ವೀರಶೆಟ್ಟಿ ಅವರಾದ ಅವರ ಕೃತಿ ಲೋಕಾರ್ಪಣೆ

ವೀರಶೆಟ್ಟಿ ಅವರಾದ ಅವರ ಕೃತಿ ಲೋಕಾರ್ಪಣೆ

ಕಲ್ಯಾಣ ಕಹಳೆ ವಾರ್ತೆ: ಕಲಬುರಗಿ ಆರಾಧ್ಯ ದೇವ ಅಪ್ಪ ಶ್ರೀ ಶರಣಬಸವೇಶ್ವರರ ದೇವಸ್ಥಾನದ ಆವರಣದಲ್ಲಿರುವ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಇಂದು ದಿನಾಂಕ 21.12.2025 ರಂದು ವೀರಶೆಟ್ಟಿ ಅವರಾದ ಅವರು ಬರೆದ ಹಾರ್ವೇಸ್ಟ್ ಆಫ್ ಸ್ಟಿಲನೆಸ್ಸ್ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶರಣ ಸಂಸ್ಥಾನದ ಕಾರ್ಯದರ್ಶಿಗಳು ಶ್ರೀ ಬಸವರಾಜ್ ದೇಸಮುಖ್ ದಿವ್ಯಾಸಾನಿಧ್ಯ ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ

ಡಾ ಬಸವರಾಜ್ ಪಾಟೀಲ್ ಸೇಡಂ ಡಾ ಬಸವರಾಜ್ ಡೊಣ್ಣೂರು ಸೆಂಟ್ರಲ್ ಯೂನಿವರ್ಸಿಟಿ ಕಲ್ಬುರ್ಗಿ ಪ್ರೊಫ್ಫೆಸರ್ ಶಾಂತಕುಮಾರ್ ಬಿಲಗುಂದಿ ವಿಜಯ್ ಕುಮಾರ್ ಪಾಟೀಲ್ ತೇಗಲತಿಪ್ಪಿ ಶ್ರೀ ಮಂಜುನಾಥ್ ECO ರಾಯಚೂರು ನಟರಾಜ್ ಎಮ್ CRP ಡಾ ವಿರೇಶ್ ಪೂಜಾರಿ ಬಳ್ಳಾರಿ ಡಾ ಸುಮಂಗಲಾ ರೆಡ್ಡಿ ಶರಣಬಸವ ವಿಶ್ವವಿದ್ಯಾಲಯ

ಡಾ ಶ್ರೀಕಾಂತ್ ಚವಾಣ್ ಬಸವಕಲ್ಯಾಣ ಎಸ್ ವಿ ಪಸಾರ ಅಧ್ಯಕ್ಷರು ವಕೀಲರ ಸಂಘ ಕಲಬುರಗಿ ಗಣ್ಯಾದಿಗಣ್ಯರ ನೇತೃತ್ವದಲ್ಲಿ ಹಾರ್ವೇಸ್ಟ್ ಆಫ್ ಸ್ಟಿಲನೆಸ್ಸ್ ಕವನ ಸಂಕಲನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಈ ಕವನ ಸಂಕಲನ ಲೋಕಾರ್ಪಣೆ ಮಾಡಿದರು. ಚಂದ್ರಕಾಂತ ಅರ್ ಕಾಳಗಿ ಸ್ವಾಗತಿಸಿದರು ಸೂರ್ಯಕಾಂತ ಅರ್ ಕಾಳಗಿ ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನಾಡಿದರು. ಡಾ ಬಸವರಾಜ್ ಪಾಟೀಲ ಸೇಡಂ ಜೀ ಹಾಗೂ ಡಾ ಬಸವರಾಜ್ ಡೋಣುರ್ ರವರು ಕವನ ಸಂಕಲನದ ಕುರಿತು ವಿವರಣಾತ್ಮಕವಾಗಿ ಮಾತನಾಡಿದರು.ಕೊನೆಯದಾಗಿ ಬಸವರಾಜ್ ದೇಶಮುಖ್ ಅವರು ಕಾರ್ಯಕ್ರಮದ ದಿವ್ಯಾಸಾನಿಧ್ಯ ವಹಿಸಿ ಅಧ್ಯಕ್ಷಿಯ ನುಡಿಗಳನ್ನಾಡಿದರು.