ದಾಸಿಮಯ್ಯ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ ನೇಕಾರರ ಹೋರಾಟ ಸಮಿತಿಯ ವತ್ತಾಯ

ದಾಸಿಮಯ್ಯ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ ನೇಕಾರರ ಹೋರಾಟ ಸಮಿತಿಯ ವತ್ತಾಯ

ದಾಸಿಮಯ್ಯ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ ನೇಕಾರರ ಹೋರಾಟ ಸಮಿತಿಯ ವತ್ತಾಯ

ಕಲಬುರಗಿ, ಅಕ್ಟೋಬರ್ 6: ಬೆಂಗಳೂರು ನಗರದಲ್ಲಿ ವಚನ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವರ್ಷ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ, ಕಲ್ಯಾಣ ಕರ್ನಾಟಕ ನೇಕಾರರ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ವಿನೋದಕುಮಾರ ಅವರು ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, “ದೇವರ ದಾಸಿಮಯ್ಯ ವಚನ ವಿಶ್ವವಿದ್ಯಾಲಯವನ್ನು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಪುಣ್ಯಭೂಮಿ ಮೂದನೂರಲ್ಲಿ ಸ್ಥಾಪಿಸಬೇಕು ಎಂದು ಹೇಳಿದರು 

ವಿನೋದಕುಮಾರ ಅವರು ಮುಂದುವರಿಸಿ, ಮೂದನೂರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಹಾಗೂ ನೇಕಾರಿಕೆ ವಸ್ತು ಪ್ರದರ್ಶನ (ಹ್ಯಾಂಡ್ಲೂಮ್ ಎಕ್ಸ್‌ಪೋ) ಘೋಷಣೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದರು.

 “ಮೂದನೂರವು ವಚನ ಬ್ರಹ್ಮ, ವಚನ ಜನಕ, ಕನ್ನಡದ ಆದ್ಯ ವಚನಕಾರ ಹಾಗೂ ನೈಜ ಜಾತ್ಯಾತೀತ ತತ್ವಗಳ ಪ್ರತಿಪಾದಕರಾದ ಶ್ರೀ ದೇವರ ದಾಸಿಮಯ್ಯನವರ ಪುಣ್ಯಭೂಮಿ. ಪ್ರತಿವರ್ಷ ನಡೆಯುವ ದಾಸಿಮಯ್ಯ ಜಾತ್ರೆಯಲ್ಲಿ ಸಾವಿರಾರು ಭಕ್ತರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಭಾಗವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಮೂದನೂರದಲ್ಲಿ ಯಾಂತ್ರಿಕ ನಿವಾಸ (ಕ್ಯಾಂಪ್ ಆಫೀಸ್) ಮಾಡಬೇಕು ಎಂದು ನಾವು ಮನವಿ ಮಾಡುತ್ತೇವೆ” ಎಂದು ಹೇಳಿದರು.

ಮುಖ್ಯಮಂತ್ರಿಯವರು ಸ್ಥಳೀಯ ಭಾವನೆ ಮತ್ತು ನೈಜ ವಸ್ತುಸ್ಥಿತಿ ಅರಿತು ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ವ್ಯಕ್ತಪಡಿಸಿದ ಅವರು, ಮುಂದಿನ ವರ್ಷ ಕನ್ನಡ ವಚನೋತ್ಸವವನ್ನು ಆಯೋಜಿಸಿ ದಾಸಿಮಯ್ಯನವರ ಸ್ಮರಣೆಗೆ ಗೌರವ ಸಲ್ಲಿಸಲಾಗುವುದು ಎಂದರು.

ಅಂತಿಮವಾಗಿ ಅವರು, “ವಚನೋತ್ಸವವು ನಾಡಿನ ಉತ್ಸವವಾಗಬೇಕು; ಸರ್ವಜನಾಂಗದ ಬೆಂಬಲದೊಂದಿಗೆ ಕಲ್ಯಾಣ ಕರ್ನಾಟಕ ನಾಡಿನಲ್ಲಿ ಶಾಂತಿ, ಏಕತೆ ಹಾಗೂ ಪ್ರಗತಿಯ ಸಂಕೇತವಾಗಿ ಬೆಳೆಯಲಿ” ಎಂದು ಆಶಯ ವ್ಯಕ್ತಪಡಿಸಿದರು.