ದಿ. ಪಂ.ಹಣಮಂತ ಕಾರಟಗಿಯವರ 4ನೇ ಪುಣ್ಯಸ್ಮರಣೆ ಕಾರ್ಯಕ್ರಮ ಯಶಸ್ವಿ ಪಂಡಿತ ಪುಟ್ಟರಾಜ ಗುರುಗಳ ಶಿಷ್ಯರು ನಾಡಿನ ರತ್ನಗಳು

ದಿ. ಪಂ.ಹಣಮಂತ ಕಾರಟಗಿಯವರ 4ನೇ ಪುಣ್ಯಸ್ಮರಣೆ ಕಾರ್ಯಕ್ರಮ ಯಶಸ್ವಿ  ಪಂಡಿತ ಪುಟ್ಟರಾಜ ಗುರುಗಳ ಶಿಷ್ಯರು ನಾಡಿನ ರತ್ನಗಳು

ದಿ. ಪಂ.ಹಣಮಂತ ಕಾರಟಗಿಯವರ 4ನೇ ಪುಣ್ಯಸ್ಮರಣೆ ಕಾರ್ಯಕ್ರಮ ಯಶಸ್ವಿ ಪಂಡಿತ ಪುಟ್ಟರಾಜ ಗುರುಗಳ ಶಿಷ್ಯರು ನಾಡಿನ ರತ್ನಗಳು

ಧಾರವಾಡ, ಅ. 8– “ಕಲ್ಯಾಣ ಕರ್ನಾಟಕದ ಕಲಾವಿದರು ರಾಜ್ಯದ ಪ್ರಮುಖ ನಗರಗಳಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರಲ್ಲಿ ಪಂ. ಪುಟ್ಟರಾಜ ಗುರುಗಳ ಶಿಷ್ಯರು ನಾಡಿನ ನಿಜವಾದ ರತ್ನಗಳು” ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ಅವರು ಧಾರವಾಡದ ಪಂ. ಹನುಮಂತ ಕಾರಟಗಿ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಆಯೋಜಿಸಿದ್ದ ಪಂ. ಹನುಮಂತ ಕಾರಟಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕಾರ್ಯಕ್ರಮವು ಆಲೂರು ವೆಂಕಟರಾವ ಸಭಾಭವನದಲ್ಲಿ ವಿಜೃಂಭಣೆಯಿಂದ ಜರುಗಿತು.

ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಮಾತನಾಡಿ, “ಗದುಗಿನ ವೀರೇಶ್ವರ ಪುಣ್ಯಾಶ್ರಮವು ನಿಜಾರ್ಥದಲ್ಲಿ ಜಾತ್ಯಾತೀತ ತತ್ವವನ್ನು ಪಾಲಿಸುತ್ತಿರುವ ವಿಶಿಷ್ಟ ಆಶ್ರಮವಾಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ನಾಡಿನ ಹಿರಿಯ ತಬಲಾ ವಾದಕರಾದ ಡಾ. ರಾಚಯ್ಯ ಹಿರೇಮಠ ಅವರಿಗೆ ‘ಪಂ. ಹನುಮಂತ ಕಾರಟಗಿ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿಯ ಸಂಚಾಲಕರಾದ ಪ್ರಕಾಶ ಬಾಳಿಕಾಯಿ, ಹಿರಿಯ ಸಂಗೀತಗಾರರಾದ ಪಂಡಿತ್ ಸೋಮನಾಥ್ ಮರಡೂರ್ ,ಕಾರಟಗಿಯ ಸಾಬಣ್ಣ ಕಟ್ಟಿಕಾರ, ಹಿರಿಯ ಸಂಗೀತ ನಿರ್ದೇಶಕ ಪಂ. ದೇವೇಂದ್ರಕುಮಾರ ಪತ್ತಾರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಡಾ. ಪರುಶುರಾಮ ಕಟ್ಟಿಸಂಗಾವಿ ಅವರ ಸ್ವರ ಸಂವಾದಿನಿ ಸಂಗೀತ ವಿದ್ಯಾಲಯದ ಮಕ್ಕಳಿಂದ ಭಾವಪೂರ್ಣ ಪ್ರಾರ್ಥನೆ ನೆರವೇರಿತು. ಡಾ. ಎ. ಎಲ್. ದೇಸಾಯಿ ಸ್ವಾಗತ ಭಾಷಣ ಮಾಡಿದರು ಮತ್ತು ರಾಧಾ ಕಾರಟಗಿ ವಂದಿಸಿದರು. ನಿರೂಪಣೆಯನ್ನು ಅಮರಯ್ಯಸ್ವಾಮಿ ಜಾಲಿಬೆಂಚಿ ಅವರು ಯಶಸ್ವಿಯಾಗಿ ನಿರ್ವಹಿಸಿದರು.

ಕಾರ್ಯಕ್ರಮದ ಸಾಂಸ್ಕೃತಿಕ ಭಾಗದಲ್ಲಿ ಹಲವು ಕಲಾವಿದರು ತಮ್ಮ ಸಂಗೀತ ಕೌಶಲ್ಯ ಪ್ರದರ್ಶಿಸಿದರು.

ಸಿಂಚನಾ ದೀಕ್ಷಿತ (ಸುಗಮಸಂಗೀತ), ಡಾ. ರಾಚಯ್ಯ ಹಿರೇಮಠ (ತಬಲಾ ಸೋಲೋ), ಡಾ. ನಾರಾಯಣ ಹಿರೇಕೊಳಚಿ ಮತ್ತು ಡಾ. ಗುರುಬಸವ ಮಹಾಮನೆ (ವಯೋಲಿನ್ ವಾದನ), ಮೃತ್ಯುಂಜಯ ದೊಡವಾಡ (ಸುಗಮಸಂಗೀತ), ಬಸವರಾಜ ಹೂಗಾರ (ಗಾಯನ), ಡಾ. ಪುಟ್ಟರಾಜ ಭಜಂತ್ರಿ (ಶಹನಾಯಿ ವಾದನ), ಡಾ. ಕೃಷ್ಣಾ ಸುತಾರ (ಗಾಯನ) ಸಂಗಮೇಶ ಸೊಂತ, ರಾಘವ್ ಕಂಬಾರ್,ಚೇತನ್ ಬಿ. ಕೋಬಾಳ್, ಜಗದೀಶ್ ಮಾನು,ಅನೀಲ್ ಮಠಪತಿ,ತಮ್ಮ ಕಲಾ ನೈಪುಣ್ಯದಿಂದ ಪ್ರೇಕ್ಷಕರ ಮನ ಗೆದ್ದರು.

ತಬಲಾದಲ್ಲಿ ಶ್ರೀಧರ ಮಾಂಡ್ರೆ, ಭೀಮಾಶಂಕರ ಬಿದನೂರು, ನಿಸಾರ ಅಹಮ್ಮದ್, ದಯಾನಂದ ಸುತಾರ ಹಾಗೂ ಹಾರ್ಮೋನಿಯಂನಲ್ಲಿ ಡಾ. ಪರುಶುರಾಮ ಕಟ್ಟಿಸಂಗಾವಿ, , ಶೇಖರ ಗದಗ ಸಂಗತಿಯಾಗಿ ಸಹಕರಿಸಿದರು.   

ದಿ.ಹಣಮಂತ ಕಾರಟಗಿ ಯವರು ಸುವರ್ಣ ಸ್ಟಾರ್ ಸಿಂಗರ್ ಎದೆ ತುಂಬಿ ಹಾಡುವೆನು ನಕ್ಷತ್ರ ಮಂಥನ ಎಂದೋ ಮರೆಯದ ಹಾಡು ಹಾಡು ಬಾ ಕೋಗಿಲೆ ಈ ರಿಯಾಲಿಟಿ ಶೋ ಗಳಲ್ಲಿ ತಬಲಾ ನುಡಿಸಿದ್ದಾರೆ ಚಲನಚಿತ್ರಗಳಿಗೆ ಧ್ವನಿಸುರುಳಿಗಳಿಗೆ ಉದಾಹರಣೆಗೆ ಮರಳಿ ಬಾರದೂರಿಗೆ ನಿನ್ನ ಪಯಣ ಈ ಹಾಡಿಗೆ ಹನುಮಂತ್ ಕಾರಟಗಿ ತಬಲ ನುಡಿಸಿದ್ದಾರೆ ಮೊದಲನೇ ವರ್ಷ ಕಾರಟಗಿ ಎರಡನೇ ವರ್ಷ ಬೆಂಗಳೂರು ಮೂರನೇ ವರ್ಷ ಕಲಬುರಗಿ ನಾಲ್ಕನೇ ವರ್ಷ ಧಾರವಾಡ ಹೀಗೆ ಪುಣ್ಯ ಸ್ಮರಣೆ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ ದಿ. ಹನುಮಂತ ಕಾರಟಗಿ ಆತ್ಮೀಯರ ಗೆಳೆಯ ರುದ್ರಯ್ಯ ಮದ್ಲಾಪುರ್ ಅವರ ಪ್ರಾಸ್ತಾವಿಕ ಮಾತನಾಡಿ ಭಾವುಕರಾದರು ನೆರೆದಿದ್ದ ಪ್ರೇಕ್ಷಕರೆಲ್ಲರ ಕಣ್ಣಲ್ಲಿ ನೀರು ತಂದಿದ್ದು ವಿಶೇಷ ವಾಗಿತ್ತು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಾಬುರಾವ ಕೋಬಾಳ್, ಸಾಹಿತಿ ಬಸವರಾಜ ಕಲೆಗಾರ್, ಡಾ, ಶಾಂತರಾಮ ಹೆಗಡೆ,ಮಲ್ಲಿಕಾರ್ಜುನ ಚಿಕ್ಕಮಠ, ಬಸಣ್ಣಗೌಡ ಶಾನಬಾಳ, ಅನಿತಾ ಚಿಕ್ಕಮಠ, ಡಾ, ಶ್ರೀಧರ್ ಕುಲಕರ್ಣಿ, ಹಣಮಂತ ಮಳಾಲಿ, ಸುರೇಶ ಮಂಗಳೂರ್, ಸದಾನಂದ್ ತವಡೆ, ವೀರಣ್ಣ ಪತ್ತಾರ್,ಕು. ಸಾತ್ವಿಕ್ ಎಚ್. ಕಾರಟಗಿ ಮುಂತಾದವರು ಭಾಗವಹಿಸಿದ್ದರು. ಕಾರ್ಯಕ್ರಮವು ಭಕ್ತಿ ಮತ್ತು ಸಂಗೀತದ ಸಂಯೋಜನೆಯಿಂದ ಕಂಗೊಳಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.