ಆಡಳಿತ ಭಾಷೆ ಕನ್ನಡ ಭಾಷೆಗೆ ಮಾನ್ಯತೆ ಕೊಡದ ಅಧಿಕಾರಿಗಳು ಗೊಬ್ಬುನಾರುತ್ತಿರುವ ಕನ್ನಡ ಭವನ

ಆಡಳಿತ ಭಾಷೆ ಕನ್ನಡ ಭಾಷೆಗೆ ಮಾನ್ಯತೆ ಕೊಡದ ಅಧಿಕಾರಿಗಳು

ಗೊಬ್ಬುನಾರುತ್ತಿರುವ ಕನ್ನಡ ಭವನ

ಚಿಂಚೋಳಿ : ತಾಲೂಕಿನ ಅಧಿಕಾರಿಗಳು ಆಡಳಿತ ಭಾಷೆ ಕನ್ನಡ ಭಾಷೆ ಅಕ್ಷರಗಳಿಗೆ ಮಾನ್ಯತೆ ನೀಡದೇ ಭಾಷೆಗೆ ಅವಮಾನಿಸುವ ಘಟನೆಗಳು ಚಿಂಚೋಳಿಯಲ್ಲಿ ಅಧಿಕಾರಿಗಳಿಂದ ನಡೆಯುತ್ತಿರುವುದು ಕಂಡಿವೆ. 

ಚಿಂಚೋಳಿ ಅವಳಿ ಪಟ್ಟಣದ ಚಂದಾಪೂರದ ಸರಕಾರಿ ಮೊದಲ ಆದ್ಯತೆಯಾಗಿ ಕರ್ನಾಟಕ ಪಬ್ಲಿಕ್ ಶಾಲೆಯ ನಾಮ ಫಲಕವನ್ನು ಆಂಗ್ಲ ಅಕ್ಷರಗಳಿಗೆ ನೀಡಿ ಬರೆಸಲಾಗಿದೆ. ಕನ್ನಡ ಭಾಷೆಯ ಅಕ್ಷರಗಳಿಗೆ ನಂತರದ ಸ್ಥಾನ ನೀಡಿ, ಆಂಗ್ಲ ಭಾಷೆ ಎತ್ತಿ ಹಿಡಿಯಲಾಗಿದೆ. ಸರಕಾರದ ಸುತ್ತೋಲೆಯ ನಿಯಮಗಳು ತಿಳಿಸಿರುವಂತೆ ಸರಕಾರದ ಅಧೀನಕ್ಕೆ ಒಳಪಡುವ ಪ್ರತಿಯೊಂದು ಕಛೇರಿ ಮತ್ತು ಸಂಸ್ಥೆಗಳ ಹಾಗೂ ಖಾಸಗಿ ಒಡೆತನದ ವ್ಯಾಪಾರಿಕರಣದ ಅಂಗಡಿಗಳ ನಾಮ ಫಲಕಗಳು ವ್ಯವಹಾರಿಕ ಭಾಷೆ ಆಗಿರುವ ಆಡಳಿತ ಭಾಷೆ ಕನ್ನಡದಲ್ಲಿಯೇ ನಾಮ ಫಲಕಗಳು ಮುದ್ರಿಸುವಂತೆ ಕ್ರಮವಹಿಸುವುದು ಅಧಿಕಾರಿಗಳ ಕರ್ತವ್ಯ ಆಗಿದೆ ಎಂಬುವುದು ಸರಕಾರದ ಸುತ್ತೋಲೆಗಳು ತಿಳಿಸುತ್ತವೆ . ಆದರೆ ಚಿಂಚೋಳಿ ಆಡಳಿತದ ಅಧಿಕಾರಿಗಳು ಇದನ್ನು ಪಾಲಿಸದೇ ಕಂಡು ಕಂಡರಿಯದಂತೆ ಕಣ್ಮುಚ್ಚಿ ಕುಳಿತುಕೊಂಡಿರುವುದಕ್ಕೆ ಕನ್ನಡ ಅಭಿಮಾನಿಗಳ ಹುಬ್ಬೆರುವಂತೆ ಮಾಡಿದೆ.

° ಕನ್ನಡದ ಪ್ರತಿಯೊಂದು ಶಾಲೆಗಳ ನಾಮ ಫಲಕಗಳು ರಾಜ್ಯದ ಆಡಳಿತ ಭಾಷೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು . ಆಂಗ್ಲ ಭಾಷೆ ಅಕ್ಷರಗಳಿಗೆ ಮೊದಲ ಆದ್ಯತೆ ನೀಡಿರುವ ಸರಕಾರಿ ಶಾಲೆಗಳ ನಾಮ ಫಲಕಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ. - ವಿ. ಲಕ್ಷ್ಮಯ್ಯ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಚಿಂಚೋಳಿ 

° ಗೊಬ್ಬು ನಾರುತ್ತಿರುವ ಕನ್ನಡ ಭವನ : ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ವಹಣೆಯಲ್ಲಿರುವ ಕನ್ನಡ ಭವನ ಪ್ಲಾಸ್ಟಿಕ್, ಬಿರಿಯಾನಿ ಪ್ಯಾಕೆಟ್ ಮತ್ತು ಮೂತ್ರಗಳಿಂದ ಗೊಬ್ಬು ನಾರುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆ ವಹಿಸಿರುವ ಸುರೇಶ ದೇಶಪಾಂಡೆ ಆಡಳಿತ ತಂಡ ವ್ಯವಹಾರಿಕ ಆಡಳಿತ ಭಾಷೆ ಕನ್ನಡ ಭಾಷೆಯನ್ನು ಪಸರಿಸುವಲ್ಲಿ ಮತ್ತು ಗಡಿ ಭಾಗದಲ್ಲಿ ಕನ್ನಡ ಭಾಷೆಯ ಸುಗಂಧ, ಸುವಾಹಸನೆ ಪರಿಮಳ ಹರಡಿಸುವಲ್ಲಿ ವಿಫಲವಾಗಿದೆ ಎನ್ನುವುದಕ್ಕೆ ಹುಲ್ಲು ಕಡ್ಡಿಗಳಿಂದ, ಕೆಸರು ಗುಂಡಿಗಳಿಂದ, ಬಿರಿಯಾನಿ ಪ್ಯಾಕೆಟ್ ಗಳಿಂದ ತುಂಬಿಕೊಂಡು ಕನ್ನಡ ಭವನ ಗೊಬ್ಬು ನಾರುತ್ತಿರುವುದ್ದೇ ಆಡಳಿತಕ್ಕೆ ಹಿಡಿದ ಕನ್ನಡಿ ಆಗಿದೆ.