ಇಂದು ಮಡಿವಾಳೇಶ್ವರ ದೇವರ ಅಭಿಷೇಕ ಕಾರ್ಯಕ್ರಮಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆಗಮನ

ಇಂದು ಮಡಿವಾಳೇಶ್ವರ ದೇವರ ಅಭಿಷೇಕ ಕಾರ್ಯಕ್ರಮಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆಗಮನ

ಇಂದು ಮಡಿವಾಳೇಶ್ವರ ದೇವರ ಅಭಿಷೇಕ ಕಾರ್ಯಕ್ರಮಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆಗಮನ

ಕಮಲನಗರ: ಬೀದರ ಜಿಲ್ಲೆಯ ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದ ಆರಾಧ್ಯ ದೈವ ಸದ್ಗುರು ಶ್ರೀ ಮಡಿವಾಳೇಶ್ವರ ದೇವಸ್ಥಾನದಲ್ಲಿ ನಡೆಯುವ ಅಭಿಷೇಕ ಕಾರ್ಯಕ್ರಮಕ್ಕೆ ಮಂಗಳವಾರ ಬೀದರ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವರಾದ ಮಾನ್ಯ ಶ್ರೀ ಈಶ್ವರ.ಬಿ.ಖಂಡ್ರೆ ಅವರು ಆಗಮಿಸುತ್ತಿದ್ದಾರೆ.

ಸಚಿವರ ಜೊತೆಯಲ್ಲಿ ಅವರ ಧರ್ಮಪತ್ನಿ, ಶ್ರೀಮತಿ ಡಾ.ಗೀತಾ ಈಶ್ವರ ಖಂಡ್ರೆ,ನಿದೇಶಕರು ಶಾಂತಿವರ್ಧಕ ಶಿಕ್ಷಣ ಸಂಸ್ಥೆಹಾಗೂ ಶ್ರೀ ಸಾಗರ ಈಶ್ವರ ಖಂಡ್ರೆ,ಸಂಸದರು ಬೀದರ ಇವರು ಬರುತಿದ್ದಾರೆ. 

ಅತಿಥಿಗಳಿಗೆ ಡಿಗ್ಗಿ ಗ್ರಾಮದ ವತಿಯಿಂದ ರಥದಲ್ಲಿ ಭವ್ಯ ಮೆರವಣಿಗೆ ಮೂಲಕ ದೇವಾಲಯಕ್ಕೆ ಬರಮಾಡಿ ಕೊಳ್ಳಲಾಗುವದು. ಖಂಡ್ರೆ ಪರಿವಾರದಿಂದ ಅಭಿಷೇಕ ಪೂಜೆ ನೆರವೇರುವುದು. ನಂತರ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. 

ತಾಲೂಕಿನಲ್ಲಿ ಪ್ರಖ್ಯಾತ ದೇವಾಲಯದಲ್ಲಿ ಒಂದಾದ ಮಡಿವಾಳೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ 20 ರಿಂದ 30 ಮದುವೆ ಸಮಾರಂಭಗಳು ನಡೆಯುತ್ತವೆ. ಭಕ್ತರ ಮನದ ಬೇಡಿಕೆ ಈಡೇರಿಸು ದೇವಸ್ಥಾನ ಇದಾಗಿದ್ದು. ನಮ್ಮ ದೇವರ ಕೀರ್ತಿ ಕಲ್ಯಾಣ ಕರ್ನಾಟಕದಲ್ಲಿ ಪ್ರಸಿದ್ದಿ ಪಡೆದಿದೆ. ಬೀದರ ಜಿಲ್ಲೆಯ ಎಲ್ಲಾ ಸದ್ದಭಕ್ತರು ಈ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮದ ಯಶಸ್ಸು ಹೆಚ್ಚಿಸಬೇಕೆಂದು ಮಡಿವಾಳೇಶ್ವರ ದೇವಾಲಯ ಟ್ರಸ್ಟ'ನ ಅಧ್ಯಕ್ಷರಾದ ಶ್ರೀ ದೇವೇಂದ್ರ ಪಾಟೀಲ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.