿದುಷಿ ಡಾ. ಪ್ರಿಯಾ ಗಣೇಶ್‌ರವರ ಶಿಷ್ಯೆ ರಾಮಗೌನಿ ಸಹೋದರಿಯರಾದ ಕು|| ಮೌಕ್ಷಿಕ ಮತ್ತು ಕು|| ಪ್ರಿಶಿಕ ರಂಗಪ್ರವೇಶ ನಗರದ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಅಯೋಜಿಸಲಾಗಿತ್ತು.

೬ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಕು|| ಪ್ರಿಶಿಕ ಬಾಲ್ಯದಿಂದಲೂ ನಾಟ್ಯ ಕ್ಷೇತ್ರದಲ್ಲಿ ಆಸಕ್ತರು ಖ್ಯಾತ ನೃತ್ಯ ಗುರು ಡಾ. ಪ್ರಿಯಾ ಗಣೇಶ್‌ರವರ ಶಿಷ್ಯೆ ಯಾಗಿ ಭರತನಾಟ್ಯ ಜೂನಿಯರ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಆಭ್ಯಸುಸಿತ್ತಿದ್ದಾರೆ. ಜಿಮ್ನಾನಿಷಿಯಂ ಮತ್ತು ಈಜುವಿಕೆಯಲ್ಲೂ ಆಸಕ್ತರಾಗಿ ಅಯೋಧ್ಯಾ ರಾಮಮಂದಿರ ಮುಂತಾದ ಹಲವು ಪ್ರಮುಖ ವೇದಿಕೆಗಳಲ್ಲಿ ಪ್ರದರ್ಶನ ನೀಡಿರುವ ಈ ಯುವ ಪ್ರತಿಭೆಗೆ ಅರಸಿ ಬಂದ ಗೌರವಗಳು ಅನೇಕ . 

ದಂತ ವೈದ್ಯೆ ಡಾ.ಉಷಾ ಮತ್ತು ಪ್ರತಾಪ್ ರಾಮಗೌನಿ ಸುಪುತ್ರಿಯರಾದ ಈಕೆಯ ಸಹೋದರಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕು|| ಮೌಕ್ಷಿಕ ಕೂಡ ಕಿರಿವಯಸ್ಸಿನಲ್ಲೆ ಆಪಾರ ಸಾಧನೆ ಮಾಡಿದ್ದಾರೆ.

 ವಿಶೇಷ ಮಕ್ಕಳಿಗೆ ನೃತ್ಯ ಮತ್ತು ಯೋಗದ ಪರಿಮಾಣಕಾರಿತ್ವ ಕುರಿತು ಪಿ.ಹೆಚ್‌ಡಿ ಮಾಡಿರುವ ಡಾ.ಪ್ರಿಯಾ ಗಣೇಶ್ ಗುರುವಿನ ಮಾರ್ಗದರ್ಶನ ಮತ್ತು ವೇದಿಕೆ ಅನುಭವ ಮೂಲಕ ಸಮುದ್ಭವ ನೃತ್ಯ ಮತ್ತು ಕಲಾ ಶಾಲೆಯ ವಿದ್ಯಾರ್ಥಿನಿಯರಾದ ಕು|| ಮೌಕ್ಷಿಕ ಮತ್ತು ಕು|| ಪ್ರಿಶಿಕ ಪ್ರಸ್ತುತ ಪಡಿಸುವ ‘ರಂಗಪ್ರವೇಶ –"ದಿವ್ಯ ಕುಮಾರರು"— ಕೃಷ್ಣ ಹಾಗೂ ಬಲರಾಮರ ಬಾಲ್ಯ ಲೀಲೆಗಳು, ಆಟ ಪಾಠಗಳು, ಲೋಕ ಕಲ್ಯಾಣ ಕಾರ್ಯಗಳು ಹಾಗೂ ಧರ್ಮಪಾಲನೆಯ ವಿಶಿಷ್ಟ ನೃತ್ಯಾತ್ಮಕ ಪ್ರಸ್ತುತಿಗೆ —ಖ್ಯಾತ ನೃತ್ಯಪಟು , ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಶುಭಾ ಧನಂಜಯ, ಲೇಖಕಿ ರಂಜಿನಿ ದತ್ತಾತ್ರಿ ಮತ್ತು ಜೋತಿಷಿ ಶ್ರೀಕಂಠ ಶಾಸ್ತ್ರೀ ಸಾಕ್ಷಿಯಾದರು. ಕು|| ಸಾನಿಧ್ಯ.ಪಿ ಮತ್ತು ಕು|| ಪೂರ್ವಿ.ಎಂ.ಎಸ್ "ಕೋರವಂಜಿ" ಶೈಲಿಯ ವಿಶಿಷ್ಟ ನಿರೂಪಣೆ, ವಿ.ಅನಿಲ್ ಕುಮಾರ್ - ನಟುವಾಂಗ, ವಿ.ದೇಬೂರು ಎಸ್ ಶ್ರೀವತ್ಸ – ಗಾಯನ , ವಿ.ಶ್ರೀಹರಿ ಅರ್. –ಮೃದಂಗ, ವಿ. ಎನ್ ಆರ್ ನರಸಿಂಹ ಮೂರ್ತಿ – ಕೊಳಲು, ವಿ. ತುಮಕೂರು ಬಿ.ಶಶಿಕುಮಾರ್ – ಘಟಂ ಮತ್ತು ಮೋರ್ಚಿಂಗ್ ಹಾಗೂ ಅರುಣ್ ಭಾರದ್ವಾಜ್ ಸಾಹಿತ್ಯ ಸಹಚರ್ಯದಲ್ಲಿ ಕುಮಾರಿ ಪ್ರಿಷಿಕಾ ಅಣ್ಣ ಬಲರಾಮನಾಗಿ ಮತ್ತು ಕು.ಮೌಷಿಕಾ ತುಂಟ ಕೃಷ್ಣನಾಗಿ ಭಾವಪೂರ್ಣ ಅಭಿನಯ; ಆದಿತಾಳ ರತಿಪ್ರಿಯ ರಾಗದ ಪುಷ್ಪಾಂಜಲಿ ; ಷಣ್ಮುಖಪ್ರಿಯ ರಾಗದ ಗಣೇಶ ಸ್ತುತಿ – ಅಲರಿಪು, ನಾಟರಾಗದ ಕವಿತ್ವ – ಅಭೇರಿರಾಗದ ವರ್ಣ- ಖಂಡಛಾಪು ತಾಳ , ಶುದ್ಧಸಾರಂಗರಾಗದ ದೇವರನಾಮ ,ಶುದ್ದ ಸಾವೇರಿರಾಗದ ತಿಲ್ಲಾನದೊಂದಿಗೆ ಸಂಪನ್ನವಾಯ್ತು , ಮಂಜುನಾಥ್‌ ಅಪೂರ್ವ ರಂಗಸಜ್ಜಿಕೆಯಿಂದ ಮೂಡಿಬಂದ ಕಾರ್ಯಕ್ರಮ ಕಲಾ ರಸಿಕರ ಮನಸೂರೆಗೊಂಡಿತು.