ದುರ್ಗಾ ನಗರದಲ್ಲಿ ನಡೆದ ಅತ್ಯಾಚಾರ ಖಂಡಿಸಿ ತಪ್ಪಿತಸ್ಥರಿಗೆ ಗಲ್ಲಿಗೇರಿಸಬೇಕೆಂದು ಭೋವಿ ವಡ್ಡರ ಸಮಾಜ ಆಗ್ರಹಿಸಿದೆ

ದುರ್ಗಾ ನಗರದಲ್ಲಿ ನಡೆದ ಅತ್ಯಾಚಾರ ಖಂಡಿಸಿ ತಪ್ಪಿತಸ್ಥರಿಗೆ ಗಲ್ಲಿಗೇರಿಸಬೇಕೆಂದು ಭೋವಿ ವಡ್ಡರ ಸಮಾಜ ಆಗ್ರಹಿಸಿದೆ

 ದುರ್ಗಾ ನಗರದಲ್ಲಿ ನಡೆದ ಅತ್ಯಾಚಾರ ಖಂಡಿಸಿ ತಪ್ಪಿತಸ್ಥರಿಗೆ ಗಲ್ಲಿಗೇರಿಸಬೇಕೆಂದು ಭೋವಿ ವಡ್ಡರ ಸಮಾಜ ಆಗ್ರಹಿಸಿದೆ 

ಕಲಬುರಗಿ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಡೂರ ಗ್ರಾಮ ಪಂಚಾಯತಿಯ ದುರ್ಗಾ ನಗರದ ಯುವತಿಯನ್ನು ರಂಗಂಪಲ್ಲಾ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ ಅಲ್ತಾಪ್ ಮತ್ತು ಅವರ ಗೆಳೆಯರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಗುಂಡಿಟ್ಟು ಕೊಲ್ಲಬೇಕೆಂದು ಜಿಲ್ಲಾ ಭೋವಿ ವಡ್ಡರ ಸಮಾಜದ ಅಧ್ಯಕ್ಷ ಗುಂಡಪ್ಪ ಸಾಳಂಕೆ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಲ್ತಾಪ್ ಎನ್ನುವ ವ್ಯಕ್ತಿ ಇನಸ್ಟಾಗ್ರಾಂ ಮೂಲಕ ಪರಿಚಯವಾಗಿ ಲವ್ ಜಿಹಾದ್ ಮಾಡಿ ಯುವತಿಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದು ತನ್ನ ಸ್ನೇಹಿತರ ಜೊತೆಗೂಡಿ ಸಾಮೂಹಿಕವಾಗಿ ಅತ್ಯಾಚಾರವನ್ನು ಮಾಡಿರುತ್ತಾರೆ. ಕೂಡಲೇ ಸರಕಾರವು ಮತ್ತು ಸಮಾಜ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲಾ ದಂಡಾಧಿಕಾರಿಗಳು ನೊಂದ ಕುಟುಂಬಕ್ಕೆ ಭದ್ರತೆ ನೀಡಬೇಕೆಂದು ಮಾಧ್ಯಮದ ಮುಖಾಂತರ ಮನವಿ ಮಾಡಿದರು .

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಕುಸ್ತಿ, ತಿಪ್ಪಣ್ಣ ಒಡೆಯರಾಜ, ವಿಠಲ ನೆಲೋಗಿ, ನಗರ ಅಧ್ಯಕ್ಷರಾದ ಸಂಜು ಮಂಜಾಳಕರ, ದಶರಥ ಚೌಗಲೆ, ರಾಜು ಗುತ್ತೇದಾರ, ನಾಗೇಂದ್ರಪ್ಪ ನಂದಿಕೂರ, ಸಿದ್ರಾಮ ದಂಡಗೂಲಕರ್, ರಾಮಯ್ಯ ಪೂಜಾರಿ, ನಿಂಗಣ್ಣ ದೇವಕರ್, ರಾಜು ಮೇಸ್ತ್ರಿ, ಶಂಕರ ದೇವದುರ್ಗ, ಶಂಕರ ಮಕ್ಕಳ್, ಮೋಹನ ವೀಟಕರ್, ಮನೋಜ ಜಾಧವ, ಭೀಮಾಶಂಕರ ಭಂಕೂರ, ಶ್ರೀಹರಿ ಜಾದವ, ಕೃಷ್ಣಾ ಕುಸಾಳಕರ, ಅರ್ಜುನ ಬೆಲೂರ, ಪರಶುರಾಮ ರಾಜಾಪೂರ, ರವಿ ಹಾಗರಗಿ ಹಲವಾರು ಉಪಸ್ಥಿತರಿದ್ದರು.