ಕು. ಸಿಂಚನಲಕ್ಷ್ಮೀ ಕೋಡಂದೂರ್ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೆಯ ರ‍್ಯಾಂಕ್‌.

ಕು. ಸಿಂಚನಲಕ್ಷ್ಮೀ  ಕೋಡಂದೂರ್  ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೆಯ ರ‍್ಯಾಂಕ್‌.

ಕು. ಸಿಂಚನಲಕ್ಷ್ಮೀ ಕೋಡಂದೂರ್ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೆಯ ರ‍್ಯಾಂಕ್‌.

  ಪೆರ್ನಾಜೆ : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ ನಡೆಸಿದ 2024 25 ನೇ ಸಾಲಿನ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ಅಂಡ್ ಟೆಕ್ನಾಲಜಿ ಫೈನಲ್ ಇಯರ್ ಬಿಇ ಕಂಪ್ಯೂಟರ್ ಸೈನ್ಸ್ (ಡೇಟಾ ಸೈನ್ಸ್) ವಿಭಾಗದಲ್ಲಿ 9.48 cgpa ಅಂಕಗಳೊಂದಿಗೆ ಉತ್ತಮ ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೆಯ ರ‍್ಯಾಂಕ್‌ ಪಡೆದಿರುತ್ತಾರೆ.

ಇವರು ವಿಟ್ಲ ಐ ಟಿ ಐ ಸುಪ್ರಜೀತ್ ಕಾಲೇಜಿನ ನಿವೃತ ಪ್ರಾಂಶುಪಾಲರಾದ ಕೆ ರಘುರಾಮ ಶಾಸ್ತ್ರಿ ಹಾಗೂ ಸ್ವರ ಸಿಂಚನ ಸಂಗೀತ ಶಾಲೆ ಶಿಕ್ಷಕಿ ಸವಿತಾ ಕೊಡಂದೂರು ಅವರ ಪುತ್ರಿ. ಡಾ .ಸಚಿನ್ ಸುಬ್ರಮಣ್ಯ ಕೊಡಂದೂರು ಅಣ್ಣನ ಪ್ರೋತ್ಸಾಹ , ಕುಮಾರ್ ಪೆರ್ನಾಜೆ ಸ್ವರ ಸಿಂಚನ ಕಲಾತಂಡದ ಅರಳು ಪ್ರತಿಭೆಯಾಗಿದ್ದು. ಭರತನಾಟ್ಯ ಸಂಗೀತಕ್ಕೂ ಸೈ. ಎನಿಸಿ ತನ್ನ ಕಲಾ ಪ್ರೌಡಿಮೇಯನ್ನು ಮೆರೆದಿದ್ದಾರೆ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ .ಕಲ್ಲಡ್ಕ ಪ್ರಭಾಕರ್ ಭಟ್ ಆಡಳಿತ ಮಂಡಳಿಯ ಅಧ್ಯಕ್ಷರು ಸಂಚಾಲಕರು ನಿರ್ದೇಶಕರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹೇಶ್ ಪ್ರಸನ್ನ ಕೆ ಅವರ ಮುಂದಾಳತ್ವದಲ್ಲಿ ಡೇಟಾ ಸೈನ್ಸ್ ವಿಭಾಗದ ಮುಖ್ಯಸ್ಥೆ ಪ್ರೊ ರೂಪ ಜಿಕೆ ಹಾಗೂ ಪ್ರಾಧ್ಯಾಪಕರ ಸಮರ್ಥ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಇವರನ್ನು ಅಭಿನಂದಿಸಿದ್ದಾರೆ.