ಡಿಡಿ ಚಂದನದಲ್ಲಿ ಜಿಎಸ್‌ಟಿ ಸಂವಾದ ಅಕ್ಟೋಬರ್ 11ರಂದು

ಡಿಡಿ ಚಂದನದಲ್ಲಿ ಜಿಎಸ್‌ಟಿ ಸಂವಾದ ಅಕ್ಟೋಬರ್ 11ರಂದು
ಕಲಬುರಗಿ: ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿ ಮಾಡಿದ ಜಿಎಸ್‌ಟಿ(ಸರಕು ಸೇವಾ ತೆರಿಗೆ) ಸುಧಾರಣಾ ಕ್ರಮಗಳ ಕುರಿತಾಗಿ ದೂರದರ್ಶನ ಚಂದನದಲ್ಲಿ ಶನಿವಾರ ಅಕ್ಟೋಬರ್ 11ರಂದು ಮಧ್ಯಾಹ್ನ 2:30ಕ್ಕೆ ವಿಶೇಷ ಸಂವಾದ ಕಾರ್ಯಕ್ರಮ ಪ್ರಸಾರವಾಗಲಿದೆ.
ಕಲಬುರಗಿ ದೂರದರ್ಶನ ಕೇಂದ್ರದಲ್ಲಿ ನಿರ್ಮಾಣಗೊಂಡ ಈ ಕಾರ್ಯಕ್ರಮದಲ್ಲಿ ಜಿಎಸ್‌ಟಿ ಕೇಂದ್ರ ಇಲಾಖೆಯ ಅಧಿಕ್ಷಕರಾದ ರಮೇಶ್ ತಪಶಿ ಹಾಗೂ
ಲೆಕ್ಕಪರಿಶೋಧಕರಾದ ಸಿ ಎ ಮಲ್ಲಿಕಾರ್ಜುನ ಮಹಾಂತಗೋಳ್ ಭಾಗವಹಿಸಲಿದ್ದಾರೆ ಈ ಸಂದರ್ಶನವನ್ನು ಡಾ ಸದಾನಂದ ಪೆರ್ಲ ನಡೆಸಿಕೊಡಲಿದ್ದಾರೆ. ಕೇಂದ್ರ ಸರ್ಕಾರದ ಜಿ ಎಸ್ ಟಿ ಸರಳಿಕರಣದ ಕುರಿತಾಗಿ ಸಮಗ್ರ ಮಾಹಿತಿ ನೀಡುವ ಈ ಕಾರ್ಯಕ್ರಮವನ್ನು ಪ್ರಸಾರ ನಿರ್ವಾಹಕರಾದ ಸಂಗಮೇಶ್ ಮಾರ್ಗದರ್ಶನದಲ್ಲಿ ಕಲಬುರಗಿ ದೂರದರ್ಶನ ಕೇಂದ್ರದಲ್ಲಿ ಸಿದ್ಧಪಡಿಸಲಾಗಿದೆ ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಸಿದ್ದಣ್ಣ ತಿಳಿಸಿದ್ದಾರೆ