ಸದ್ಗುರು ದ್ರೋಣಾಚಾರ್ಯ" ರಾಜ್ಯಮಟ್ಟದ ಪ್ರಶಸ್ತಿಗೆ ಡಾ. ಪುರುಷೋತ್ತಮ್ ಬಂಗ್ ಆಯ್ಕೆ

ಸದ್ಗುರು ದ್ರೋಣಾಚಾರ್ಯ" ರಾಜ್ಯಮಟ್ಟದ ಪ್ರಶಸ್ತಿಗೆ ಡಾ. ಪುರುಷೋತ್ತಮ್ ಬಂಗ್ ಆಯ್ಕೆ
ಬೆಂಗಳೂರು: ಖ್ಯಾತ ವಿದ್ಯಾವಂತ, ಶೈಕ್ಷಣಿಕ ತಜ್ಞ ಹಾಗೂ ಆಡಳಿತ ಪರಿಣಿತರಾದ **ಡಾ. ಪುರುಷೋತ್ತಮ್ ಬಂಗ್** ರವರು ಬೆಂಗಳೂರು ನಗರದ ಪ್ರತಿಷ್ಠಿತ ಸಂಸ್ಥೆಯಾದ **ಆರ್.ವಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್** ನ ಪ್ರಾಧ್ಯಾಪಕರಾಗಿ ಹಾಗೂ ನಿರ್ದೇಶಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಾ. ಬಂಗ್ ರವರು:
* HE (UK) FDM (Melbourne University)
* MBA (Monash University, Australia)
* Ph.D. ಪದವಿಧರರಾಗಿದ್ದು, ಶಿಕ್ಷಣ ಮತ್ತು ಸಂಸ್ಥಾ ನಿರ್ವಹಣೆಯಲ್ಲಿ ಹೆಚ್ಚಿನ ಅನುಭವ ಹೊಂದಿದ್ದಾರೆ.
ಅವರು ಅತ್ಯಂತ ನೈಪುಣ್ಯತೆಯಿಂದ ಅಕಾಡೆಮಿಕ್ ಕಾರ್ಯಕ್ರಮಗಳು, ಮೌಲ್ಯಾಧಾರಿತ ಶಿಕ್ಷಣ ಹಾಗೂ ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದು, ಉತ್ತಮ ಶೈಕ್ಷಣಿಕ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ಅವರ ನೇತೃತ್ವದಲ್ಲಿ ಸಂಸ್ಥೆಯು ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಾಧನೆಗಳನ್ನು ಗಳಿಸಿದೆ.
ಬಂಗ್ ಅವರ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್, ಬೆಂಗಳೂರು ವತಿಯಿಂದ 13 ಜುಲೈ 2025 ಭಾನುವಾರದಂದು ಬೆಂಗಳೂರಿನ ,ಜೆ.ಎಸ್.ಎಸ್. ಸಭಾಕಗಣದಲ್ಲಿ ಡಾ. ಪುರುಷೋತ್ತಮ್ ಬಂಗ್ ರವರಿಗೆ ಕನ್ನಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ "ಸದ್ಗುರು ದ್ರೋಣಾಚಾರ್ಯ" ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ರಾಜ್ಯಾಧ್ಯಕ್ಷ ಡಾ.ಜಿ.ಶಿವಣ್ಣ. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.