ಬ್ರೈನೆಕ್ಸ್ ಚಿಲ್ಡ್ರನ್ ಡೆವಲಪ್ಮೆಂಟ್ ಸೆಂಟರ್ ಕಲ್ಬುರ್ಗಿ ವತಿಯಿಂದ ವರ್ಲ್ಡ್ ಸೆಲೆಬ್ರಲ್ ಪ್ಯಾಲೇಸಿ ಡೇ

ಬ್ರೈನೆಕ್ಸ್ ಚಿಲ್ಡ್ರನ್   ಡೆವಲಪ್ಮೆಂಟ್ ಸೆಂಟರ್ ಕಲ್ಬುರ್ಗಿ ವತಿಯಿಂದ ವರ್ಲ್ಡ್ ಸೆಲೆಬ್ರಲ್ ಪ್ಯಾಲೇಸಿ ಡೇ

ಬ್ರೈನೆಕ್ಸ್ ಚಿಲ್ಡ್ರನ್ ಡೆವಲಪ್ಮೆಂಟ್ ಸೆಂಟರ್ ಕಲ್ಬುರ್ಗಿ ವತಿಯಿಂದ ವರ್ಲ್ಡ್ ಸೆಲೆಬ್ರಲ್ ಪ್ಯಾಲೇಸಿ ಡೇ

ಕಲಬುರಗಿ: ನಗರದ ರೋಟರಿ ಕ್ಲಬ್ ಶಾಲೆಯಲ್ಲಿ ಬ್ರೈನೆಕ್ಸ್ ಚಿಲ್ಡ್ರನ್ ಡೆವಲಪ್ಮೆಂಟ್ ಸೆಂಟರ್ ಕಲ್ಬುರ್ಗಿ ವತಿಯಿಂದ ವರ್ಲ್ಡ್ ಸೆಲೆಬ್ರಲ್ ಪ್ಯಾಲೇಸಿ ಡೇ ಅಗವಾಗಿ ವಿಶೇಷ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಉದ್ಘಾಟಿಸಿ ಮಾತನಾಡಿ ಕಲ್ಯಾಣ ಕರ್ನಾಟಕದಲ್ಲಿ ಈ ರೀತಿ ವಿಶೇಷ ಮಕ್ಕಳಿಗೆ ಸಂಸ್ಥೆಯನ್ನು ತೆರೆದು ಅವರ ನುನ್ನತೆಗಳನ್ನು ಸರಿಪಡಿಸುತ್ತಿರುವಂತ ಸದರಿ ಸಂಸ್ಥೆಗೆ ಅಭಿನಂದನೆಸಿದರು ಹಾಗೂ ಈ ರೀತಿ ಸಾಮಾಜಿಕ ಕಾರ್ಯಕರ್ಮಗಳಲ್ಲಿ ಅವರ ಜೊತೆಗೆ ಇದ್ದೇವೆ ಅಂತ ತಿಳಿಸಿದರು. 

ಅದರಂತೆ ಮುಖ್ಯ ಅತಿಥಿಯಾಗಿ ಆಗಮಿಸಿದಂತ ಡಾ. ಎಚ್ ವೀರಭದ್ರಪ್ಪ ಮಾಜಿ ಅಧ್ಯಕ್ಷರು ಕರ್ನಾಟಕ ಮೆಡಿಕಲ್ ಕೌನ್ಸಿಲ್ ರವರು ಮಾತನಾಡಿ ಸದರಿ ಸಂಸ್ಥೆಯು ಒಳ್ಳೆ ಕೆಲಸ ಮಾಡುತ್ತಿದೆ ಹಾಗೂ ಇಡೀ ದೇಶದಲ್ಲಿ 10% ಮಕ್ಕಳಲ್ಲಿ ಒಂದು ಪರ್ಸೆಂಟ್ ಮಕ್ಕಳು ಈ ರೀತಿ ವಿಶೇಷ ನನ್ನತ್ತೆಗಳನ್ನು ಹೊಂದಿದ ಮಕ್ಕಳು ಹುಟ್ಟುತ್ತಿರುವುದರಿಂದ ಅವರನ್ನು ಎಲ್ಲಾ ವಿಭಾಗದಲ್ಲಿ ಪರಿಪೂರ್ಣ ಮಾಡಲು ಸಂಸ್ಥೆ ಒಳ್ಳೆಯ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಹುರಿದುಂಬಿಸಿದರು. 

ಈ ಸಂದರ್ಭದಲ್ಲಿ ಡಾ. ದೇವಿದಾಸ ಪಾಟೀಲ್, ಡಾ. ಅನ್ವರ್ ಖಾನ್, ಡಾ. ನಮ್ಮರ ಹಯಾತ್, ಡಾ. ಮಲ್ಲೇರಾವ ಮಲ್ಲೆ, ಸಂಸ್ಥೆಯ ಅಧ್ಯಕ್ಷೆ ಡಾ. ರಾಗಿಣಿ ಎಂ, ಡಾ. ರಾಹುಲ್ ಮದಕನಹಳ್ಳಿ, ಶರಣ ರಾಜ್ ಚಪ್ಪರಬಂದಿ ಇದ್ದರು.