ಡಾನ್ಸ್ ಸಂಘ ವದಂತಿಯಿಂದ ಜಾನಪದ ಸಂಭ್ರಮ
ಡಾನ್ಸ್ ಸಂಘ ವದಂತಿಯಿಂದ ಜಾನಪದ ಸಂಭ್ರಮ
ಕಲಬುರಗಿ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಗುಲಬರ್ಗಾ ಡಾನ್ಸ್ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 'ಜಾನಪದ ಸಂಭ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ನಿಲಕಂಠರಾವ ಮೂಲಗೆ ಜ್ಯೊತಿ ಬೆಳೆಗಿಸುವ ಮೂಲಕ ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ವೇ.ಮೂ.ಶ್ರೀ ಮಹೇಶ್ವರ ಶಾಸ್ತ್ರೀಗಳು, ಸಂಘದ ಅಧ್ಯಕ್ಷ ಯಂಕಪ್ಪ (ಅಕ್ಷಯ), ಸವಿತಾ ಒಂಟಿ, ತಿಪ್ಪಣ್ಣ ಒಡೆಯರಾಜ, ರವಿಚಂದ್ರ ಗುತ್ತೇದಾರ, ನಾಮದೇವ ಬಬಲಾದಕರ್, ಅಕ್ರಂಪಾಶಾ ಮೋಮಿನ್, ಗುಂಡಪ್ಪ ಎಚ್. ಸಾಳಂಕಿ, ಮುಕೇಶ ಸಿಂಗ್ ಠಾಕೂರ, ರಾಹುಲ್ ಪಿಂಟು ಕಡಗಂಚಿ, ಆನಂದಕುಮಾರ ಸಿಪಿಐ, ರಮೇಶ ತೆಗ್ಗಿನಮನಿ, ದೇವಿಂದ್ರ ಮಂಜನಾಳಕರ್ ಸೇರಿದಂತೆ ಇತರರು ಇದ್ದರು. 26. ತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.