ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) 2025-28ನೇ ಅವಧಿಯ ಚುನಾವಣೆಗೆ ದಿನಾಂಕ ಘೋಷಣೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) 2025-28ನೇ ಅವಧಿಯ ಚುನಾವಣೆಗೆ ದಿನಾಂಕ ಘೋಷಣೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಚುನಾವಣೆಗೆ ಮುಹೂರ್ತ ನಿಗದಿ
ಬೆಂಗಳೂರು: ರಾಜ್ಯದ ಕಾರ್ಯನಿರತ ಪತ್ರಕರ್ತರ ಪ್ರತಿಷ್ಠಿತ ಪ್ರಾತಿನಿಧಿಕ ಸಂಘಟನೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (Karnataka Union of Working Journalists – KUWJ) 2025-28 ನೇ ಅವಧಿಯ ಆಡಳಿತ ಮಂಡಳಿ ರಚನೆಗಾಗಿ ಚುನಾವಣೆ ದಿನಾಂಕ ಘೋಷಣೆಯಾಗಿದೆ.
ಮುಖ್ಯ ಚುನಾವಣಾಧಿಕಾರಿ ಎನ್. ರವಿ ಕುಮಾರ್ ಟೆಲೆಕ್ಸ್ ಅವರು ನೀಡಿದ ಮಾಹಿತಿಯ ಪ್ರಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 9000ಕ್ಕೂ ಹೆಚ್ಚು ಸಕ್ರೀಯ ಸದಸ್ಯರನ್ನು ಹೊಂದಿರುವ ರಾಜ್ಯದ ಅತಿ ದೊಡ್ಡ ಪತ್ರಕರ್ತರ ಸಂಘಟನೆಯಾಗಿದೆ. ಕಾರ್ಮಿಕ ಇಲಾಖೆಯ ಉಸ್ತುವಾರಿಯಲ್ಲಿ ರಾಜ್ಯ ಘಟಕದೊಂದಿಗೆ ಎಲ್ಲಾ ಜಿಲ್ಲಾ ಘಟಕಗಳಿಗೂ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ.
ಚುನಾವಣಾ ವೇಳಾಪಟ್ಟಿ ಈ ಕೆಳಗಿನಂತಿದೆ:
* ಅಕ್ಟೋಬರ್ 13 (ಸೋಮವಾರ): ಚುನಾವಣಾ ಅಧಿಸೂಚನೆ ಹಾಗೂ ಮತದಾರರ ಕರಡು ಪಟ್ಟಿ ಪ್ರಕಟ
* ಅಕ್ಟೋಬರ್ 19: ನಾಮಪತ್ರ ಸಲ್ಲಿಕೆ ಪ್ರಾರಂಭ
* ಅಕ್ಟೋಬರ್ 27: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
* ಅಕ್ಟೋಬರ್ 28: ನಾಮಪತ್ರಗಳ ಪರಿಶೀಲನೆ
* ಅಕ್ಟೋಬರ್ 30: ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನ
* ನವೆಂಬರ್ 9 (ಭಾನುವಾರ): ಮತದಾನ
ಮತದಾನವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಬೆಂಗಳೂರಿನ ಕಂದಾಯ ಭವನದ 3ನೇ ಮಹಡಿಯಲ್ಲಿ ಇರುವ ಕೆಯುಡಬ್ಲ್ಯೂಜೆ ಕೇಂದ್ರ ಕಚೇರಿಯ ಜೊತೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಮತದಾನವಾದ ತಕ್ಷಣವೇ ಮತ ಎಣಿಕೆ ನೆರವೇರಲಿದ್ದು, ಅದೇ ದಿನ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎನ್. ರವಿ ಕುಮಾರ್ ಟೆಲೆಕ್ಸ್ ತಿಳಿಸಿದ್ದಾರೆ.