ಮಾತೆ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ ಆಚರಣೆ
ಮಾತೆ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ ಆಚರಣೆ
ಕಲಬುರಗಿ : ಆಳಂದ ರಸ್ತೆಯ ಶೆಟ್ಟಿ ಟಾಕೀಸ್ ಹತ್ತಿರ ಸ್ವಾಮಿ ಕಾಂಪ್ಲೆಕ್ಸ್ನಲ್ಲಿರುವ ಅಖಿಲ ಕರ್ನಾಟಕ ಹೂಗಾರ ಮಾಹಾ ಸಭಾದ ಕಚೇರಿಯಲ್ಲಿ ಅಖಿಲ ಕರ್ನಾಟಕ ಹೂಗಾರ ಮಾಹಾ ಸಭಾ ಬೆಂಗಳೂರು ಕಲಬುರಗಿ ಘಟಕದ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಶರಣಪ್ಪಾ ಹೂಗಾರ ಅವರ ನೇತೃತ್ವದಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ ಆಚರಿಸಲಾಯಿತು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ರಾಚಪ್ಪ ಹೂಗಾರ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ತತ್ವ ಸಿದ್ಧಾಂತದಿAದಾಗಿ ಪುರುಷರಷ್ಟೇ ಸ್ತ್ರೀಯರಿಗೂ ಸಮಾನ ಅವಕಾಶ, ಹಕ್ಕುಗಳು ಸಿಕ್ಕಿವೆ. ಸಂವಿಧಾನದತ್ತ ಹಕ್ಕುಗಳಿಂದಾಗಿ ಪ್ರಧಾನಿ, ರಾಷ್ಟ್ರಪತಿ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲೂ ಮಹಿಳೆಯರು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಬಾಲ್ಯವಿವಾಹ, ಸತಿ ಸಹಗಮನ ಹೀಗೆ ಅನಿಷ್ಠ ಪದ್ಧತಿಗಳಿಂದ ಸ್ತ್ರೀಯರಿಗೆ ಸ್ವಾತಂತ್ರ‍್ಯ, ಶಿಕ್ಷಣ, ಸಮಾನ ಅವಕಾಶ ಇರಲಿಲ್ಲ, ಸಾವಿತ್ರಿಬಾಯಿ ಪುಲೆ ಎಷ್ಟೇ ಕಷ್ಟ ಎದುರಾದರೂ ಹೆಣ್ಮಕ್ಕಳ ಶಾಲೆ ಆರಂಭಿಸಿ ಅಕ್ಷರ ಕಲಿಸಿದ ಅಕ್ಷರದವ್ವ ಎಂಬ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ಗೌರವ ಅಧ್ಯಕ್ಷ ಗಿರೀಶ್ ಹೂಗಾರ ರೆವೇಗಿ, ಉಪಾಧ್ಯಕ್ಷ ಕಲಮೇಶ ಹೂಗಾರ, ಪ್ರಧಾನ ಕಾರ್ಯದರ್ಶಿ ವಿನೋದ ಹೂಗಾರ, ಮುಖಂಡರಾದ ದತ್ತರಾಜ ಗುತ್ತೇದಾರ್, ಸೋಮಶೇಖರ್ ಪಾಟೀಲ್, ಪ್ರಕಾಶ್ ಬಿ ಫುಲಾರಿ ಆಳಂದ, ಮಲ್ಲೀಕಾರ್ಜುನ್ ಹೂಗಾರ ಮುತ್ತ್ಯಾ, ಶಿವಲಿಂಗ ಹೂಗಾರ, ಕೆಎಸ್‌ಆರ್‌ಟಿಸಿ ದಯಾನಂದ ಹಾಸು ಹೂಗಾರ, ಸುಭಾಷ್ ಪಾಟೀಲ್ ಕನ್ನಡಗಿ, ವಿಜಯಕೂಮಾರ ಅಣ್ಣಪ್ಪಾ ಹೂಗಾರ, ಚನಬಸಪ್ಪಾ ಸಾಗರೆ, ಸುರೇಂದ್ರ ಪಾಟೀಲ್, ನಿಂಗಣ್ಣ ಸಾಗರೆ, ಸಿದ್ದು ಹೂಗಾರ ಸುಲೇಪೇಠ, , ರಾಮಲಿಂಗಾ ಹೂಗಾರ, ಸಂಗಮೇಶ ಹೂಗಾರ, ಶಿವಾಜಿ ಹೂಗಾರ, ಬಸವರಾಜ ಶರಣಪ್ಪಾ ಹೂಗಾರ ಅಂಬೆವಾಡ, ಶರಣು ಹೂಗಾರ ಕನ್ನಡಿಗ ಸೇರಿದಂತೆ ಇತರರು ಇದ್ದರು
.
